೩೮೦ ನಡೆದದ್ದೇ ದಾರಿ ಮದುವೆಗೆ ಇನ್ನೂ ನಾಲ್ಕು ದಿನ ಇದ್ದಾಗ ಒಂದು ಸಂಜೆ ಜಾನ್ ಬಹಳ ಉತ್ಸಾಹದಿಂದ ಮನೆಗೆ ಬಂದ.ಶಾಂತಿಯನ್ನು ಅಪ್ಪಿ ಚುಂಬಿಸಿನಡೆ ಡಾರ್ಲಿಂಗ್, ಶಾಪಿಂಗ್ ಗೆ ಹೋಗ್ಬರೋಣ.ಇನ್ನು ನಾಲ್ಕೇ ದಿನ.ಎಲ್ಲ ಪ್ರಿಪರೇಶನ್ ಮಾಡ್ಡೋಬೇಕುಅಂದ. ಪ್ರಿಪರೇಶನ್ ಎಂಥಾದ್ದು?ಇದೇನ್ನು ಮಂಟಪ ಕಟ್ಟಿ ಶಹನಾಯಿ ಬಾರಿಸಿ ಮಾಡಿಕೂಳ್ಳೋ ಲಗ್ನ ಅಲ್ಲಲ್ಲ.ಸಿಂಪಲ್ ಆಗಿ ಮುಗಿಸಬೇಕು.ಆಮ್ಯಾಲ ಒಂದು ಪಾರ್ಟಿ ಕೊಟ್ರಾತು ಆಫ಼ೀಸಿನ ಮಂಡದೀಗೆಲ್ಲ"-ಅಂದಳು ಶಾಂತಿ.ಯಾಕೋ ಅವಳಿಗೆ ಇತ್ತಿಚೆಗೆ ಎರಡು ಮೂರು ದಿನ ತುಂಬ ಮಾನಸಿಕ ಅಸ್ವಸ್ಥತೆಯೆನಿಸತೊಡಗಿತ್ತು.ಎಂದು ಇಲ್ಲದೆ ಈಗ ಒಮ್ಮೆಲೆ ಅಮ್ಮನ ನೆನಪಾಗಿ ಅಳು ಬರುವಂತಾಗತೊಡಗಿತ್ತು.
"ಹೌದೌದುಒ.ಆದ್ರೂ ಸ್ವಲ್ಪನಾದ್ರೂ ಅದ್ದೇ ಇರುತ್ತಲ್ಲ formal ಆಗಿ?"
-ಜಾನ್ ಅನುಮಾನಿಸುತ್ತಿದ್ದಂತೆ ತೋರಿತು.ಯಾವಾಗಲು ಖಡಾಖಂಡಿತವಾಗಿ, ತೀರ ಸ್ಪಷ್ಟವಾಗಿ,ಆಜ್ನಾಪಿಸುವ ಧ್ವನಿಯಲ್ಲೇ ಎಲ್ಲರೊಂದಿಗೂ ಮಾತಾಡುತ್ತಿದ್ದ ಜಾನ್ ಅಕಸ್ಮಾತ್ತಾಗಿ ಒಮ್ಮೊಮ್ಮೆ ಹೀಗೆ ಅನುಮಾನಿಸುವುದನ್ನು ನೋಡಿದರೆ ಶಾಂತಿಗೆ ಹೇಗೋ ಅನಿಸುತ್ತಿತ್ತು. ಆಕೆ ಎದ್ದು ಕನ್ನಡಿಯೆದುರು ನಿಂತು ಕೂದಲು ಬಾಚಿಕೊಳ್ಳುತ್ತಿದ್ದಾಗ ಜಾನ್ ಅವಳ ಹಿಂದೆ ಬಂದು ನಿಂತು ಅವಳ ಕೊರಳು ಚುಂಬಿಸಿ ಆತನಿಗೆ ಅಸ್ವಾಭಾವಿಕವೆನಿಸುವಷ್ಟು ಮೃದುವಾದ ಧ್ವನಿಯಲ್ಲಿ ಹೇಳಿದ."ನಾಳೆ ಬೆಳೆಗ್ಗೆ ಸ್ವಲ್ಪ ಚರ್ಚ್ ಗೆ ಹೋಗ್ಬೇಕು ಶಾಂತಿ,"
"ಚರ್ಚ್ ಗೆ?"ಆಕೆ ಸರ್ರ್ರನೆ ತಿರುಗಿ ಆತನನ್ನೆ ದುರಿಸಿದಳು."ಯಾಕ?ಯಾಕ?"
ಮರುಕ್ಷಣ ತನ್ನ ಆತಂಕದಿಂದ ಅವಳಿಗೆ ನಾಚಿಕೆಯಾಯಿತು.
ಆತ ಇನ್ನೂ ಮೃದುವಾಗಿಯೇ ಇದ್ದ ಧ್ವನಿಯಲ್ಲಿ ಹೇಳಿದ,"ಅಂದರೆ ಮದುವೆ
ಆಗೋ ಮೊದ್ಲು ನೀನು ಕ್ರಿಸ್ಚಿಯನ್ ಆಗಿ ಕನ್ ವ್ಹರ್ಟ್ ಆಗ್ಬೇಕು."
ಶಾಂತಿಯ ಮುಖ ಬೆಳ್ಳಗಾಗುತ್ತಿರುವುದನ್ನು ಲಕ್ಶಿಸದೆಯೇ ಆತ
ಮುಂದುವರಿಸಿದ,"ನಾನಿವತ್ತು ದೊಡ್ಡ ಚರ್ಚ್ ನಫ಼ಾದರ್ ಅವರನ್ನು ಭೇಟಿಯಾಗಿದ್ದೆ. ಬೆಳಿಗ್ಗೆ ಹತ್ತು ಗಂಟೆಗೆ ಕರ್ಕೋಂಡುಬಾ,ಎರಡು ಗಂಟೇಲಿ ಮುಗಿಸಿ ಬಿಡ್ತೀನಿ ಅಂದ್ರು. ತುಂಬ ಒಳ್ಳೆಯವ್ರು"-ಮಾತಾಡುತ್ತ ಆಡುತ್ತ ಆತನ ಧ್ವನಿಯಲ್ಲಿ ಮರಳಿ ಆತನಿಗೆ ಸಹಜವಾದ ಆತ್ಮವಿಶ್ವಾಸ,ನಿರ್ಧಾರ ಮೂಡಿದವು,"ಅಂದ್ರೆ ಇದೆಲ್ಲ ಬರೀ formality.ನೀನು ನನ್ನನ್ನು ಕೂಡಿದ್ಮೇಲೆ ನನ್ನ ಧರ್ಮವೇ ನಿನ್ನದೂ ಅಲ್ಲವೆ? ಈಗ ಮಾಡೋದು ಬರೀ ವಿಧಿ,ಅಷ್ಟೇ.ಮುಂದೆ ನಮ್ಮ ಮಕ್ಕಳನ್ನು ಸಮಾಜ outcastes ಥರಾ ಟ್ರೀಟ್ ಮಾಡ್ಬಾರದಲ್ಲ? ಏನಂತೀಯ?"