ಪುಟ:ನಡೆದದ್ದೇ ದಾರಿ.pdf/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೨

ನಡೆದದ್ದೇ ದಾರಿ

ಎನ್ರೀ ಡಾಕ್ಟರ್? ಏನರೆ ಔಷಧ ವಗ್ರೆ ಕೊಡ್ರಿ.ಖರ್ಚು ಬೇಕಾದಶ್ಟಾಗ್ಲಿ.
ನಾ ಕೊಡ್ಲಿಕ್ಕೆ ತಯರಾಗಿದ್ದೀನಿ. ಏನು ಮಹಾ ಒಂಬತ್ತು ತಿಂಗಳು ಆಡಾಡತಾ ಕಳೆದು
ಹೋಗ್ತಾವ".
ಉಗುಳು ನುಂಗಿ ಶಶಿ ಅಂದಳು, "ಒಳ್ಳೇದು,ಈ ಒಂದು ಸಲ ಏನಾದರು
ಮಾಡೋಣಂತ.ಆದರ ಒಟ್ಟಿನ ಮ್ಯಾಲ ಅವ್ರು ಭಾಳ ವೀಕ್ ಆಗ್ಯಾರ.ಇನ್ನ ಮುಂದ
ಚ್ಈಲ್ಡ್ ಬೇರಿಂಗ್ ಅವ್ರಿಗೆ ಆಗೋದಿಲ್ಲ. ಫ಼ೀಟಲ್ ಆದೀತು . ಅದಕ್ಕ ನೀವು
ವ್ಯ್ಹಾಸೆಕ್ಟಮಿ ಮಾಡಿಸಿಕೊಳ್ಳೋದು ಚಲೋ'.
"ಎನಂದ್ರಿ?" ಸಿಂಗ್ ಕುರ್ಚಿಯಲ್ಲಿ ಪುಟಿದೆದ್ದ:" ಅದೆಲ್ಲಾ ನನ್ನ
ಟೆಂಪರಮೆಂಟ್ಗೆ ಸೂಟ್ ಆಗೋದಿಲ್ಲ. ಆಪರೇಶನ್ನು-ಸುಡುಗಾಡು ಏನು
ಮಣ್ಣಿದ್ರೂ ಆಕಿಗೇ ಮಾಡ್ರಿ. ನನಗ ಅದಕ್ಕೆಲ್ಲಾ ಟ್ಇಮಿಲ್ಲ. ಇಷ್ಟಕ್ಕs ನನ್ನ ಕರೆಸಿದ್ರಾ?
ಹಂಗಾರ ಥ್ಯಾಂಕ್ಸ್ ಡಾಕ್ಟರ್: ನಾ ಇನ್ನ ಬರ್ತಿನೀ. ಕ್ಯೆಯಲ್ಲಿನ ಸಿಗರೆಟನ್ನು ನೆಲದ
ಮೇಲೆ ಎಸೆದು ಬೂಟುಗಾಲಿನಿಂದ ಹೊಸಕಿ ಹಿಂದಿರುಗಿ ನೋಡದೆ ಹೋದ
ಭೂಪ.
"ಇವ್ರಿಗೆ ಸಿಟ್ಟು ಬಂತು ಕಾಣಸ್ತದ ಡಾಕ್ಟರ್,ಪ್ಲೀಜ್ ಎಕ್ಸಕ್ಯೂಜ್ ಮಿ"
,ಅನ್ನುತ್ತ ಆತನ ವಿಧೇಯ ಹೆಂಡತಿ, ಸಂಕೋಚದ ಮುದ್ದೆಯಾಗಿ ಕಾತರದಿಂದ ಆತನನ್ನು
ಹಿಂಬಾಲಿಸಿದಳು.
-ಸುರುವಾಯಿತು ಶಾಂತಾ ಆಪ್ಟೇ ಫ಼ೂತಾಕ್ರ.ಇವನೇನು ಮನುಷ್ಯನೇ
ಮ್ರಗನೆ? ಇಷ್ಟು ಕಲಿತು ಮಾಡಿ ಇವಳೇಕೆ ಹೀಗೆ ಮೂಕ ಕುರಿಯಂತಾಗಿರಬೇಕು?
ಇವನ ಶ್ರೀಮ್ಂತಿಕೆ ದೊಡ್ಡಸ್ತನಕ್ಕಿಷ್ಟು ಬೆಂಕಿ ಬೀಳ....ಹೆಂಡತಿ ಅಂದರೆ ಇಂಥವರ
ಪಾಲಿಗೆ ಸಾಕಿದ ನಾಯಿಗಿಂತಲೂ ಕಡೆಯಾದಳಲ್ಲ....ಇದು ಹೆಂಗಸರದೇ ತಪ್ಪಲ್ಲವೆ
ಡಾಕ್ಟರ್ ಬಾಯೀ? ಇಶ್ಟು ಅತ್ಯಾಚಾರ ಯಾಕೆ ಹೀಗೆ ಸಹಿಸಬೇಕು?ಇವರಿಗೇನು
ಸ್ವಂತ ವ್ಯಕ್ತಿತ್ವವಿಲ್ಲವೆ? ವಿಚಾರಗಳಿಲ್ಲವೆ? ಇವರ ಭಾವನಗಳಿಗೆ ಏನೂ
ಕಿಮ್ಮತ್ತಿವಿಲ್ಲವೆ?ನಾನಾಗಿದ್ದರೆ ಇವನ ಕಾರು-ಬಂಗ್ಲೆ-ಬಂಗಾರ-ರೆಶ್ಮೆಸೀರೆ-
ಬ್ಯಾಂಕ್ ಬ್ಯಾಲೆನ್ಸುಎಲ್ಲ ಎಡಹಗಾಲಲ್ಲಿ ಒದ್ದು ಬಿಟ್ಟು ಹೊಗಿಬಿಡುತತ್ತಿದ್ದೆ...."
ಇವಳೊಮ್ಮೆ ಮಾತು ನಿಲ್ಲಿಸಿ ಎದ್ದು ಹೋದರೆ ಸಾಕು ಅನ್ನಿಸಿತು ಶಶಿಗೆ.

***


ಇತ್ತೀಚಿಗೆ ಕಮಲಾಳ ಡಾಯರಿಯ ಕೆಲವಾರು ಪುಟಗಳನ್ನಾದರೂ ಓದದ್ದಿದರೆ
ಶಶಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ.
ಅದರಲ್ಲಿನ ಬಹುಪಾಲು ವಿಷಯ ಶಶಿಗೆ ಗೊತ್ತಿದ್ದದ್ದೇ.ಆದರೂ ಕಮಲಾನ