ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದ೦ಬರಿಗಳ / ಗ೦ಡಸರು ೩೭೫
ಪ್ರತಿಕ್ರಿಯೆ ಅನುಕೂಲವಾಗಿದ್ದು ತಿಳಿದು ಎರಡೂ ಕೈಗಳಲ್ಲೂ ಆಕೆಯನ್ನು ಎತ್ತಿಕೊಂಡು ಬಳಿಯಲ್ಲೇ ಇದ್ದು ದೀವಾನ್ ಮೇಲೆ ಮಲಗಿಸಿದ."you are a wonderful woman !"ಅನ್ನುತ್ತ ಆಕೆಗೆ ಅಂಟಿಕೊಂಡ. -ಹದಿನೈದು ನಿಮಿಷಗಳು ನಂತರ ಆಕೆ ಇನ್ನೂ ಹಾಗೇ ಮಲಗಿದ್ದಾಗ ಆತ ಎದ್ದು ಬಟ್ಟೆ ಹಾಕಿಕೊಂಡು ಅವಳ ಬಳಿಯಲ್ಲೇ ಕೂತು ಅವಳ ಕೈ ತನ್ನ ಕೈಗಳಲ್ಲಿ ತೆಗೆದುಕೊಂಡು ಮೃದುವಾಗಿ ಕೇಳಿದ. "ಶಾಂತಿ,ಮದುವೆಗೆ ಮುಂಚೇನೇ ನೀನು ಬಂದು ನನ್ನ ಜೊತೇಲೆರೂಂತ ಕೇಳಿದೆ ಅಂತ ಬೇಸರವೆ? ನಿನಗೆ ಒತ್ತಾಯ ಮಾಡುವುದಿಲ್ಲ ನಾನು. ಪ್ರತಿಯೊಬ್ಬರ ಭಾವನೆಗಳನ್ನೂ,ವಿಚಾರಗಳನ್ನೂ ನಾವು ಗೌರವಿಸ್ಬೇಕು ಅಲ್ವಾ ? ಒತ್ತಾಯ,ಅದೂ ಇoಥ ವಿಷಯದಲ್ಲಿ -ಬರೀ ಬ್ರೂಟಾಲಿಟಿ ಆಗುತ್ತೆ." "ನನಗ್ಯಾಕ ಬ್ಯಾಸರಾಗ್ಬೇಕು ಜಾನ್ ? ಆದ್ರೂ ನೀ ನನ್ನ feelings ಗೆ ಇಷ್ಟು care ಮಾಡ್ತೇಯಲ್ಲಾ ಅಂತ ಖುಶಿ ನನಗ. ವಿಚಾರಗಳ ವಿಷಯದಾಗ,ಭಾವನೆಗಳ ವಿಷಯದಾಗ,ಪ್ರತಿಯೊಬ್ಬರಿಗೂ ಪೂರಾ ಸ್ವಾತಂತ್ರ್ಯ ಇರಬೇಕು ಅಂತ ನಿನಗ ಹ್ಯಾಂಗ ಅನಸ್ತದ ನೋಡು,ನನಗೂ ಮೊದಲಿನಿಂದಲೂ ಹಂಗ ಅನಸ್ತದ.ಹೆಚ್ಚಾಗಿ ಗಂಡಸ್ರಿಗೆ ಹಿಂಗನ್ಸೋದು ಕಮ್ಮಿ,ಅದಕ್ಕೆ ನನಗ ನಿನ್ನ ಮ್ಯಾಲ-"ಆಕೆ ಒಮ್ಮೆಲೆ ಎದ್ದು ಆತನನ್ನು ಅಪ್ಪಿಕೊಂಡು ಆತನ ಕಿವಿಯಲ್ಲಿ ಉಸಿರಿದಳು. "ನನಗನಸ್ತದ ಜಾನ್, i have started loving you,ಜೀವನದಾನ ಮೊದಲನೇ ಸರೆ ಖರೇ ಅರ್ಥದಾಗ ಪ್ರೀತಿ ಮಾಡ್ಲಿಕ್ಹತ್ತೀನಿ." * * * ರಾತ್ರಿ ಹನ್ನೆರಡೂವರೆಗೆ ತೂರಾಡುತ್ತ ಮೆಟ್ಟಲೇರಿ ಮೇಲೆ ಬಂದ ಜಾನ್ ಗೆ ಆಸರೆ ಕೊಡಲೆಂದು ಓದುತ್ತ ಕೂತಿದ್ದ ಶಾಂತಿ ತಟ್ಟನೆ ಎದ್ದು ಬಂದಾಗ ಬ್ರ್ಯಾಂಡಿಯ ವಾಸನೆ ಅವಳ ಮೂಗಿಗೆ ಭಸ್ ಎಂದು ಹೊಡೆಯಿತು. ಕೋಟು,ಟೈ,ಪ್ಯಾಂಟ್ ತೆಗೆದಿರಿಸಲು ಆತನಿಗೆ ಸಹಕರಿಸುತ್ತ ಆಕೆ ಕೇಳಿದಳು,"ಊಟ ಮಾಡ್ತೀಯಾ ಜಾನ್ ?" "ಊಟ ?ಹ್ಞಾ ಹ್ಞಾ,ಮಾಡ್ತೀಯಾ,ಎವೊತ್ತು ನನಗೆ human flesh ಬೇಕು ತಿನ್ನಲಿಕ್ಕೆ "-ಅಂತ ಗಟ್ಟಿಯಾಗಿ ಹುಚ್ಚುಚ್ಚಾಗಿ ನಗುತ್ತ ಅವಳನ್ನು ತನ್ನತ್ತ ಎಳೆದುಕೂಂಡನು. ಆತನ ಹಿಡಿತದಲ್ಲಿ ವಿಲಕ್ಷಣ ಪಾಶವೀಯತೆಯ ಅನುಭವವಾಯಿತು ಆಕೆಗೆ.ಬಿಡಿಸಿಕೊಳ್ಳಲು ಹೆಣಗಿ ನಂತರ ಅದು ವ್ಯರ್ಥವೆಂದು ತಿಳಿದು ಆಕೆ ಸುಮ್ಮನಾದಳು. ಸುಮಾರು ನಸುಕಿನ ಮೂರು ಗಂಟೆಯ ಹೊತ್ತಿಗೆ ಜಾನ್ ಗೆ ಎಚ್ಚರವಾಯಿತು. ಮಬ್ಬು ಇಳಿದಿತ್ತು. ಕೂಡಲೇ ಆತ ಪಕ್ಕಕ್ಕೆ ತಿರುಗಿ ಗಾಢ ನಿದ್ರೆಯಲ್ಲಿದ್ದ ಶಾಂತಿಯನ್ನು