ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು / ಅತಿಥಿ ೩೫

        ಆಗೊಮ್ಮೆ ಈಗೊಮ್ಮೆ ಬಾಥರೂಮಿನಲ್ಲಿ ನಳ ತಿರುಗಿಸಿದ.ಲ್ಯಾವೆಟ್ರಿಯ ಬಾಗಿಲು
        ಹಾಕಿದ, ಪಿಸುಧ್ವನಿಯಲ್ಲಿ ಯಾರು ಯಾರಿಗೋ ' ಸ್ವೀಟ್ ಡ್ರೀಮ್ಸ್ ' ಹೇಳಿದ
        ಒಂದೆರಡು ಸಪ್ಪಳ - ಧ್ವನಿ ಬಿಟ್ಟರೆ ಬೇರೇನೂ ಕೇಳಿ ಬರುತ್ತಿಲ್ಲ. ಸತ್ತಲೂ ಕತ್ತಲು,
        ನೀರವತೆ.
            -ತನಗೆ ಯಾರು ' ಸ್ವೀಟ್ ಡ್ರೀಮ್ಸ್ ' ಹೇಳಬೇಕು ? ತನಗೆ ಕನಸೇ
       ಬೀಳುವುದಿಲ್ಲವೆಂದು, ಗಾಢ ನಿದ್ರೆ ಬರುವುದೆಂದು, ರಾತ್ರಿ ಎಂದೂ
       ಅಂಜಿಕೆಯಾಗುವುದಿಲ್ಲವೆಂದು ಎಷ್ಟೋ ಸಲ ಹುಡುಗಿಯರೆದುರಿಗೆ
       ಕೊಚ್ಚಿಕೊಂಡದ್ದುಂಟು.ಎಷ್ಟ ಮಟ್ಟಿಗೆ ಪ್ರಾಮಾಣಿಕ ಈ ಜಂಭ ? ತನಗೂ
       ಒಮ್ಮೊಮ್ಮೆ ಕನಸು ಬೀಳುತ್ತವೆ - ತಮ್ಮ ತಮ್ಮ ಗೆಳೆಯರ ಜೊತೆ ತಿರುಗಾಡಲು
       ಹೊರಟು ಹಾಸ್ಟೆಲಿನ ಹುಡುಗಿಯರು ಬರುತ್ತಾರೆ ಕನಸಿನಲ್ಲಿ ; ಊರ್ಮಿಲಾ, ಅವಳ
       ಸಹೋದ್ಯೋಗಿಗಳು, ಜಯಲಕ್ಪ್ಮಿಯನ್ನು  ಹಾಸ್ಟೆಲಿಗೆ ಬಿಟ್ಟುಹೋಗಲು ಬಂದಿದ್ದ
       ಅವಳ ಗಂಡ, ಲೂಸಿಯ ಜಾರ್ಜ, ಕಾಲೇಜಿನ ಪ್ರಿನ್ಸಿಪಾಲರು, ಹುಡುಗಿಯರ ಸ್ಕೂಲಿನ
       ಕಮೀಟಿ ಚೇರ್ ಮನ್ ಅವನ ಕಾರುಸಹಿತವಾಗಿ - ಈ ಎಲ್ಲರೂ ಬರುತ್ತಾರೆ ;
       ಕನಸಿನಲ್ಲಿ ದೆವ್ವಗಳಂತೆ ನರ್ತಿಸುತ್ತಾರೆ ; ಪ್ರಯತ್ನ ಮಾಡಿ ಎಲ್ಲರನ್ನೂ ಹೊರಗೆ
       ಹಾಕಿ ನಿದ್ರೆ ಬರಿಸಿಕೊಳ್ಳಬೇಕಾಗುತ್ತದೆ. ಹಾಗೆ ನಿದ್ರೆ ಬರಿಸಿಕೊಂಡಾಗ, ಇನ್ನೇನು
       ಗಾಢನಿದ್ರೆಯಲ್ಲಿ ಮುಳುಗಿರುವೆನೆಂದು ನಂಬಿದಾಗ,ಅರ್ಧ ಕನಸು - ಅರ್ಧ ಎಚ್ಚರ...
       ದೂರದಲ್ಲೆಲ್ಲೋ ಅಸ್ಟಷ್ಟವಾಗಿ, ಮುಸಕು-ಮಸುಕಾಗಿ ತೇಲಿ ಬರುವದು ಒಂದು
       ಮುಖ. ಬರಬರುತ್ತಾ ಆ ಮುಖ ಮಾಯವಾಗಿ ಉಳಿಯುವವು ಬರೇ ಎರಡು
       ಕಣ್ಣುಗಳು.ಶಾಂತವಾದ, ಅದರೆ ಉದ್ವಿಗ್ನವಾದ - ಛೇ,ಅಲ್ಲಿ ಈಗ ಹಳೆಯ
       ಉದ್ವಿಗ್ನತೆಯಿಲ್ಲ, ಎಂಥದೋ ಸಮಾಧಾನ, ತೃಪ್ತಿ ಇದೆ - ಕಣ್ಣುಗಳು....ತನ್ನನ್ನು
       ನೋಡಿ ನಗುತ್ತಿರುವಂತೆ, ಆಣ್ಕಿಸುವಂತೆ ಭಾಸ....
             - ಕತ್ತಲಲ್ಲಿ ಅಂಜಿ ಚೀರುವಂತಾಯಿತು ಪ್ರೊ. ಲೀಲಾವತಿಗೆ....ಎದ್ದು  ಆಕೆ
       ರೂಮಿನ ಕಿಡಿಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಬೋಲ್ಟ್ ಹಾಕಿದಳು.
             'ಲೂಸಿ, ಪ್ಲೀಜ್ ಇವತ್ತ ನನ್ನ ಜೋಡೀ ಮಲಕೊ ' ಎಂದು ಜಯಲಕ್ಪ್ಮಿ
        ಕೇಳಿಕೊಂಡದ್ದು ನೆನಪಾಯಿತು.ರಾತ್ರಿ ಬೀಳಬಹುದಾದ ಕೆಟ್ಟ ಕನಸಿನ ಆಂಜಿಕಿಯಿಂದ
        ದೂರವಿರಲು ಅವಳಿಗೆ ಲೂಸಿಯ ಜೊತೆ ಬೇಕಂತೆ.ಗಂಡನನ್ನು ಫಾರೆನ್ನಿಗೆ
        ಕಳಿಸಿದಾಗಿನಿಂದ ಇವಳ ಈ ಭಯಪ್ರದರ್ಶನ, ನಟನೆ ಹೆಚ್ಚಾಗಿದೆ. ಎಂಥ ಮಳ್ಳ,
        ಅಂಜುಬುರುಕ ಹುಡುಗಿಯರು ! ಇವರಿಗೆ ಸದಾ ಒಬ್ಬನ ಆಸರೆ ಬೇಕು, ಸಹಾಯ ಬೇಕು,
        ಸ್ವತಃದ ದುರ್ಬಲತೆಯಲ್ಲಿ, ಅದನ್ನು ಜಗತ್ತಿನೆದುರಿಗೆ ಬಿಚ್ಚಿಡುವುದರಲ್ಲಿ, ಅದೆಂಥ