ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೪೧೦
ನಡೆದದ್ದೇ ದಾರಿ

ಅಂತೆಯೇ ಆಕೆ ಕೇಳಿದಳು, " ಆದರ ಇದನ್ನೆಲ್ಲಾ ನೀ ಇಷ್ಟ ವರ್ಷ ಸಹನ
ಮಾಡಿಕೋತಾನ s ಬಂದೀಯಲ್ಲ. ಈಗ್ಯಾಕ ಬಿಟ್ಟು ಹೋಗ್ತೀನಿ ಅಂತಿದಿ?"
ತುಸು ತಡೆದು ಸಂಕೋಚದ ದನಿಯಲ್ಲಿ ರೋಶನ್ ಬಿ ಉತ್ತರಿಸಿದಳು, " ಇಷ್ಟ s
ಆಗಿದ್ರ ನಾನೂ ಹೋಗ್ತಿದ್ದಿಲ್ರಿ ಬಾಯೀ ; ಈ ನನ್ನ ಗಂಡ ಯಾವಗಾರೆ ಖಾಲಿ ಕೈ
ಮಾಡಿಕೊಂಡು ಹೋದರೆ, ಆಕಿ ಕೇಳಿದ್ದು ಆಗಿಂದಾಗ ತಂದು ಕೊಡದಿದ್ದರ, ಆ ರಂಡಿ
ಮಾರಿ ತಿರಿವಿಕೊಂಡು ಕೂಡ್ತಾಳ. ಆವಾಗ ಇಂವಾ ತನ್ನ ತೆವಲು ತೀರಿಸಿಕೊಳ್ಲಿಕೆ ನನ್ನ
ಹತ್ತರ ಬರ್ತಾನ. ಆಮ್ಯಾಲ ನಾನೂ ಬಸರಿದ್ದಾಗ, ಹಡೆಯೋವಾಗ, ಕೂಸು
ಸಣ್ಣದಿದ್ದಾಗ ನನ್ನ ಕಡೆ ತಿರುಗಿ ನೋಡಿದ್ರ ಕೇಳ್ರಿ. ನನ್ನ ನಶೀಬ ಕೆಟ್ಟದ್ದು ಬಾಯೀ.
' ಅಲ್ಲಾ' ನನಗ ಎಂಟು ಮಕ್ಕಳ್ನ ಕೊಟ್ಟಾ, ಎಲ್ಲಾ ಹೆಣ್ಣೇ ಆದ್ವು. ಅದಕ್ಕ ಬ್ಯಾರೆ ನನ್ನ
ಗಂಡಗ ಸಿಟ್ಟು. ಆ ರಂಡೀಗೆ ಮುರು ಗಂಡು ಮಕ್ಕಳಾಗ್ಯವಂತ ಅಕೀ ಹತ್ತರ s
ಹೋಗ್ತಾನ. ನೀವ s ಹೇಳ್ರಿ, ಗಂಡು ಹಡಿಯೂದು ನಮ್ಮ ಕೈಯಾಗಿನ ಮಾತ? ನಾ
ಹಿಂಗ ಎಷ್ಟಂತ ಬಸರಾಗ್ಲಿ? ಎಷ್ಟಂತ ಹಡೀಲಿ? ಅದಕ್ಕ s ಈ ಗಂಡನೂ ಬ್ಯಾಡಾ,
ಅವನ ಸುಖಾನೂ ಬ್ಯಾಡಾ ಅಂತ ತವರ ಮನೀಗೆ ಹೋಗಿ ಬಿಡಬೇಕಂತ ಮಾಡೀನಿ.
ದುಡದು ತಿನ್ನವರಿಗೆ ಎಲ್ಲ್ಯಾದರ ಏನ್ರಿ? ಪುಣೆದಾಗ ನಮ್ಮ ಅಣ್ಣಾ- ಅವ್ವಾ ಆದಾರ.
ಪತ್ರಾಹಾಕ್ಸಿಯಿನಿ. ನಮ್ಮ ಅಣ್ಣಾ ಕರಿಯಾಕ ಬರ್ತಾನು. ನಾ ಹೋಗಿ ಬಿಡ್ತೀನ್ರಿ ಬಾಯೀ."
ರೋಶನ್ ಬಿ ಈಗ ನಾಲ್ಕಾರು ವರ್ಷಗಳ ಹಿಂದೆಯೇ ಹೀಗೆ ದಿಟ್ಟಲಾಗಿದ್ದರೆ
ಸ್ವಲ್ಪ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತಲ್ಲ ಅನಿಸಿತು ಶಶಿಗೆ. ಹಾಗೆಯೇ
ಇನ್ನು ಇಷ್ಟು ಒಳ್ಳೆಯ ಕೆಲಸದವಳು ತನಗೆ ಸಿಗಲಾರಳು ಅನ್ನಿಸಿತು.
ರೋಶನ್ ಬೀಯ ಕರ್ಮಕತೆಯ ಬಗ್ಗೆ ಪಾಪ ಅನಿಸಿತು.ಇದು ಅವಳಂಥ ಎಷ್ಟು
ಹೆಂಗಸರ ಕತೆಯೋ ಇಂಥದಕ್ಕೆಲ್ಲ ಕೊನೆಯೇ ಇಲ್ಲವೆ ಈ ದೇಶದಲ್ಲಿ ಅನಿಸಿತು.
***
ಸಂಜೆ ಹೇಳಿದ್ದಂತೆ ತಿಕೀಟು ಕೊಡಲು ಶಾಂತಾ ಆಪ್ಟೆ ಬಂದಾಗ ಬಿಡುವಾಗಿದ್ದು
ಬೇಸರವಾಗಿದ್ದ ಶಶಿ ಆಕೆಗೆ ಚಹಾ ಕೊಟ್ಟು ಹಾಗೆಯೇ ಹರಟುತ್ತ ಕೂತಳು. ಶಾಂತಾ
ಆಪ್ಟೆ ಕಾರ್ಯದರ್ಶಿಯಾಗಿದ್ದ ಲೇಡೀಜ್ ಕ್ಲಬ್ಬಿನವರ ಕಳೆದ ವರ್ಷದ
ಕಾರ್ಯಕ್ರಮಗಳ ವರದಿಯನ್ನು ಆಸಕ್ತಿಯಿಂದ ಕೇಳಿದಳು. ವಿಧವೆಯರ
ಪುನರ್ನಿವೇಶನ, ಅನಾಥ ಮಕ್ಕಳಿಗೆ ಸ್ಕೂಲಿನ ಫೀ-ಬಟ್ಟೆ-ಆಹಾರ ಇತ್ಯಾದಿ
ಒದಗಿಸುವುದು,, ಬಡ ಜಾಣ ವಿದ್ಯಾರ್ಥಿಗಳಿಗೆ ಸ್ಕಾಲಾರ್ಶಿಪ್ಪಿನ ವ್ಯವಸ್ಥೆ, ಕಡಿಮೆ
ಖರ್ಚಿನಲ್ಲಿ ದಲಿತ ವರ್ಗದ ವಧೂವರರ ಸಾಮುಹಿಕ ವಿವಾಹ ನಡೆಸಿದ್ದು,
ಹರಿಜನರಿಗೆ ವಸತಿಗಾಗಿ ಕಾರ್ಪೊರೇಷನ್ನಿನಿಂದ ಜಾಗ ದೊರಕಿಸಿದ್ದು, ಇತ್ಯಾದಿ.