ಕಮಲಾನ ಕನಸುಗಳೆಲ್ಲ ಮೈವೆತ್ತು ಬಂದ ಈ ರಾಜಕುಮಾರನಿಗೆ ಆಗಲೇ
ಮದುವೆಯಾಗಿತ್ತು. ಮೂರು ಮಕ್ಕಳೂ ಇದ್ದವು. ಅಷ್ಟೇ ಅಲ್ಲ. ನಾಟಕದ
ಹೀರೋಯಿನ್ ಜೊತೆ ತನ್ನ ಗಂಡ ರಂಗಮಂಚದ ಹೊರಗೂ ಹೀರೋ ಆಗಿ ಪ್ರೇಮ
ಸಲ್ಲಾಪ ನಡೆಸಿದ ಸುದ್ದಿ ಆತನ ಹೆಂಡತಿಯ ಕಿವಿಯ ವರೆಗೂ ಹೋಗಿ ಆಕೆ ಆತನನ್ನು
ತರಾಟೆಗೆ ತೆಗೆದುಕೊಂಡಿದ್ದಳು, ಬೆದರಿಸಿದ್ದಳು, ಅತ್ತಳು, ಸಾಯುವೆನೆಂದಳು, ಬಿಟ್ಟು
ಹೋಗುವೆನೆಂದಳು,ಕೇಸ್ ಮಾಡುವೆನೆಂದಳು, ಇಬ್ಬರನ್ನೂ ಖೂನಿ
ಮಾಡಿಸುತ್ತೇನೆಂದಳು...
"ಏನಾದ್ರೂ ನಿನ್ನ ಮ್ಯಾಲಿನ ನನ್ನ ಪ್ರೀತಿ ಬದಲಾಗೂದಿಲ್ಲ ಕಮಲಾ.
ಅದಕ್ಕ ಎಷ್ಟ ವಿರೋಧ ಬರತದೋ ಅಷ್ಟು ಅದು ಹೆಚ್ಚೇs ಆಗತದ. ನಾ
ಒಂದು ಹೆಜ್ಜೀ ಇಟ್ಟ ಮ್ಯಾಲ ಮುಗೀತು, ಏನ
ಕಷ್ಟ ಬಂದ್ರೂ ಹಿಂದಕ್ಕ
ಸರಿಯೂ ಮನುಷ್ಯ ಅಲ್ಲ, ಅಂತಾನೆ ಮೂರ್ತಿ. ನಾನು ಶೋಧಿಸುತ್ತಿದ್ದುದು
ಇಂತಹ ಪ್ರೀತಿಯನ್ನು. ನಾನು ಕಾಯುತ್ತಿದ್ದುದು ಇಂತಹ ಮನುಷ್ಯನಿಗಾಗಿ.
ಇವತ್ತಿಗೆ ನನ್ನ ಶೋಧೆನೆ ಪೂರ್ಣವಾಯಿತು. ನಾನು ಕಾಯುತ್ತಿದ್ದುದು
ಸಾರ್ಥಕವಾಯಿತು.
-ಆದರೂ ಸಮಸ್ಯೆಗಳಿದ್ದವು. ಒಬ್ಬ ಹೆಂಡತಿ-ಮೂರು ಮಕ್ಕಳಿದ್ದ
ಶಿವಮೂರ್ತಿಗೆ ತನ್ನ ಜೀವನದಲ್ಲಿ ಇಷ್ಟು ದಿನಗಳ ಕೊರತೆ ತುಂಬಿಕೊಟ್ಟಿದ್ದವಳಲ್ಲಿ
ಪ್ರೀತಿ- ಅವಳ ಬಗ್ಗೆ ಹೇಳತೀರದ ಎಳೆತ ಇತ್ತು ನಿಜ, ಆದರೆ ಅವಳೊಂದಿಗೆ
ಬಹಿರಂಗವಾಗಿ ಮತ್ತೊಂದು ಸಂಸಾರ ಹೂಡಲು, ಆಕೆಯನ್ನು ಎರಡನೆಯ
ಹೆಂಡತಿಯನ್ನಾಗಿ ಎಲ್ಲರೆದುರು ಸ್ವೀಕರಿಸುವುದು ಆತನಿಗೆ ಸುಲಭವಾಗಿ
ಗ್ರಾಹ್ಯವಾಗುವ ವಿಷಯವಾಗಿರಲಿಲ್ಲ. ಆದರೆ ಮದುವೆಯಾಗದೆ ಹಾಗೆ ಆತನ
'ಸಹಚರಿ'ಯಾಗಿರಲು ಕಮಲಾ ಸಿದ್ಧಳಿರಲಿಲ್ಲ.ಏನೊಂದೂ ಇತ್ಯರ್ಥವಾಗದಆ ಸಂಧಿ
ಕಾಲದಲ್ಲಿ ಕಮಲಾ ಚಿಂತಿಸಿ ಚಿಂತಿಸಿ ಸೊರಗಿ ಹೋಗಿದ್ದಳು:
"ಶಿವಮೂರ್ತಿ ಇಲ್ಲದ ಜೀವನವನ್ನು ನಾನು ಕಲ್ಪಿಸಲೂ ಸಾಧ್ಯವಿಲ್ಲ.
ಆತ ಬೇರೊಬ್ಬಳ ಗಂಡನೇ ಆಗಿರಲಿ, ಹಲವು ಮಕ್ಕಳ ತಂದೆಯೇ ಆಗಿರಲಿ,
ಕೊಲೆಗಡುಕನೇ ಆಗಿದ್ದರು ಸಹ ಅವನು ನನಗೆ ಬೇಕು.ನಾನು ಬದುಕಿರಲು
ಆತನ ಪ್ರೀತಿ ಬೇಕು. ನಾನು ಉಸಿರಾಡಲು ಆತನ ಆಧಾರ ಬೇಕು. ನಾನು
ನಿಜವಾಗಿ ಪ್ರೀತಿಸಿದ ಗಂಡಸು ಆತನೊಬ್ಬನೇ. ಏನಾದರೂ ಆಗಿ ಆತ ನನ್ನ
ಕೈಬಿಟ್ಟರೆ ನಾನು ಸಾಯುವುದೇ ನಿಶ್ಚಿತ."
-ಹಾಗೆಂದು ಶಶಿಗೂ ಅನುಮಾನ ಬರತೊಡಗಿತ್ತು. ಹೀಗಾಗಿ ಆಕೆಯೇ ಈ
ಪುಟ:ನಡೆದದ್ದೇ ದಾರಿ.pdf/೪೧೫
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೦೮
ನಡೆದದ್ದೇ ದಾರಿ