ಕಿರುಕಾದಂಬರಿಗಳು/ಗಂಡಸರು
ಒಂದು ಮಧ್ಯಾಹ್ನ ಮಾತುಂಗಾದ ಕಡೆ ಹೊರಟ ಸದಸ್ಯರುಗಳಲ್ಲಿ
ಒಬ್ಬನಾದ ಬಂಗಾಲಿ ಹುಡುಗ ಸತೀಶ ಬ್ಯಾನಜ್ರಿ ಶಾಂತಿಗೆ ಕೇಳಿದ, "ಬರುತ್ತಿರಾ ನಮ್ಮ ಜೊತೆಗೆ ? ನೀವು ತುಂಬ ಚೆನ್ನಾಗಿ ಮಾತಾಡುತ್ತೀರಿ - ನಿಮ್ಮಾ ಮಾತು ಕೇಳಿದವರೆಲ್ಲ ನಮ್ಮ ಪಾಟ್ರೀಗೇ ಮತ ಕೊಡುವುದು ಖಂಡಿತ." ಕೂತು ಬೇಸರವಾಗಿದ್ದ ಆಕೆ ಒಮ್ಮೆಲೆ ಒಪ್ಪಿದಳು.ಆಕೆ ಎದ್ದು ಹೊರಗೆ ಬಂದಾಗ, ಆಫೀಸಿನ್ ಜೀಪು ಎದುರಿಗೆ ನಿಂತಿತ್ತು. ಆಕೆಯನ್ನು ಕಂಡೊಡನೆ ಮುಂದಿನ ಸೀಟಿನಲ್ಲಿ ಕೂತವರಿಬ್ಬರು ಎದ್ದು ಹಿಂದೆ ಹೋದರು. ಡ್ರೈವರ್ ನ ಪಕ್ಕದಲ್ಲಿ ಬ್ಯಾನರ್ಜಿ ಕೂತ. ಬ್ಯಾನರ್ಜಿಯ ಪಕ್ಕದಲ್ಲಿ ಶಾಂತಿ ಕೂತೊಡನೆ ಜೀಪು ಹೊರಟಿತು.
- ಸಂಜೆ ತಿರುಗಿ ಅವರೆಲ್ಲ ಆಫೀಸಿಗೆ ಬಂದಾಗ ಉಳಿದವರೆಲ್ಲ ಆಗಲೇ
ಬಂದಿದ್ದರು.ಜಾನ್ ಅಲ್ಲೇ ಶತಪಥ ತಿರುಗುತ್ತಿದ್ದ. ಜೀಪ್ ನಿಂದ ಶಾಂತಿ ಇಳಿದೊಡನೆ ಆತ ಕಟುವಾಗಿ ಕೇಳಿದ."ನಿನಗ್ಯಾರು ಕ್ಯಾನವ್ಹಾಸ್ ಮಾಡ್ಲಿಕ್ಕೆ ತಿರುಗು ಅಂತ ಹೇಳಿದವರು?" ಆತ ಇಂಗ್ಲಿಶ್ ನಲ್ಲೇ ಮಾತಾಡಿದ್ದರಿಂದ ಸುತ್ತಲಿದ್ದವರೆಲ್ಲ ಒಂದು ಕ್ಶಣ ಆಪ್ರತಿಭರಾದರು. ಶಾಂತಿ ಮಾತಾಡುವ ಮೊದಲೇ ಬ್ಯಾನರ್ಜಿ ನಮ್ರನಾಗಿ ಹೇಳಿದ. "ನಾನೇ ಬನ್ನಿರಿ ಅಂತ ರಿಕ್ವೆಸ್ಟ್ ಮಾಡಿದೆ."
"ಯೂ ಶಟಪ್ " ಅಂತ ಜಾನ್ ಗುಡುಗಿದಾಗ ಶಾಂತಿಗೆ ತಡೆಯಲಾಗಲಿಲ್ಲ.
ಆಕೆ ಮುಂದೆ ಬಂದು ನೇರವಾಗಿ ಆತನನ್ನೇ ನೋಡುತ್ತ ಕೇಳಿದಳು."ನಾ ಹೋದರ ಏನಾತು ಒಂದಿನಾ ? ಎಲ್ಲಾರೂ ಹೋಗೋದಿಲ್ಲೇನು ? ನಾನೂ ಪಾರ್ಟಿಯ ಮೆಂಬರ್ ಅಲ್ಲೇನು ?"
" ಪಾರ್ಟಿಯ ಮೆಂಬರು ಹೊವ್ ದು ಆದರೆ ಅದಕಿಂತ ಹೆಚ್ಚಾಗಿ ನೀನು ಇನ್ನೇರಡು
ತಿಂಗಳಲ್ಲಿ ನನ್ನ್ ಹೆಂಡತಿ ಆಗುವವಳು" ಆತ 'ಹೆಂಡತಿ ' ಶಬ್ದ ಉಚ್ಚರಿಸಿದ ರೀತಿಯಿಂದ ಶಾಂತಿಗೆ ಒಮ್ಮೆಲೇ ಯಾರೋ ತನ್ನ ಮೈಮೇಲೆಲ್ಲಾ ಹೊಲಸು ನೀರೆರಚಿದಂತೆನಿಸಿತು.ಆಕೆ ವ್ಯಗ್ರಳಾಗಿ ಆತನ ಕಡೆ ತಿರುಗಿ ತಲೆಯೆತ್ತಿ ನೋಡಿದಳು. ಜಾನ್ ಆಕೆಗೆ ತೀರ ಹೊಸಬನಾಗಿ ಕಾಣಿಸಿದ.ಈ ಅಸಹನೆ,ಈ ಸಂತಾಪ ಆತನಲ್ಲಿ ಆಕೆ ಮೊದಲೆಂದೂ ನೋಡಿರಲಿಲ್ಲ.ಕ್ಶಣಕಾಲ ಆಕೆಗೆ ಆಶ್ಚರ್ಯವಾಗಿ ಹಾಗೇ ಅವನನ್ನು ನೋಡುತ್ತಾ ನಿಂತಳು. ಮರುಕ್ಶಣ ಆತ ಉಳಿದವರ ಕಡೆ ತಿರುಗಿ, "ಎಕ್ಸ್ ಕ್ಯೂಜ್ ಮಿ, ನನಗಿವತ್ತು ಮೈ ಸರಿಯಿಲ್ಲ,ನಾನು ಮನೆಗೆ ಹೋಗಬೇಕು" ಅಂದವನೇ ಶಾಂತಿಯ ಕೈಹಿಡಿದು ಎಳೆದುಕೊಂಡೇ ಕಾರಿನ ಕಡೆ ನಡೆದ. ದಿನಾ ಸಂಜೆ ಎಲ್ಲರೂ ಆಫೀಸಿನಲ್ಲಿ ಸೇರಿದಾಗ ಜಾನ್ ಎಲ್ಲ ರೊಂದಿಗೆ ಸಮಾಲೋಚಿಸಿ