ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರು ಕಾದಂಬರಿಗಳು / ಗಂಡಸರು
ನಿನಗೆ ಗೊತ್ತೇ ಇಲ್ಲವಲ್ಲ . ನಾನು ಸ್ವತಂತ್ರ ಪಾರ್ಟಿಯ ಮೆಂಬರ್ . . ಅಂಧೇರಿಯಲ್ಲಿ ದೊಡ್ಡ ಅಫೀಸ್ ಇದೆ ಈ ಪಾರ್ಟಿಯದು. ನೂರಾರು ತರುಣ ತರುಣಿಯರು ಮೆಂಬರುಗಳಾಗಿದ್ದಾರೆ . ನಮ್ಮದೊಂದು ಸಾಪ್ತಾಹಿಕ ಪತ್ರಿಕೆ ಕೂಡ ಇದೆ ಹಿಂದಿಯಲ್ಲಿ - "ಕ್ರಾಂತಿ " ಅಂತ . ಪಾರ್ಟಿಯ , ಪತ್ರಿಕೆಯ ಇಡೀ ಮೂವ್ಮೆಂಟ್ನ ಹೆಡ್ ನಮ್ಮ ಲೀಡರ್ , ಜಾನ್ ಅಶೋಕ ಕುಮಾರ್ . ಓ ! ಅವರು ಒಬ್ಬ ಅದ್ಬುತ ವ್ಯಕ್ತಿ ! ನೀವು ಅವರನ್ನು ನೋಡಲೇ ಬೇಕು . ಇವತ್ತು ಬಾ ನನ್ನ ಕೂಡ .ಬರುತ್ತೀಯಾ ? " ಜಾನ್ ಅಶೋಕ ಕುಮಾರ್ ? ಇದೆಂಥ ಹೆಸರೇ ?" - ಅಂತ ಶಾಂತಿ ನಕ್ಕಾಳು . ಆ ದೊಡ್ಡ ಮನುಷ್ಯನ ಹೆಸರಿನ ಬಗ್ಗೆ ತಾನು ಹಗುರವಾಗಿ ನಕ್ಕದು ಲೂಸಿಗೆ ಸೇರಲಿಲ್ಲವೆಂದು ಆಕೆಗೆ ತಕ್ಷಣ ತಿಳಿಯಿತು . "ಒಂದು ತಲೆಮಾರಿನ ಹಿಂದೆಯಷೇ ಅವರು ಮತಾಂತರ ಹೊಂದಿದ್ದು . ಮೊದಲು ಹಿಂದುವಾಗಿದ್ದಾಗ ಷೆಡ್ಯೂಲ್ಡ್ ಕಾಸ್ಟ ಗೆ ಸೇರಿದ್ದರು . ಈಗ ಕ್ರಿಶ್ಚಿಯನ್ ಆದರೂ ಅವರ ವ್ಯಕ್ತಿತ್ವ ಅಂದರೆ ಹಿಂದೂ ಕ್ರಿಶ್ಚಿಯನ್ ಎರಡೂ ಸಂಸ್ಕೃತಿಗಳ ಅಪೂರ್ವ ಸಂಗಮ . ಅವರ ಆದರ್ಶವೂ ಅದೇ - ಪೂರ್ವ ಹಾಗು ಪಶ್ಚಿಮದ ಸಾಂಸೃತಿಕ , ಭಾವನಾತ್ಮಕ , ರಾಜಕೀಯ ,ಸಮನ್ವಯ ಸಾದಿಸುವುದು . ನೀನು ಒಮ್ಮೆ ನೋಡಿದರೆ ಸಾಕು ಅವರನ್ನು , ತುಂಬ ಪ್ರಭಾವಿತನಾಗಿಬಿಡುತ್ತೀಯ . ಅವರ ಪೆರ್ಸನಾಲಿಟಿನ್ ಹಾಗೆ . " " ಸರಿ , ನನಗೊಂದು ಕೆಲಸ ಸಿಗುವುದಾದರೆ ನಿನ್ನ ಕೂಡ ಬಂದು ಅವರನ್ನು ನೋಡಲಡ್ಡಿಯಿಲ್ಲ ." * * * "ಕ್ರಾಂತಿ " ಪತ್ರಿಕೆಗೆ ಮುಂಬೈಯ ಪೂರ್ವ ವಿಭಾಗದ ಸುದ್ದಿ ವರದಿಗಾರಳಾಗಿ ಸೇರಿದೆ ನಂತರ ಶಾಂತಿಗೆ ದಿನವಿಡೀ ಮೈತುಂಬ ಕೆಲಸ . ದಿನಕಳೆದಂತೆ ಆ ಪಾರ್ಟಿಯ ವ್ಯಾಪ್ತತ ಅವಳಿ ಅಚ್ಚರಿಯು೦ಟು ಮಾಡುತ್ತಿತ್ತು ." ಕ್ರಾಂತಿ " ಆಕೆ ಮೊದಲು ತಿಳಿದಿದ್ದಂತೆ ಸರಕಾರಕ್ಕೆ ವಿರುದ್ದವಾದ ಧೋರಣೆಯುಳ್ಳ ಪತ್ರಿಕೆಯಾಗಿರಲಿಲ್ಲ . ಜಾನ್ ಅಶೋಕ್ ಕುಮಾರನೇನೋ ಕಳೆದ ಹಲವು ವರ್ಷಗಳಿಂದ ಸತತವಾಗಿ ಸ್ವತಂತ್ರ ಪಕ್ಷದಿಂದ ಚುನಾವಣೆಗೆ ನಿಂತು ಆರಿಸಿ ಬರುತ್ತಲಿದ್ದ. ಸ್ವತಂತ್ರ ಪಕ್ಷದ ದಕ್ಷ ಕೆಲಸಗಾರನೆಂಬ ಖ್ಯಾತಿಯೂ ಅವನದಿತ್ತು . ಆದರೆ ಆತನ ಕಾರ್ಯವ್ಯಾಪ್ತಿ ಬರಿಯ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ . ಪಾರ್ಟಿಯ ವತಿಯಿಂದ ಅಂಧೇರಿಯಲ್ಲಿ ಆತನೊಂದು ಅಬಲಾಶ್ರಮ ನಡೆಸುತಿದ್ದ . ಬಡಹುಡುಗರಿಗಾಗಿ ಒಂದು ರೆಸಿಡೆನ್ಸಿಯಲ್ ಪ್ರೈಮರಿ ಸ್ಕೂಲನ್ನೂ ನಡೆಸುತ್ತಿದ್ದ . ಮೂಲತಃ ಆತ