ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಲಾನ ಮಾತಿನ ಅರ್ಥ ಸಾಕಷ್ಟು ತಿಳಿದಿದ್ದ ಆಕೆ ಆಂದಳು, "ಹಂಗಾರ ಹೋಗಿ ಬಾ, ಗುಡ್ ಲಕ್. ಇಷ್ಟು ವರ್ಷ ನೀ ಅನುಭವಿಸಿದ ದುಃಖದ ಕಥೀ ಎಲ್ಲಾ ಮರತು ನೀ ಹೊಸಾ ಜೇವನಾ ಸುರು ಮಾಡೋ ಹಾಂಗ ಆಗ್ಲಿ." 'ಹೊಸಾ ಜೇವನಾ ಅಂತೂ ಸುರು ಮಾಡಲಿಕ್ಕೆ ಹೊರಟೀನಿ. ಆದರ ಹಿಂದಿನದು ಮರಿಲಿಕ್ಕೆ ಮಾತ್ರ ಈ ಜನ್ಮದಾಗ ಆಗತದೋಇಲ್ಲೋ." "ನೋ, ನೋ, ಯೂ ಮಸ್ಟ್ ಫರ್ ಗೆಟ್ ಇಟ್. ಇಲ್ದದ್ರ ಹಿಂಗೆ ಓಡಿ ಹೋಗೋದಕ್ಕ ಏನು ಅರ್ಥ ? ಬಿ ಬ್ರೇವ್ಹ್ ! ನೀ ಮತ್ತ ಆ ಮೊದಲಿನ ಬೇಫಾಮ ಧ್ಯರ್ಯದ ಹುಡುಗಿ ಆದದ್ದು ನೋಡ್ಲಿಕ್ಕೆ ನಾ ಬೆಂಗಳೂರ ತನಕಾ ಬರತೀನಿ ಮತ್ತು."

   ಕಮಲಾ ಮತ್ತೆ ಅದೇ ಖಿನ್ನ ನಗೆ ನಕ್ಕಳು. ನಂತರ ಆಕೆಯ ಪ್ರಶ್ನೆಗೆ ನೇರವಾಗಿ ಊತ್ತರಿಸದೆ ಅಂದಳು. "ಶಶಿ, ನೀ ಒಬ್ಬಾಕಿ ನನ್ನ ಮೊದಲಿನಿಂದ್ಲೂ ಪೂರಾ ತಿಳಕೊಂಡಾಕಿ. ನೀ ನನ್ನ ಪಾಲಿಗೆ ಬರೇ ನೇಬರ್ ಅಲ್ಲ, ನನ್ನ ಸೇವ್ಹಿಯರ್ ನೀನು. ನಿನ್ನ ಮೊರಲ್ ಸಪೋರ್ಟ್ ಇಲ್ದಿದ್ರ ನಾನು ಈ ಬೃಹತ್ ಮುಂಬೈಯೊಳಗ  ಜೀವನಾ ಮಾಡಲಾರದೇ ಎಂದೋ ಕೊಲ್ಯಾಪ್ಸ್ ಆಗ್ತಿದ್ದೆ. ಅದಕ್ಕಂತಸs  ನಿನಗ ಹೋಗುವಾಗ ನನ್ನ ಡೈರೀ ಓದೋದ್ರಿಂದ ನಿನ್ನ