ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೬ ನಡೆದದ್ದೇ ದಾರಿ ಇನ್ನ ನಿನ್ನ ಟ್ಯಾಲೆಂಟ್ ಏಕದಂ ಗೊತ್ತಾಗದ ನೋಡು ಮಂದೀಗೆ, ಒಮ್ಮೆಲೆ ಸ್ಕೂಪರ್‌ಸ್ಟಾರ್ ಆಗಿಬಿಡ್ತೀ ನೀನು. ಇನ್ನೇನು- " ಹುರುಪಿನಿಂದ ಮಾತಾಡುತ್ತಿದ್ದ ಆಕೆ ಕಮಲಾನ ಮುಖ ಇಳಿದಿದ್ದನ್ನು ಕಂಡು ಒಮ್ಮೆಲೆ ಆ ಮಾತು ನಿಲ್ಲಿಸಿ ಕೇಳಿದಳು, “ಯಾಕ ಕಮಲಾ ? ನಿನ್ನ ಜೋಡಿ ಶಿವಮೂರ್ತಿ ಬರಾರಿಲ್ಲೊ ? ಮೊದಲೇ ಸಲ ದೂರದ ಊರಿಗೆ ಹಾಂಗ ಒಬ್ಬಾಕಿ ಹೋಗೂದು ಛಲೋ ಅಲ್ಲ. ತಿರಿಗಿ ಯಾವಾಗ ಬರಾಕಿ ನೀನು ? ನೀ ಬರೂ ತನಕಾ ಮನ್ಯಾಗ ರಾಜು-ನೀಲಾ ಇಬ್ರೇ ಇಾರ ? ಹಾಂಗ ನಾ ನೋಡ್ತಿದ್ದೀನಿ ಬಿಡು ಅವನ್ನ. ಆದರ ನೀ ಎಂದ ಬರಾಕಿ ? ಕೂತರ ಕೂಡು, ಚಹಾ ಮಾಡ್ತೀನಿ." -ಒಳಗೆ ಹೊರಟ ಆಕೆಯನ್ನು ತಡೆದು ಕಮಲಾ ಸೋತ ದನಿಯಲ್ಲಿ ಹೇಳಿದಳು, “ಶಕ್ತಿ ಇಲ್ಲಿ ಕೇಳು, ಫೀಜ್, ನನಗೀಗ ಚಹಾ-ಗಿಹಾ ಬ್ಯಾಡ. ನಾ ಭಾಳ ಗಡಿಬಿಡಿಯೊಳಗಿದ್ದೀನಿ. ನಿನ್ನ ಎಲ್ಲಾ ಪ್ರಶ್ನಿ ಉತ್ತರಾ ನಾ ಈಗ ಹೇಳೋ ಮೂಡಿನ್ಯಾಗಿಲ್ಲ. ಸಾವಕಾಶ ನಿನಗ ಗೊತ್ತಾದೀತು. ಆದರ ಒಂದ ಮಾತು ಹೇಳತೀನಿ- ನಾ ಇನ್ನ ಬಹುಶಃ ತಿರಿಗಿ ಬರೂದಿಲ್ಲ. ಬಹುಶಃ ಏನು, ಖಾತ್ರೀನೇ. ನಾ ಇನ್ನ ಮುಂಬಯಿಗೆ ತಿರಿಗಿ ಬರೂದಿಲ್ಲ.* ಆಕೆಗೆ ಆಶ್ಚಯ್ಯ-ಚಿಂತೆ ಎರಡೂ ಆದವು. ಆದ್ಯಾಕ ಕಮಲಾ ? ಏನಾತು ? ಹಿಂಗ್ಯಾಕ ಮಾತಾಡ್ತೀ ? ಹೇಳಲ್ಲ, ನನಗೂ ಹೇಳೋದಿಲ್ಲೇನು, ನಿನ್ನ ಶಶೀಗೆ ?" ಹಾಗನ್ನು ಆಕೆ ಮುಂದೆ ಬಂದು ಕಮಲಾನ ಕೈಗಳನ್ನು ಹಿಡಿದುಕೊಂಡಳು. ಮೆಲ್ಲಗೆ ಕೈಬಿಡಿಸಿಕೊಂಡು ತನ್ನ ವ್ಯಾನಿಟಿ ಬ್ಯಾಗಿನಿಂದ ಒಂದು ಚಿಕ್ಕ ಪುಸ್ತಕದ ಆಕಾರದ ಪ್ಯಾಕೆಟನ್ನು ಹೊರತೆಗೆದು ಬಳಿಯಲ್ಲಿನ ಟೇಬಲಿನ ಮೇಲಿಡುತ್ತ ಕಮಲಾ ಅಂದಳು, “ಹೇಳಿದ್ದೆಲ್ಲ, ಯಾವ ಪ್ರಶ್ನಿಗೂ ಉತ್ತರ ಕೊಡೋ ಮೂಡಿನ್ಯಾಗಿಲ್ಲ ನಾನು. ಆದರ ನನ್ನ ನೆನಪಿನ ಸಲುವಾಗಿ ನಿನಗೆ ಇದನ್ನ ಕೊಟ್ಟು ಹೋಗ್ಲಿಕ್ಕೆ ಬಂದೀನಿ." ಆದರೆಡೆ ಕಣ್ಣು ಹರಿಸಿದಾಗ ಅದನ್ನು ನೀಟಾಗಿ ಪ್ಯಾಕ್ ಮಾಡಿದ್ದರೂ ಅದೇನಿರಬಹುದೆಂದು ಆಗಲೆ ಅಂದಾಜು ಹಾಕಿದ್ದ ಆಕೆ ಅಂದಳು, “ಪ್ರಶ್ನಿ-ಉತ್ತರಾ ಒತ್ತಟ್ಟಿಗಿರಿ ಕಮಲಾ, ಆದರ ನೀ ಮುಂಬಯಿ ಬಿಟ್ಟು ಹೋಗೋ ಈ ನಿರ್ಧಾರ ತಗೊಳ್ಳೋವಾಗ ಸಾಕಷ್ಟು ವಿಚಾರ ಮಾಡಿಯೋ ಇಲ್ಲೋ ? " “ವಿಚಾರ ? ಕಮಲಾ ಖಿನ್ನಳಾಗಿ ನಕ್ಕಳು. “ಈ ಹತ್ತು ವರ್ಷ ನಾ ಬರೇ ವಿಚಾರನೇ ಮಾಡೀನಿ ಶಶಿ, ಬ್ಯಾರೆ ಏನೂ ಮಾಡಿಲ್ಲ. ಬರೇ ವಿಚಾರ ಮಾಡೋದರಾಗ ಜೀವನಾ ಕಳೆಯೋದು ಬ್ಯಾಡ ಅಂತ, ಇನ್ನಾದ್ರೂ ಏನರೆ ಮಾಡಿ ನೋಡೋಣ ಅಂತ ಹೊರಟೀನಿ.