ಪುಟ:ನಡೆದದ್ದೇ ದಾರಿ.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು/ಗಂಡಸುರು ೩೮೧

     ಆಕೆಯಿಂದ 'ಓ ಯಸ್,ಆಲ್ ರೈಟ್'ನಿರೀಕ್ಷಿಸಿದ್ದ ಆತನಿಗ ಎಷ್ಟೊತ್ತಾದರೂ ಆಕೆ ಮಾತಾಡದಿರಲು ಅನುಮಾನವಾಗಿ ಆತ ಅವಳ ಸಮೀಪ ಬಂದು ಅವಳ ಭುಜದ ಮೇಲೆ ಕೈಯಿಟ್ಟ."ಶಾಂತೀ" ಅಂದ.
           ಆತನ ಕೈ ಹಾಗೇ ಇರಗೊಟ್ಟು ಆಕೆ ಧ್ವನಿಯಲ್ಲಿ ಕೇಳಿದಳು."ಜಾನ್, ನೀ ಇಷ್ಟ ದಿನ ಎಂದೂ ಇದರ ಸಲುವಾಗಿ ಏನೂ ಹೇಳೇ ಇಲ್ಲಲ್ಲ? ಈ ಮತಾಂತರ, ಚರ್ಚ,ಪಾದ್ರಿ ಇದೆಲ್ಲ ಯಾಕೆ ?ನೀನು ನಂಬುತ್ತೀಯಾ ಇದನ್ನೆಲ್ಲ?ನಾವಿಬ್ರೂ ಒಬ್ಬರಿಗೊಬ್ಬರು ಸಮೀಪ ಬಂದಾಗ ನಮಗ ಅಡ್ಡ ಆಗಲಾರದ ಧರ್ಮ ಈಗ್ಯಾಕ ಅಡ್ಡ ಆಗತದ, ಲಗ್ನದ ವ್ಯಾಳ್ಯಾಕ್ಕ? ನಾವು ಸರಳ ರಜಿಸ್ಟ್ರಾರ್ ಆಫೀಸಿಗೆ ಹುಟ್ಟಿನಿಂದ ಬಂದ ಧರ್ಮ ಅಂತನ್ನೂದು ಒಂದು ಇರೂದೇ ಖರೇ ಇದ್ದರ,ಮಾಡಿಕೊಳ್ಳುವುದು ಶಕ್ಯ ಅದನ ?ನಾ ನಂಬೂದಿಲ್ಲ ಅವನ್ನೆಲ್ಲ. ಇದು ಹುಚ್ಚು ಚ್ಚಾರ ಆನಸತದ ನನಗ."
              ಎಂದೂ ಹೆಚ್ಚು ಮಾತಾಡದಿದ್ದ ಶಾಂತಿಯ ಈ ಆಕಸ್ಮಿಕ ಮಾತಿನ ಪ್ರವಾಹಕ್ಕೆ ಮುಗ್ದನಾದಂತೆ ಕೇಳುತ್ತಲಿದ್ದ ಜಾನ್ ಆಕೆ ಮಾತು ನಿಲ್ಲಸುತ್ತಲೇ ಆಶ್ಚರ್ಯ ದಿಂದ, ಸಂಯಮ ಕಳೆದುಹೋಗದಂತೆ ಪ್ರಾಮಾಣಿಕವಾಗಿ ಪ್ರಯತ್ನಿ ಸುಯತ್ನಿಸುತ್ತ ಅಂದ,"ಶಾಂತೀ,ಈ ವಿಷಯದಲ್ಲಿ ನಾನು ನಿನ್ನ ವಿಚಾರ ಕೇಳೋಕೆ ಸಿದ್ಧನಿಲ್ಲ . ನಿನ್ನ ವಿಚಾರಗಳಿಗೆ ಅರ್ಥವೂ ಇಲ್ಲ . ಈ ವಿಚಾರದಲ್ಲಿ ನೀನು ನಾನೇಹಳಿದ್ದನ್ನು ಒಪ್ಟೋದು ನಿನ್ನ ಕರ್ತವ್ಯ ಕೂಡ . ಅಷ್ಟಕ್ಕೂ ಕನ್ ವ್ಹಟ್ ರ್ ಆದ್ರೆ ನಿಂದೇನು ಕೊಳ್ಳೇ ಹೋಗೋದು?ಕ್ರಿಸಿಚಯನ್ ಧರ್ಮ ಜಗತ್ತಿನಲ್ಲೇ ಸರ್ವಶ್ರೇಷ್ಠ ವಾದ ಧರ್ಮ."
           "ಇರಬಹುದು" ಆತನ ಕೈಕೊಡಹಿ ಶಾಂತಿ ಅಂದಳು,"ಆದರೆ ಎಲ್ಲರಿಗೂ ಅಲ್ಲ."
          "ಶಾಂತೀ !" ಜಾನ್ ನ ಧ್ವನಿ ಕೂ ಆಗಿತ್ತು:
          "ನಮ್ಮ ಧರ್ಮದ ಬಗ್ಗೆ ಹೀಗೆಲ್ಲ ಮಾತಾಡಿದ್ರೆ ಹಲ್ಮು ರೀತೀನಿ ನಿಂದು."
          ಶಾಂತಿ ವಿಸ್ಮಯದಿಂದ, ಆತನ ಧರ್ಮಭಿಮಾನದ ಬಗ್ಗೆ ಪ್ರಶಂಸೆಯಿಂದ ಆತನ ಕಡೆ ನೋಡಿದಳು.
           ಸಿಟ್ಟಿನಿಂದ ನಡುಗುತ್ತ ಆತನೆಂದ, "ಎಲ್ಲೋ ಭಿಕಾರಿ ಹಾಗೆ ಬಿದ್ದೋಳನ್ನ ಮನೇಗೆ ಕರ್ ಕೊಂಡ್ಬಂದು ಒಳ್ಳೊಳ್ಳೇ ತಿನಿಸು ಕೊಟ್ಟೆ, ಬಟ್ಟೆ ಕೊಟ್ಟೆ, ಒಡವೆ ಕೊಟ್ಟೆ, ಜೊತೆಗೆ ಮಲಗಿಸಿಕೊಂಡೆ, ಸಾಲದು ಅಂತ ಮದ್ವೆ ಬೇರೆ ಆಗ್ತಿನೀಂತ ಯಾವ್ದೋ ಹಾಳು ಗಳಿಗೇಲಿ ಮಾತು ಕೊಟ್ಟೆ, ಇವಳಿಗೆ-ಇವಳಿಗೆ ನನ್ನ ಧರ್ಮದಲ್ಲಿ ನಂಬೆಕೆ ಇಲ್ವಂತೆ.ಹಲ್ಕಾ ಮುಂಡೆ...."