ಪುಟ:ನಡೆದದ್ದೇ ದಾರಿ.pdf/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೪ ನಡೆದದ್ದೇ ದಾರಿ

 ಎಲ್ಲದಕ್ಕೂ ಅರ್ಥವಿರಬೇಕೆಂದಾದರೂ ಏಕೆ ಅಪೇಕ್ಷೀಸಬೇಕು? ಅರ್ಥ-ಅನರ್ಥ,ಸರಿ-ತಪ್ಪು,ಒಳ್ಳೆಯದು-ಕೆಟ್ಟದ್ದು ಈ ಶಬ್ದಗಳೆಲ್ಲ ಒಮ್ಮೆಲೆ ಅರ್ಥ ಕಳೆದುಕೊಂಡಿವೆ.....
       ಖಂಡಾಲಾದಿಂದ ತಿರುಗಿ ಕಾರಿನಲ್ಲಿ ಹೊರಟಾಗ ಶಾಂತಿತಯ ತಲೆ ಪೂರಾ ಖಾಲಿಯಾಗಿತ್ತು.ದಾರಿಯುದ್ದಕ್ಕೂ ಆಕೆ ಏನೂ ಮಾತಾಡಲಿಲ್ಲ.ಜ಼ಾನ್ ಸುಮ್ಮನೇ ಡ್ರೄವ್ ಮಾಡುತ್ತಿದ್ದ.ಆಗಾಗ ಆತನ ಎಡಗ್ಯೀ ಆಕೆಯ ಭುಜ,ಬೆನ್ನು,ತಲೆ,ಎದೆ ಸವರಿಕೊಂಡು ಹೋಗುತ್ತಿತ್ತು.ದೂರದಿಂದ ಮುಂಬೈ ಕಾಣತೊಡಗಿದಾಗ ಆತ ರೋಡಿನ ಮೇಲೆಯೇ ದೃಷ್ಟಿ ನೆಟ್ಟಿದ್ದಂತೆ ಇದ್ದಕ್ಕಿದ್ದಂತೆ ಕೇಳಿದ,"ಶಾಂತೀ,ನನ್ನನ್ನು ಮದುವೆಯಾಗುತ್ತೀಯಾ?ಅಂದ್ರೆ-ಒತ್ತಾಯವಿಲ್ಲ."
       ಏನೂ ಹಿಂದು-ಮುಂದು ನೋಡದೆ ತಲೆಕೊಡಹಿ ಆಕೆ ಉತ್ತರಿಸಿದಳು,"ಓ ಯಸ್,ಆಲ್ರಿತೆ."
                       * * *
       ಮುಂದೆ ಎಂಟು ದಿನಗಳ ನಂತರ ಒಂದು ಸಂಜೆ ಶಾಂತಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಾಗಿಲು ಗಂಟೆ ಬಡಿದುಕೊಂಡಿತು.ಕಸಪೊರಕೆಯನ್ನು ಅಲ್ಲೇ ಚೆಲ್ಲಿ ಎತ್ತಿ ಸಿಕ್ಕಿಸಿದ್ದ ಸೀರೆಯನ್ನು ಕೆಳೆಗೆ ಇಳಿ ಬಿಟ್ಟು ಆಕೆ ಬಾಗಿಲು ತೆರೆದಳು.‍‍ಜ಼ಾನ್ ಬಂದಿದ್ದ ಕಾರು ತೆಗೆದುಕೊಂಡು.
       "ಹಲೋ ಡಾರ್ಲಿಂಗ್,ಏನ್ಮಾಡ್ತೀದ್ದಿಯಾ?"ಅಂತ ಅವಳನ್ನು ಅಂಟಿಕೊಂಡೋ ಒಳಗೆ ಬಂದ.ಅವಳು ನಡೆಸಿದ್ದ  ಕೆಲಸ ನೋಡಿ,"ಶಾಂತಿ,ನಾ ಇವೊತ್ತು ನಿನಗೊಂದು ಸಲಹೆ ಕೊಡೋಕೆ ಬಂದೆ"ಅಂದ ಅನುಮಾನಿಸುತ್ತ.
        ಅವನಿಂದ ಬಿಡಿಸಿಕೊಳ್ಳುತ್ತ ಕೂದಲು ಸರಿಪಡಿಸಿಕೊಳ್ಳುತ್ತ ಆಕೆ"ಏನದು?"ಅಂದಳು.
        "ನಾನೀಗ ಎಲೆಕ್ಷನ್ ಗಡಿಬಿಡೀಲಿರೋದ್ರಿಂದ ಅನಿವಾರ್ಯವಾಗಿ ನಮ್ಮ ಮದುವೇನ ಮೂರು ತಿಂಗಳು ಮುಂದೆ ಹಾಕಬೇಕಾಗಿದೆ."
        "ನಾಯೆಲ್ಲಿ ಈ ಸಧ್ಯಾ ಲಗ್ನಾಗೋಣ ಅಂತ ಅವಸರಾ ಮಾಡಿದೆ?"
        "ನೀನ್ಮಾಡ್ಲಿಲ್ಲ.ಆದ್ರೆ ನನಗನಿಸುತ್ತೆ...."
        "ಏನನಸ್ತದ ಹೇಳಲಾ?"-ಆತ ಅನುಮಾನಿಸುವ ರೀತಿ ಆಕೆಗೆ ಹೊಸದು.
        "ನೀನು ಈಗ್ಲೇ ಬಂದು ನನ್ನ ಮನೇಲಿ ಯಾಕಿರಬಾರದು?ಅಂದ್ರೆ-ಒತ್ತಾಯವಿಲ್ಲ."
        "ಓ ಯಸ್,ಆಲ್ರಿಘ್ತ್."
        "ಗುಡ್ ಗರ್ಲ್" ಅಂತ ಆತ ಆಕೆಯನ್ನು ಪುನಃ ತಬ್ಬಿಕೊಂಡ.ಆಕೆಯ