ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೦೦
ನಡೆದದ್ದೇ ದಾರಿ

ಶಿವಮೂರ್ತಿ ಅನ್ನುವ ಎತ್ತರದ, ಆಕರ್ಷಕ ನಿಲುವಿನ, ಸುಶಿಕ್ಷಿತ. ಪ್ರಭಾವೀ ವ್ಯಕ್ತಿತ್ವದ
ಮನುಷ್ಯ. ಆತನ ನಾಟಕ ಕಂಪನಿ 'ವಿಶಿಷ್ಟ'ವೆನ್ನಿಸಲು ಕಾರಣ, ಕಮಲಾನೇ
ವಿವರಿಸಿದಂತೆ, ಅದರಲ್ಲಿರುವವರೆಲ್ಲ ಸುಶಿಕ್ಷಿತರು, ಸಾಕಷ್ಟು ವೈಯಕ್ತಿಕ ಆಸ್ತಿ-ಪಾಸ್ತಿ
ಇದ್ದವರು. ಒಂದು ದೃಷ್ಟಿಯಿಂದ ಹವ್ಯಾಸಿ ಕಲಾವಿದರು. ಅಲ್ಲಲ್ಲಿ ನಾಟಕ ಆಡಿ
ಸಂಗ್ರಹಿಸಿದ ಹಣದಲ್ಲಿ ಹೆಸರಿಗೆ ಅಲ್ಪ ಗೌರವವೇತನ ಪಡೆದು ಉಳಿದದ್ದನ್ನು ಮತ್ತೆ
ಹೊಸ ನಾಟಕಗಳನ್ನು ಸಂಯೋಜಿಸಲು ಉಪಯೋಗಿಸುತ್ತಿದ್ದರು. ಆ-ಈ ಸಂಘ-
ಸಂಸ್ಥೆಗಳ ಸಹಾಯಾರ್ಥ ನಾಟಕ ಪ್ರಯೋಗಿಸುತ್ತಿದ್ದರು. ಎಲ್ಲ ವಿಶೇಷವಾಗಿ
ಹೊಸಬಗೆಯ ನಾಟಕಗಳು. ಕನ್ನಡ ಹಾಗೂ ಮರಾಠಿ ಎರಡೂ ಭಾಷೆಗಳಲ್ಲೂ
ನಾಟಕಗಳನ್ನಾಡುತ್ತಿದ್ದುದು ಅವರ ವೈಶಿಷ್ಟ್ಯ. ಮುಂಬಯಿಯ ಪ್ರಗತಿಪರ
ಧೋರಣೆಯ ಬುದ್ಧಿಜೀವಿಗಳ ವಲಯದಲ್ಲಿ 'ರಸಿಕಕೂಟ' ಒಳ್ಳೆಯ ಹೆಸರು
ಪಡ್ಡೆದಿತ್ತು.
ಶಿವಮೂರ್ತಿಯನ್ನು ಶಶಿ ನೋಡಿದ್ದು ಇದಾದ ಐದಾರು ವರ್ಷಗಳ ನಂತರ.
ಆಗಲೂ ಆತ ನೋಡಿದೊಡನೆ ಪ್ರಭಾವ ಬೀರಬಲ್ಲ ಗಂಡಸು ಧ್ವನಿಯ
ಮನುಷ್ಯನಾಗಿದ್ದ. ಹೊಳೆಯುತ್ತಿದ್ದ ಆತನ ಕಣ್ಣುಗಳು ಕತೆ ಹೇಳುವಂತಿದ್ದವು. ಆತನಿಗೆ
ಗ್ರೀಕ್ ಯೋಧನ ಮೈಕಟ್ಟಿತ್ತು. ಕಂಪನಿಯ ನಾಟಕಗಳಲ್ಲೆಲ್ಲ ಹೆಚ್ಚಾಗಿ ಆತನೇ
ಹೀರೋ ಆಗಿರುತ್ತಿದ್ದ. ಕಂಪನಿಯ ಪ್ರೊಪ್ರಾಟರ್ನಗಿ, ನಾಟಕಗಳ ನಾಯಕನಾಗಿ,
ನಿರ್ದೇಶಕನೂ ಆಗಿದ್ದ ಆತ 'ಡೈರೆಕ್ಟರ್ ಸಾಹೇಬ'ರೆಂದು 'ರಸಿಕಕೂಟ'ದವರಿಗೆಲ್ಲ
ಪರಿಚಿತ ಆತ್ಮೀಯನಾಗಿದ್ದ. ಧಾರವಾಡದಲ್ಲಿ ಪ್ರಥಮ ಸಲ ಆತನ ಕಂಪನಿ
ಪ್ರಯೋಗಿಸಿದ ಮೂರು ಹೊಸ ಅಲೆಯ ನಾಟಕಗಳಿಂದ ಕಮಲಾ ಸಹಜವಾಗಿ
ಪ್ರಭಾವಿತಳಾದಳು. ಕನ್ನಡ ಸಂಘದ ಲೇಡೀಸ್ ರೆಪ್ರಜೆಂಟೇಟಿವ್ಹ್ ಆಗಿದ್ದ ಆಕೆ
ಶಿವಮೂರ್ತಿಯ ಕಂಪನಿ ಧಾರವಾಡದಲ್ಲಿ ಇಡೀ ಒಂದು ವಾರ ಕಾಲದಲ್ಲಿ
ಹಲವಾರು ಸಲ ಆತನನ್ನು ವೈಯಕ್ತಿಕವಾಗಿ ಭೇಟಿಯಾದಳು. ಸಮಾನ
ಮನೋಧರ್ಮಿಗಳಾದ ಇಬ್ಬರೂ ಗಂಟೆಗಟ್ಟಲೆ ಕೂತು ಚರ್ಚಿಸಿದರು; ಹರಟೆ
ಹೊಡೆದರು; ಒಟ್ಟಿಗೆ ಊಟ ಮಾಡಿದರು; ಕನ್ನಡ ಸಂಘದವರು ಅತಿಥಿಗಳಿಗಾಗಿ
ಏರ್ಪಡಿಸಿದ್ದ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ-ಜೋಗ, ಬನವಾಸಿ, ಕಿತ್ತೂರು,
ಎಲ್ಲಮ್ಮನ ಗುಡ್ಡ ಇತ್ಯಾದಿ- ಪ್ರವಾಸದಲ್ಲಿ ಪಾಲ್ಗೊಂಡರು; ಪರಸ್ಪರ ವಿಚಾರ
ವಿನಿಮಯ, ವಾಗ್ವಾದ, ಪರಾಮರ್ಶೆ ನಡೆಸಿದರು; ಆಧುನಿಕ ರಂಗಭೂಮಿಯಲ್ಲಿ
ತರಬಹುದಾದ ಕ್ರಾಂತಿಯ ಬಗ್ಗೆ ಕನಸು ಕಂಡರು....
"ಎಂತಹ ಅದ್ಭುತ ಮನುಷ್ಯ ಈ 'ಡೈರೆಕ್ಟರ್ ಸಾಹೇಬರು!'