ಶಶಿ ಕೇಳಿದಾಗ ಶಿವಮೂರ್ತಿ ಆತಂಕದ ಧ್ವನಿಯಲ್ಲಿ ಅಂದಿದ್ದ, "ನಾ ಅವಶ್ಯ
ಆಕೀ ಹತ್ತರ ಇರ್ತೀನಿ ಡಾಕ್ಟರ,ಆಕೀ ಸಮಾಧಾನನs ನನಗ ಮುಖ್ಯ "
ಆದರೆ ಬಹುಶಃ ವಸ್ತುಸ್ಥಿತಿ ಹಾಗಿರಲಿಲ್ಲ. ಕಮಲಾನ ಸುಖ-
ಸಮಾಧಾನಗಳಿಗಿಂತಲೂ ಮುಖ್ಯವಾದ ಇತರ ವಿಷಯಗಳೂ ಇದ್ದವು ಆತನಿಗೆ:
"ಇವತ್ತು ಮೂರ್ತಿ ಹೇಳಿದ -ಆತನಿಗೇನೋ ಬೇರೆ ಆರ್ಜೆಂಟ್
ಕೆಲಸಕ್ಕಾಗಿ ಪುಣೆಗೆ ಹೋಗಬೇಕಾಗಿದೆ,ಬಹುಶಃ ಮಗಳಿಗೆ ವರ ನೋಡಲು
ಇರಬೇಕು,ಆಪರೇಷನ್ ಇದ್ದ ದಿನ ಆತನಿಗೆ ಇಲ್ಲಿರಲಾಗುವುದಿಲ್ಲ ,
ಏನಾದರೂ ಬೇರೆ ವ್ಯವಸ್ಥೆ ಮಾಡಿಕೊ,ಬೇಕಾದರೆ ಊರಿನಿಂದ ನಿನ್ನ
ಅತ್ತಿಗೆಯನ್ನು ಕರೆಸಿಕೋ ,ಅಂದ.
"ಅತ್ತಿಗೆಗೇಕೆ ತೊಂದರೆ ಅಂತ ನಾನಂದಾಗ ಆತನಿಗೆ ವಿಪರೀತ ಸಿಟ್ಟು
ಬಂತು :'ಹೌದು ,ನಿನ್ನವರಿಗೆ ಯಾರಿಗೂ ತೊಂದರೆ ಆಗಬಾರದು,ನನಗೆ
ಮಾತ್ರ ಎಷ್ಟು ತೊಂದರೆಯಾದರೂ ಅಡ್ಡಿಯಿಲ್ಲ ಅಲ್ಲವೇ ?ನನ್ನ ಚಿಂತೆಗಳ ,
ಜವಾಬ್ದಾರಿಗಳ,ಕರ್ತವ್ಯಗಳ ಬಗ್ಗೆ ಎಂದಾದರೂ ಯೋಚಿಸಿದ್ದೀಯಾ?
ಸದಾ ನಾನು ನಿನ್ನ ಸೇವೆಗೆ ಸಿದ್ಧನಿರಬೇಕಾದ ಗುಲಾಮ ಅಂತ ತಿಳಿದಿರುವಿ!
ನನಗಾಗುವುದಿಲ್ಲ .ಏನಾದರೂ ಮಾಡಿಕೋ .ಇಷ್ಟಕ್ಕೂ ಇಂಥ ಆಪರೇಷನ್ನು
ದಿನಾ ನೂರು ಮಾಡುತ್ತಾರೆ ಡಾಕ್ಟರು .ಏನಾಗುತ್ತದೆ ಇಷ್ಟು ಫಸ್
ಮಾಡಲು? ಶಶಿ ಡಾಕ್ಟರು ಇದ್ದೇ ಇರುತ್ತಾರಲ್ಲ ನಿನ್ನ ಜೊತೆಗೆ ?ನಾನೇ
ಯಾಕೆ ಬೇಕು ಅಂತ ? ಬರೇ ಫಾಲ್ಸ್ ಪ್ರೆಸ್ಟೀಜ್ ಸಲುವಾಗಿ. 'ನೋಡ್ರಿ ,ನನ್ನ
ಗಂಡ ಹೇಗೆ ನನ್ನ ಕಾಲಕಸದ ಹಾಗಿದ್ದಾನೆ ' ಅಂತ ಮಂದಿಯ ಮುಂದೆ
ತೋರಿಸಿಕೊಳ್ಳುವ ಸಲುವಾಗಿ! ಆಯ್ ಹೇಟ್ ದಿಸ್.'
"ಓಹ್ .ಯಾಕೆ ಈತ ನನ್ನನ್ನು ಇಷ್ಟು ತಪ್ಪು ತಿಳಿಯುತ್ತಾನೆ ?ನನಗೆ
ಯಾರಿಗೂ ಏನೂ ತೋರಿಸಬೇಕಾಗಿಲ್ಲ,ಆದರೆ ಈತನ ಸಾನ್ನಿಧ್ಯ ಮಾತ್ರ
ಬೇಕು ,ಈತನ ಕಷ್ಟ-ಸುಖಗಳ ಬಗ್ಗೆ ನಾನು ಹಗಲಿರುಳು ಚಿಂತಿಸುತ್ತೇನೆ ,
ಅಂತೆಲ್ಲ ಈತನಿಗೇಕೆ ತಿಳಿಯುವುದಿಲ್ಲ? ಇಷ್ಠಕ್ಕೂನನ್ನ ಆರೈಕೆ-ಕಾಳಜಿಯೂ
ಈತನದೇ ಜವಾಬ್ದಾರಿ ಅಲ್ಲವೇ ? ಕರ್ತವ್ಯ ಅಲ್ಲವೇ ?
"ಹೋಗಲಿ.ಈತನ ಮನಸ್ಸಿನ ವಿರುದ್ಧ ಏನೂ ಮಾಡುವುದು ಬೇಡ.
ತನ್ನ ಜವಾಬ್ದಾರಿ ನಿರ್ವಹಿಸಲು ಈತ ಪುಣೆಗೆ ಹೋಗಲಿ .ನನಗೆ ಏನಾ
ದರೇನು ?ಬದುಕು ಉಳಿದರೆ ಮತ್ತೆ ಈತನ ಎದೆಯಲ್ಲಿ ಮುಖ ಹುದುಗಿಸಿ
ಎಲ್ಲ ಮರೆಯಲು ಪ್ರಯತ್ನಿಸುತ್ತೇನೆ.ಸತ್ತರೆ ಚಿಂತೆ ಕಳೆಯಿತು."
ಪುಟ:ನಡೆದದ್ದೇ ದಾರಿ.pdf/೪೨೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಕಿರುಕಾದಂಬರಿಗಳು/ಶೋಷಣೆ,ಬಂಡಾಯ ಇತ್ಯಾದಿ...
೪೧೫