ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳ್ಳುಗಳು / ಅತಿಥಿ
೩೧

ವಿಚಾರಗಳು ಬಂದು ಕಾಡುವವೋ ಎನ್ನಿಸಿತು ಪ್ರೊ.ಲೀಲಾವತಿಗೆ.ಈ ಚೆಲ್ಲು
ಹುಡುಗಿಯ ಕೊನೆಯಿಲ್ಲದ ನಗೆ-ಹರಟೆಯಿಂದಲಾದರೂ ತನ್ನ ಬೇಸರ ಸ್ವಲ್ಪ
ಕಡಿಮೆಯಾದೀತು...
"ಕೊಡ್ತೀನಿ ಕೂತರs ಕೂಡ್ರೆಲಾ,ಅಂಥಾದೇನವಸರ?ಅಂಧಾಂಗ ಎಲ್ಲಾರೂ
ಬರತಾರಂತೇನು ನಾಳೆ?"
ಅನಿವಾರ್ಯವಾಗಿ ಕೂಡಬೇಕಾಯಿತು ಊರ್ಮಿಲಾ.ವಾರ್ಡನ್ ರ ಪ್ರಶ್ನೆಗೆ,
ಆವರೇನು ತಿಳಿದುಕೊಂಡಾರೆಂಬ ಭಯದಿಂದ,'ಹೌದು' ಎಂದು ಸುಳ್ಳು ಉತ್ತರ
ಹೇಳುವಷ್ಟು ಅಂಜುಬುರುಕಿಯಾಗಿರಲಿಲ್ಲ ಆಕೆ;
'ಛೇ,ಇಲ್ರೀ,ನಾವು ಯಂಗ್ ಗ್ರುಪ್ ಇದ್ದೀವಲಾ,ಬರೇ ಜ್ಯೂನಿಯರ್ಸು
ಅಷ್ಟೆs ಮಂದಿ ಹೋಗವ್ರು.ಆ ಮುದುಕ ಪ್ರೊಫೆಸರ್ಸು ಜೋಡೀ ಇದ್ದರ ಪಿಕ್ನಿಕ್
ಎಲ್ಲಾ ಸಪ್ಪಗಾಗತದ."
ಇದ್ದುದನ್ನು ಇದ್ದಂತೆ ಹೇಳಿದ್ದಳು ಆಕೆ.ಆದರೂ ತನಗೇಕೆ ಸಿಟ್ಟು ಬರಬೇಕು?
ಈ ಗಂಡುಹುಡುಗಿಯ ಮೇಲೆ ಸಿಟ್ಟಾಗಿ ನಡೆಯುವುದೂ ಇಲ್ಲ.
"ಹೌದೌದು,ಖರೆ"-ಎಂದು ತಾನೂ ನಗಲು ಪ್ರಯತ್ನಿಸಿದಳು ಪ್ರೊ.
ಲೀಲಾವತಿ.ನಾಳೆ ಆ ಹುಡುಗರಂತಿರುವ ಲೆಕ್ಚರರುಗಳೊಂದಿಗೆ ಊರ್ಮಿಲಾ ಪಿಕ್ನಿಕ್ಕಿಗೆ
ಹೋಗಿ ಎಲ್ಲೆಲ್ಲಿ ತಿರುಗಬಹುದು, ಏನೇನು ಮಾಡಬಹುದು ಎಂದೆಲ್ಲ
ಕಲ್ಪಿಸುತ್ತಿರುವಂತೆ ಎದೆನೋವು ಮತ್ತೆ ಜಾಸ್ತಿಯಾದಂತೆನಿಸಿತು ಆಕೆಗೆ.
"ಅಂದ್ಹಾಂಗ ಮ್ಯಾಡಂ, ನೀವು ಇವತ್ತಿನ ತಾಜಾಖಬರ್ ಕೇಳೀರೇನು? ಆ
ನಿಮ್ಮ ಸರೋಜಿನಿಯ ರೋಮಿಯೋನ ಕಥಿ?"
-ಊರ್ಮಿಲಾನ ಧ್ವನಿಯಲ್ಲಿನ ಉತ್ಸಾಹ ನೋಡಿದರೆ ಇದೇನೋ ಮಹತ್ವದ
ಸುದ್ದಿಯೇ ಅನಿಸುತ್ತದೆ! "ಸರೋಗಿನಿ ದೇಶಪಾಂಡೇನ ಸುದ್ದಿ ಏನು ? ಆಕೀ
ರೋಮಿಯೋಗೇನಾತು? ಮತ್ತೆನು ಎಲ್ಲೆರs ಬ್ಯಾರೇ ಹುಡುಗೀನ್ನ ಲಗ್ನಾ
ಮಾಡಿಕೋತಾನಂತೇನು?"
_ಏನೂ ಗೊತ್ತಿಲ್ಲದೇ ಇದ್ದರೂ ಈ ಪ್ರಶ್ನೆಯೇಕೆ ಬಂತು ತನ್ನಿಂದ ಎಂದು
ಒಂದು ಕ್ಷಣ ಆವಲಳಿಗೇ ಆಶ್ಚರ್ಯವಾಯಿತು. ಇದೇ ಸತ್ಯವಾಗಿದ್ದರೆ_ಎಂಬ ಆಶೆಯೂ
ಮಿಂಚಿ ಹೋಯಿತು.
ಊರ್ಮಿಲಾ ಹುರುಪಿನಿಂದ ಹೇಳುತ್ತಿದ್ದಳು ,"ಛೇ ಅಂವಾ ಲಗ್ನಾ_ಗಿಗ್ನಾ
ಮಾಡಿಕೊಳಳ್ಳೋ ಮನುಷ್ಯನೇ ಅಲ್ಲ ಬಿಡ್ರಿ. ಬರೇ ಹಿಂಗ ಮಜಾ ಮಾಡಿಕೊತ
ತಿರಗತಾನ ಯರ್ನ ಯಾಕ ಲಗ್ನಾಗತಾನ? ಆಂವಾ ಇನ್ನು ಸಣ್ಣಾಂವ ಇದ್ದಾಗನs