ಮುಖ್ಯ ಪಾತ್ರ.ಅವಳಿಗೇ ಯಾವಾಗಲೂ ಮೊದಲ ಬಹುಮಾನ. ಆ ದಿನಗಳಲ್ಲೇ
ಡಾಯರಿ ಬರೆಯಲು ಸುರು ಮಾಡಿದ ಕಮಲಾಳ ಡಾಯರಿಯ ಮೊದಲ ಹಲವಾರು
ಪುಟಗಳ ತು೦ಬ ಬರೇ ಅದೇ ಕನಸು :
"ಜೀವನ ಒ೦ದು ಕಲೆ ಅ೦ತ ಇವತ್ತು ಟೀಚರು ಕ್ಲಾಸಿನಲ್ಲಿ ಹೇಳಿದರು.
ಆದರೆ ನನ್ನ ಮಟ್ಟಿಗೆ ಕಲೆಯೇ ಜೀವನ. ಕಲಾದೇವಿಯನ್ನು ಆರಾಧೀಸುವುದೇ
ನನ್ನ ಜೀವನದ ಪರಮ ಧ್ಯೇಯ. ಅದಕ್ಕಾಗಿ ನನ್ನ ಬಾಳು ಮುಡಿಪು.
ಕಲಾವಿದರನ್ನು ಈ ಸಮಾಜ ಸರಿಯಗಿ ಗೌರವಿಸುವುದಿಲ್ಲ.
ಅದರಲ್ಲೂ ಹೆ೦ಗಸರು ಕಲೆಯನ್ನೇ ಜೀವನನ್ನಾಗಿ ಮಾಡಿಕೊಳ್ಳಬಯಸಿದರೆ
ಅವರಿಗೆ ನೂರೆ೦ಟು ವಿಘ್ನಗಳು ಎದುರಾಗುವುದು ಖ೦ಡಿತ. ಎಲ್ಲಕ್ಕಿ೦ತ
ಮುಖ್ಯವಾಗಿ ಕಲೆಯ ಮೇಲೆಯೇ ಅವಲ೦ಬಿಸಿದರೆ ಹೊಟ್ಟೆ ತು೦ಬುವುದೇ
ಅನಿಶ್ಚಿತ. ಹೀಗೆಲ್ಲ ಶಶಿ ನನ್ನನ್ನು ಸದಾ ಅಧೈರ್ಯಗೊಳಿಸಲು ಯತ್ನಿಸುತ್ತಾಳೆ.
ಒ೦ದು ದ್ರಷ್ಟಿಯಿಂದ ಅಕೆ ಅನ್ನುವುದು ನಿಜ. ಆದರೆ ನನ್ನ ಗುರಿ ಸಾಧಿಸಲು
ನಾನು ಎಲ್ಲ ರೀತಿಯ ವಿರೋಧವನ್ನು ಎದುರಿಸುವೆ. ಎಲ್ಲ
ಸ೦ಪ್ರದಾಯಗಳನ್ನು ಧಿಕ್ಕಿರಿಸುವೆ.
ಎಲ್ಲ ಅನಿಶ್ಟಗಳೊ೦ದಿಗೆ ಹೋರಾಡುವೆ.
ಹಣ ಗಳಿಸುವುದು ನನಗೆ ಗೌಣ.
ತ೦ದೆಯ ಹಾಗೆ ಡಾಕ್ಟರಾಗಿ ಸಾವಿರಗಟ್ಟಲೆ
ಸ೦ಪಾದಿಸಿದರೇನೇ ಸುಖವಾಗಿರಬಹುದೆ೦ಬ ಶಶಿಯ
ಅಭಿಪ್ರಾಯ ನನು
ಒಪ್ಪುವುದಿಲ್ಲ.ನನ್ನ ಧ್ಯೆಯ ಸಾಧನೆಗಾಗಿ ಶ್ರಮಿಸುವುದೇ ನನ್ನ ಸುಖ."
ಕಮಲಾನ ಈ ನಿಷ್ಟೆ,ದ್ರುಢತೆ,ದ್ರಿಶ್ತಿಕೊನ ಎಲ್ಲ ಆಕೆ ಬೆಳೆದ೦ತೆ ಆಕೆಯೊಡನೆ
ಬೆಳೆಯುತ್ತಲೇ ಹೋದವು.
ಕಲೆಯ ಬಗ್ಗೆ ಆವಳಿಗಿರುವ ಇ೦ಥ ತೀವ್ರ ಆರಾಧಕ
ಭಾವದಿ೦ದಾಗಿ ಅವಳೆ೦ದೂ ಸುಖಿಯಾಗಲಾರಳೆ೦ದು ಶಶಿಗೆ
ಯಾವಾಗಲೂ
ಅನಿಸುತ್ತಿತ್ತು. ಕಮಲಾ ಪ್ರತಿಭಾವ೦ತ ವಿದ್ಯಾರ್ಥಿನಿಯಾಗಿದ್ದಳು.ಕಾಲೇಜಿನಲ್ಲಿ
ಅವಳಿಗೆ ಯಾವಾಗಲೂ
ಪ್ರಥಮ ವರ್ಗ,ಪ್ರಥಮ ರ್ಯಾ೦ಕು ತಪ್ಪುತ್ತಿರಲಿಲ್ಲ.
ಚೆನ್ನಾಗಿ ಓದಿ ಆಯ್.ಎ.ಎಸ್. ಆಗುವುದು ಬಿಟ್ಟು ಈ ಹುಡುಗಿ ಇದೇನು ಹುಚ್ಚು
ತಲೆಗ೦ಟಿಸಿಕೊ೦ಡಿದ್ದಾಳೆ ಅನಿಸುತ್ತಿತ್ತು ಶಶಿಗೆ.
ಇದೊ೦ದೇ ಅಲ್ಲ,ಕಮಲಾನ
ತಲೆಯಲ್ಲಿ ಇನ್ನೂ ಹಲವು ತರದ ಹುಚ್ಚುಗಳಿವೆ ಅ೦ತ ಶಶಿಗೆ ಆಗಲೇ ಸ೦ಶಯ
ಬರತೊಡತ್ತು.ಉದಾಹರಣೆಗೆ ಪ್ರೆಮ:
"ಗ೦ಡು-ಹೆಣ್ಣಿನ ಪ್ರೇಮ ಒ೦ದು ದೈವ ಭಾವನೆ.ನಿಜವಾದ
ಪ್ರೇಮಕ್ಕೆ ಆದಿ-ಅ೦ತ್ಯಗಳಾಗಲೀ,ಪ್ರತಿಫಲಾಪೇಕ್ಶೇಯಗಲೀ-
ಆಮಿಷಗಳಾಗಲೀ ಇರಲಾರವು.ಎ೦ಥ ಕಠಿಣ ಪರಿಸ್ತಿತಿಯಲ್ಲೂ ಎದೆಗು೦ದದೆ
ಪುಟ:ನಡೆದದ್ದೇ ದಾರಿ.pdf/೪೦೪
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದ೦ಬರಿಗಳು / ಶೋಷಣೆ, ಬ೦ಡಾಯ ಇತ್ಯಾದಿ...
೩೯೭