ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
vii


ಮುನ್ನುಡಿ

ತಮ್ಮ ಇದುವರೆಗಿನ ಕತೆ-ಕಾದಂಬರಿಗಳ ಸಂಗ್ರಹಕ್ಕೆ ವೀಣಾ ಶಾಂತೇಶ್ವರರು'ನಡೆದದ್ದೇ ದಾರ' ಎಂದು ಹೆಸರು ಕೊಟ್ಟಿದ್ದಾರೆ. ಮಹಿಳಾ ಸಂದರ್ಭದಲ್ಲಿ ಈ ಆಯ್ಕೆಯನ್ನು ಪ್ರಶ್ನಿಸುವಂತಿಲ್ಲ. ಯಾಕೆಂದರೆ, ಸಂವೇದನೆ, ವಸ್ತು, ಶೈಲಿ, ಆಕೃತಿ-ಇವೆಲ್ಲವುಗಳಲ್ಲಿಯೂ ಅವರು ಹಿಡಿದ ಹಾದಿ ಅವರ ಹಿಂದಿನ ಮಹಿಳಾ ಸಾಹಿತಿಗಳಿಗಿಂತ ಭಿನ್ನವಾಗಿತ್ತು. ಆದರೆ ಕನ್ನಡ ಸಾಹಿತ್ಯದ ಇಡಿಯಾದ ಸಂದರ್ಭವನ್ನು ಗಮನಿಸಿದರೆ. ಈ ಹಾದಿ ಅವರಿಗಿಂತ ಮೊದಲೇ ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ ಹಾಗೂ ಲಂಕೇಶರಂಥವರೂ ತಮಗಾಗಿ ಸೃಷ್ಟಿಸಿಕೊಂಡ ನವ್ಯ ಮಾರ್ಗವೇ ಆಗಿದ್ದಿತು ಎನ್ನುವುದು ಲಕ್ಷಕ್ಕೆ ಬರದಿರಲಾರದು. ಕತೆಗಾರ್ತಿಯಾಗಿ ವೀಣಾ ಬೆಳೆದದ್ದು ಕೂಡ ಶಾಂತಿನಾಥ ದೇಸಾಯಿಯವರ ನೇರ ಪ್ರಭಾವದಲ್ಲಿಯೇ. ದೇಸಾಯಿಯವರ ಕಥನ ಸಾಹಿತ್ಯದ ಲಕ್ಷಣಗಳಾದ ನವ್ಯತೆ, ಲೈಂಗಿಕ ಆಸ್ಥೆಗಳು, ನಗರ ಸಂವೇದನೆ, ಅನುಭವದ ಆದ್ಯತೆ ಇಂಥ ಗುಣಗಳನ್ನು ವೀಣಾರ ಕಥನ ಸಾಹಿತ್ಯದಲ್ಲಿಯೂ ಗುರುತಿಸಬಹುದು. 'ಗಂಡ ಸತ್ತ ಮೇಲೆ', 'ದಿಗ್ಭ್ರಮೆ', 'ಕ್ಷಿತಿಜ'ಗಳಂಥ ಕತೆಗಳಲ್ಲಿ ದೇಸಾಯಿಯವರು ಹೆಣ್ಣಿನ ಅಂತರಂಗವನ್ನು ಅನಾವರಣಗೊಳಿಸುವಲ್ಲಿ ಅನುಸರಿಸಿದ ಮನೋವೈಜ್ಞಾನಿಕ ವಿಧಾನಗಳು ಹಾಗೂ ಅವರಿಗೆ ದೊರೆಯ ಒಳನೋಟಗಳು ವೀಣಾ ಅವರಿಗೆ ಖಂಡಿತವಾಹಿಯೂ ಪ್ರಸ್ತುತವೆನಿಸಿರಬೇಕು. ವೀಣಾರ ಮೊದಲ ಕಥಾ ಸಂಕಲನ ಮುಳ್ಳುಗಳು (೧೯೬೮) ಕೃತಿಯನ್ನು ದೇಸಾಯಿಯವರೇ ಓದುಗರಿಗೆ ಪರಿಷಯಿಸಿದವರು ಎನ್ನುವುದನ್ನು ಇಲ್ಲಿ ನೆನಯಬಹುದು. ಆದರೆ, ಸ್ಪಷ್ಟವಾದ ಸ್ತ್ರೀವಾದೀ ವೈಚಾರಿಕತೆ, ಪುರುಷಕೇಂದ್ರಿತ ಸಮಾಜದಲ್ಲಿ ಸ್ತ್ರೀ ಅನುಭವಿಸುವ ನೋವು-ಯಾತನೆಗಳ ಆಳವಾದ ಅರಿವು. ಅಭಿವ್ಯಕ್ತಿಯ ತೀವ್ರತೆ ಹಾಗೂ ದಿಟ್ಟತನ -ಇಂಥ ಗುಣಗಳಿಂದಾಗ ವೀಣಾ ಪುರುಷ ಸಾಹಿತಿಗಳಿಂದ ಭಿನ್ನರಾಗುತ್ತಾರೆ. 'ಮುಳ್ಳುಗಳು' ಅಂಥ ಕತೆಯನ್ನಾಗಲಿ 'ಗಂಡಸರು' ಇಂಥ ಕಾದಂಬರಿಯನ್ನಾಗಲಿ ಮಹಿಳೆ ಮಾತ್ರ ಬರೆಯಬಲ್ಲಳು.

“ಅನುಭವನಿಷ್ಠ ಸಾಹಿತ್ಯದಲ್ಲಿ ಕತೆಗಾರ ಬೆಳದಂತೆ ಅವನ ಅನುಭವಪ್ರಪಂಚ ಬದಲಾಗುತ್ತದೆಯಷ್ಟೇ ಅಲ್ಲದೆ. ಅದನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ” ಎಂದು ದೇಸಾಯಿಯವರು ತಮ್ಮ ಕತೆಗಳ ಸಂದರ್ಭದಲ್ಲಿ ಹೇಳಿದ ಮಾತು ವೀಣಾರ ಕತೆಗಳ ವಿಷಯದಲ್ಲಿಯೂ ನಿಜವಾಗಿದೆ. ಸಿದ್ದಾಂತಗಳಿಗೆಯ ಅಂಟಿಕೊಂಡ ಬಹಳಷ್ಟು ಮಹಿಳಾ ಬರೆಹಗಾರರು ಅನುಭವದ ಚಲನಶೀಲತೆಯನ್ನು ಗಮನಿಸಿದೆ ಯಾಂತ್ರಿಕವಾಗಿ ಬರೆಯುತ್ತಿರುವ ಉದಾಹರಣೆಗಳು ನಮ್ಮೆದುರಿಗಿವೆ. ಆದರೆ, ವೀಣಾ ಈ ಅಪಾಯದಿಂದ ಸಂಪೂರ್ಣವಾಗಿ ಪಾರಾಗಿದ್ದಾರೆ.

ಕಾದಂಬರಿಯ ಸ್ವರೂಪವನ್ನು ಕುರಿತು ಬರೆಯುತ್ತ “The novel is the