ಡಿಪಾರ್ಟ್‌ಮೆಂಟಿನಲ್ಲಿ, ಪ್ರ್ಯಾಕ್ಟಿಕಲ್ಸು ನಡೆದಾಗ ಸಹ, ಆ ಪಾಪಿ ಹುಡುಗರನ್ನು ಅವರ
ಪಾಡಿಗೆ ಬಿಟ್ಟು ಈ ಸಂಭಾವಿತರೆಲ್ಲ ಕೂತು ಹರಟುತ್ತಿರುವುದನ್ನು, ತನ್ನಂಥ
ಸೀನಿಯರ್ (ಮುದುಕ?) ಪ್ರೊಫೆಸರುಗಳ ದಾದು ಮಾಡದೆ ನಗುತ್ತಿರುವುದನ್ನು
ನೋಡಿದಾಗ ಎಷ್ಟೋ ಸಲ ತನಗೆ ಹೊಟ್ಟಿಯುರಿಯುತ್ತದೆ.ತಾನೂ ಅವರಂತೆ ಖಾಲಿ
ಹರಟೆ-ನಗೆಯಲ್ಲಿ ಜಗತ್ತನ್ನೆ ಮರೆಯಬೇಕೆಂಬ ಇಚ್ಛೆಯೂ ಆಗುತ್ತದೆ ಒಮ್ಮೆಮ್ಮೆ.
ಆದರೆ ತಾನು ಹಾಗೆ ಅವರೊಂದಿಗೆ ಒಬ್ಬಳಾಗಲು ಪ್ರಯತ್ತಿಸುತ್ತ,ಅವರಂತೆಯೇ
ಹಹ್ಹಹ್ಹಾ ಎಂದು ನಗಲೆತ್ನಿಸಿದ ಪ್ರತಿ ಸಾರೆಯೂ ಅವರೆಲ್ಲ ಯಾವುದೋ
ಎತ್ತರದಲ್ಲಿದ್ದಂತೆ,ಎಷ್ಟು ಜಿಗಿದರೂ ತನ್ನ ಕೈಗದು ನಿಲುಕದಂತೆ ಭಾಸವಾಗಿ,
ಅವರೆಲ್ಲರ ಮೇಲೂ ವಿಪರೀತ ಸಿಟ್ಟು ಬರುತ್ತದೆ. ಏನಾದರೊಂದು ನೆವ ತೆಗೆದು,
ವ್ಹೈಸ್ ಪ್ರಿನ್ಸಿಪಾಲಳ ಅಧಿಕಾರದಿಂದ ಅವರನ್ನೆಲ್ಲ ಮನಸ್ವೀ ಬೈಯಬೇಕೆನಿಸುತ್ತದೆ.
ಈ ಊರ್ಮಿಲಾ ಹಾಗೆಲ್ಲ ಬೈಯಿಸಿಕೊಳ್ಳುವವಳಲ್ಲ; ಬೆರಿಕಿ ಹುಡುಗಿ. ಇತ್ತೀಚೆ ಆ
ಪ್ರೊ. ಕುಲಕರ್ಣಿಯೊಡನೆ ಇವಳದೇನೋ ಭಾನಗಡಿ ನಡೆದಿರುವ ಹಾಗೆ ಕಾಣುತ್ತದೆ.
ನಡೆಯಲಿ,ನಡೆಯಲಿ,ಎಷ್ಟು ದಿನ ನಡೆದೀತು? ಹೂವಿನಿಂದ ಹೂವಿಗೆ ಹಾರುವ
ಪತಂಗ ಆತ.ಬೇಸಿಗೆ ಸೂಟಿ ಮುಗಿದು ಮತ್ತೆ ಕಾಲೇಜು ಸುರುವಾಗುವ ಹೊತ್ತಿಗೆ
ಅವನೆಲ್ಲೋ ಇವಳೆಲ್ಲೋ! ಬಹಳ ಮಜಾ....
ಈ ಸರೋಜಿನಿಯ ಎತ್ತರದ ಬಾಯ್‌ಫ್ರೆಂಡ್‌ನ ಬಣ್ಣಬಣ್ಣದ ಕಥೆ
ಕೇಳಿದಾಗಿನಿಂದ ಎದೆನೋವು ಎಷ್ಟೋ ಕಡಿಮೆಯಾದಂತೆನಿಸುತ್ತಿದೆ. ಇನ್ನ್ಯಾರ ಜೊತೆ
ಆಕೆ ವಾಕಿಂಗ್ ಹೋಗುವುದು? ಇನ್ನ್ಯಾರಿಗೆ ಆಕೆ ಪ್ರೇಮಪತ್ರ ಬರೆಯುವುದು?
ಸಂಜೆಯಾದರೆ ಸಾಕು,ಸಿನೆಮಾ ಸ್ಟಾರ್ ಹಾಗೆ ಮೇಕಪ್ ಮಾಡಿಕೊಂಡು ಜಿಗಿಯುತ್ತ
ಓಡುತ್ತಿದ್ದ ಸರೋಜಿನಿ ಇನ್ನು ಸಪ್ಪೆ ಮುಖ ಮಾಡಿಕೊಂಡು, ಕೂದಲನ್ನು ಬೆನ್ನಮೇಲೆ
ಹರಡಿಕೊಂಡು, ಅಂಚಿಲ್ಲದ ಕರೀ ಸೀರೆ ಉಟ್ಟುಕೊಂಡು, ನೆಪಮಾತ್ರಕ್ಕೆ
ಕೈಯಲ್ಲೊಂದು ಟೆಕ್ಸ್ಟ್ ಬುಕ್ ಹಿಡಿದುಕೊ೦ಡು,ಹಾಸ್ಟೆ ಲಿನ ಟೆರೇಸಿನ
ಮೇಲೆ- ಗೆಳತಿಯರಿಂದ ದೂರ- ಏಕಾಕಿಯಾಗಿ, 'ಮೇರೆ ಘರ್ ಸೆ ಪ್ಯಾರಕೀ ಪಾಲಕೀ
ಚಲೀಗಯಿ ಎಂದು ಗುನುಗುನಿಸುತ್ತ ಬೆಳದಿಂಗಳ ರಾತ್ರಿಗಳಲ್ಲಿ ಶತಪಧ ಹಾಕುವ
ದೃಶ್ಯ ಕಣ್ಣೆದುರಿಗೆ ಬಂದಾಗ ಎಂಥದೋ ತೃಪ್ತಿ....
-ಯಾರು ಹೇಳುತ್ತಾರೆ ಮುದುಕ ಪ್ರೊಫೆಸರುಗಳಿಗೆ ಭಾವನೆಗಳಿಲ್ಲವೆಂದು?
ಹೃದಯವಿಲ್ಲವೆಂದು? ಈ "ಪಾಲಕೀ ಚಲೀಗಯಿ" ತನ್ನ ಹೃದಯದಲ್ಲೂ
ಒಮ್ಮೆಮ್ಮೆ ಮುರಿದುಹೋದ ವೀಣೆಯ ತಂತಿಗಳನ್ನು ಜೋರಿನಿಂದ ಮೀಟಿ ಅಪಸ್ವರ
ಹೊರಡಿಸುವುದಿಲ್ಲವೇ? ಹೋದ ವರ್ಷ ಡಿಸೆಂಬರದಲ್ಲಿ ಹೊಸದಾಗಿ ಸುರುವಾಗಿದ್ದ
ಪುಟ:ನಡೆದದ್ದೇ ದಾರಿ.pdf/೪೦
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಮುಳ್ಳುಗಳು / ಅತಿಥಿ
೩೩