ಇಷ್ಟೆಲ್ಲಾ ನಡೆದ ನಂತರ ಕಮಲಾನ ಆಪರೇಷನ್ ಇದ್ದ ದಿನ ಶಿವಮೂರ್ತಿ
ಪುಣೆಗೆ ಹೋಗದೆ ನೇರವಾಗಿ ಹಾಸ್ಪಿಟಲಿಗೇ ಬಂದಿದ್ದ. ಆಪರೇಷನ್ ಆದ ನಂತರ
ಕಮಲಾಳನ್ನು ಸ್ಪೆಷಲ್ ರೂಂನಲ್ಲಿ ತಂದು ಮಲಗಿಸಿದಾಗ ಶಶಿಯೂ ಅಲ್ಲೇ ಇದ್ದಳು.
ಶಿವಮೂರ್ತಿಯನ್ನು ನೋಡಿ ಕಮಲಾಳ ಮುಖ ಒಮ್ಮೆಲ್ಲೆ ಅರಳಿತ್ತು: 'ಯಾಕ
ಮೂರ್ತಿ, ಪುಣೇಕ್ಕ ಹೋಗ್ಲಿಲ್ಲೇನು ?'
'ಇಲ್ಲ ಕಮಲಾ, ಎರಡು-ಮೂರು ದಿವಸದಿಂದ ಮನ್ಯಾಗ ಆಕೀಗೆ ಭಾಳ
ನೆಗಡಿ-ಕೆಮ್ಮು ಬಂದದ. ಆಕೀಗೆ ಆರಾಮಿಲ್ಲದಾಗ ಹ್ಯಾಂಗಬಿಟ್ಟುಹೋಗೋದು ಅಂತ
ಕ್ಯಾನ್ಸಲ್ಮಾಡಿದೆ' ಅಂದ ಆತ. ಅರಳಿದ ಮುಖ ಒಮ್ಮೆಲೇಬಾಡಿತ್ತು. ಕಾರಣಶಶಿಗೆ
ತಿಳಿದಿದ್ದು ಈಗಲೇ.
"ನನಗನಿಸುತ್ತಿದೆ, ಮೂರ್ತಿ ನನ್ನನ್ನು ಆಲಕ್ಷಿಸುತ್ತಿದ್ದಾನೆ. ಆತನಲ್ಲಿ ಮೊದಲಿನ
ಆ ಆರಾಧಕ ಭಾವ, ತನ್ಮಯತೆ, ಉತ್ಕಟತೆ, ಉನ್ಮಾದ ಉಳಿದಿಲ್ಲ. ಇದು ಸಹಜ
ಕ್ರಿಯೆಯಾಗಿರಬಹುದು. ಆದರೆ ನನ್ನ ಮಟ್ಟಿಗೆ ಸಹಿಸಲು ಅಸಾಧ್ಯವಾದ ಸತ್ಯ. ನಾನು
ಬದುಕಿದ್ದು ಆತನ ಪ್ರೀತಿಯ ಉತ್ಕಟತೆಯ ಆಧಾರದ ಮೇಲೆ. ಅದೇ
ಕುಸಿಯತೊಡಗಿದರೆ ನಾನು ಪೂರಾ ಮುಳುಗಿ ಹೋದಂತೆ. ದೇವರೇ, ನನಗಿನ್ನೇನೂ
ಬೇಡ, ಆದರೆ ಮೂರ್ತಿ ನನ್ನ ಪಾಲಿಗೆ ಎಂದೆಂದೂ ಬದಲಾಗದಿರಲಿ."
***
ಅಂದು ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಿಗೆ, ಇನ್ನೇನು ಪೇಶ೦ಟ್ಸ್ಬ
ರಲಿಕ್ಕಿಲ್ಲ, ಊಟ ಮಾಡಿ ಮಲಗೋಣವೆಂದುಕೊಂಡು ಶಶಿ ಏಳುವಷ್ಟರಲ್ಲಿ, ತೆರೆದೇ
ಇಟ್ಟಿದ್ದ ಮುಂಬಾಗಿಲಿನಿಂದ ಲೀಲಾ ಕುಲಕರ್ಣಿ ನಿಶಬ್ದವಾಗಿ ಒಳಬಂದಳು.
"ಹಲೋ ಲೀಲಾ ? ಇದೇನು ಇಷ್ಟೊತ್ತಿನ್ಯಾಗ" ಅಂತ ಶಶಿ ಅನ್ನುವುದರೊಳಗೆ
ಧಾವಿಸಿ ಅವಳಡೆ ಬಂದ ಲೀಲಾ ಅವಳ ಕಾಲಬಳಿ ಕುಸಿದು ಅಳಲಾರಂಭಿಸಿದಳು.
" ಏನಾಯ್ತು ಲೀಲಾ ? ಹಿಂಗ್ಯಾಕ ಒಮ್ಮಿಗಿಲೆ -" ಅಂತ ಅವಳನ್ನು ಎಬ್ಬಿಸಲೆತ್ನಿಸಿದ
ಶಶಿಯನ್ನು ತಡೆದು ಬಿಕ್ಕುತ್ತ ಲೀಲಾ ಮಾತನಾಡಿದಳು, "ನಾ ಹಾಳಾದೆ ಡಾಕ್ಟರ್,
ಘಾತ ಆತು, ನಾ ದೊಡ್ಡ ಡಿಫಿಕಲ್ಟಿಯೊಳಗಿದ್ದೀನಿ .. ನನ್ನ ಏನಾರೆ ಮಾಡಿ ಪಾರು
ಮಾಡಬೇಕು ನೀವು ... ಇಲ್ದಿದ್ರ ನಾ ಉಳಿಯಾಂಗಿಲ್ಲ ...." ಆಳುತ್ತ ಮಾತನಾಡುತ್ತಿದ್ದ
ಲೀಲಾಳನ್ನು ಬಲವಂತವಾಗಿ ಎತ್ತಿ ಸೋಫಾದ ಮೇಲೆ ಕೂಡ್ರಿಸಿದ ಶಶಿಯ ಅನುಭಾವಿಕ
ಕಣ್ಣು ಲೀಲಾನನೊಮ್ಮೆ ಮೇಲಿನಿಂದ ಕೆಳಗಿನ ವರೆಗೆ ನೋಡಿ ಆಳೆಯಿತ್ತು. ಆಕೆ
ಲೀಲಾನನ್ನು ಸಂತವಿಸುವ ಆದರೂ ನಿರ್ವಿಕಾರವಾದ ಧ್ವನಿಯಲ್ಲಿ ಹೇಳಿದಳು, "ನಿನ್ನ
ಡಿಫಿಕಲ್ಟಿ ಏನಂತ ನನಗೆ ಗೊತ್ತಾತು ಬಿಡು. ಅದನ್ನ ಪರಿಹಾರ ಮಾಡಲಿಕ್ಕೂ ಬಂದೀತು.