ಪುಟ:ನಡೆದದ್ದೇ ದಾರಿ.pdf/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಿರುಕಾದಂಬರಿಗಳು/ ಶೋಷಣೆ, ಬಂಡಾಯ ಇತ್ಯಾದಿ...

೪೧೯

ನಿಜವಾದ ಪ್ರೀತಿಯೇ ಅಲ್ಲ. ಒಂದಾರು ತಿಂಗಳು ನೀನು ಬೇರೊಬ್ಬ ಗಂಡಸಿನ
ಒಡನಾಟ ಹೊಂದಿದ್ದರೆ ಏನಂತೆ? ಅದೀಗ ಮುಗಿದ ಕತೆ ಅಲ್ಲವೆ? ಇಷಕ್ಕೂ
ದೈಹಿಕ ಸಂಬಂಧದ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಚಾರಿತ್ರ್ಯದ ಪವಿತ್ರತೆ
ಅಳೆಯುವುದೇ ತಪ್ಪು. ನಾವು ಊಟ ಮಾಡಿದ್ದು ಹೇಗೆ ನಮ್ಮೊಳಗೆ
ಉಳಿಯುವುದಿಲ್ಲವೋ ಹಾಗೆಯೇ ನಾವು ಒಬ್ಬ ವ್ಯಕ್ತಿಯೊಂದಿಗೆ ಮಲಗಿ
ಎದ್ದದ್ದರ ಒಂದಂದಶವೂ ನಮ್ಮೊಳಗೆ ಉಳಿಯುವುದಿಲ್ಲ. ನಿಜವಾಗಿ
ಉಳಿಯುವುದು ಅಂದರೆ ಮನಸ್ಸು-ಮನಸ್ಸಿನ ಸಂಬಂಧ. ನೀನು ಇತಿಹಾಸದ
ಬಗ್ಗೆ ಕೊರಗಬೇಡ. ನೀನು ನನ್ನ ಪಾಲಿಗೆ ವ್ಹರ್ಜಿನ್ ಮೇರಿಯ ಹಾಗೆ
ಪವಿತ್ರಳು. ನನ್ನ-ನಿನ್ನ ಪ್ರೀತಿಗೆ ಇಂಥ ಚಿಲ್ಲರೆ ಕಾರಣಾಗಳಿಂದ ಯಾವ
ತಡೆಯೂ ಬರಲಾರದು".
- "ಮೂರ್ತಿಯದು ಎಂಥ ದೊಡ್ಡ ಮನಸ್ಸು! ನನ್ನಷ್ಟು ಭಾಗ್ಯಶಾಲಿ
ಹೆಂಗಸು ನಾನೇ."
ಕಮಲಾ ಎಷ್ಟೇವಾದಿಸಿದರೂ ಯಾಕೋ ಈ ಮಾತು ಮಾತ್ರ ಶಶಿಗೆ ಒಪ್ಪಲು
ಆಗುತ್ತಿರಲಿಲ್ಲ. ತನ್ನ ಹೆಂಡತಿಯಿ ಇತಿಹಾಸದ ಬಗ್ಗೆ ಹೀಗೆ ನಿರ್ಲಿಪ್ತನಾಗಿರಲು
ನಿಜವಾಗಿಯೂ ಈ ನಮ್ಮ ಹಿಂದುಸ್ತಾನದ ಯಾವ ಗಂಡಸಿಗೂ ಸಾಧ್ಯವಿಲ್ಲವೆಂದೇ
ಶಶಿಯ ದೃಢವಾದ ಅಭಿಪ್ರಾಯ. ಯಾವುದೋ ಕಾವಿನಲ್ಲಿ ಆದರ್ಶದ ಮಾತುಗಳನ್ನು
ಎಲ್ಲರೂ ಆಡಬಹುದು. ಕಾವು ಇಳಿದಾಗ ನಿಜ ಸ್ವರೂಪ ಬಯಲಿಗೆ ಬಂದೇ
ಬರುವುದು. ಆಗ ಈ ಹುಚ್ಚು ಕಮಲಾನ ಕಣ್ಣಿನ ಪೋರೆ ಹರಿಯುವುದು ನಿಶ್ಚಿತ. ಆದರೆ
ಅಂಥ ಆಘಾತ ಕಮಲಾ ತಾಳಲಾರಳು. ತನ್ನ ಸುತ್ತಲಿನ ಭ್ರಮೆಯ ದಂತದ ಗೋಪುರ
ಕುಸಿದರೆ ಕಮಲಾ ಮಾನಸಿಕವಾಗಿ ಬ್ರೇಕ್ ಡೌನ್ ಆಗುವುದು ನಿಶ್ಚಯ.
ನಿಜವಾಗಿ ಆದದ್ದೂ ಹಾಗೆಯೇ. ಕಮಲಾನ ಡಾಯರಿಯ ಪುಟಗಳನ್ನು ತಿರುವಿ
ಹಾಕುತ್ತಿರುವಾಗ ಈ ಬ್ರೆಕ್ ಡೌನಿನ ಪೂರ್ಣ ಕಲ್ಪನೆ ಬಂದಿತ್ತು ಶಶಿಗೆ:
"ಎಷ್ಟೋ ದಿನಗಳಿಂದ ಮೂರ್ತಿ ನನ್ನೊಂದಿಗೆ ರಾತ್ರಿ ಕಳೆಯಲು
ಬಂದೇ ಇಲ್ಲ. ಕಂಪನಿಯಲ್ಲಿ ಕೆಲಸ ಮಾಡಲು ಹೋದಾಗ ಭೆಟ್ಟಿಯಾಗುತ್ತದೆ,
ನಿಜ. ಆಗೀಗ ಸಂಜೇ ಮನೆಗೂ ಬರುತ್ತಾನೆ. ಬಂದವನು ಬೂಟು ಸಹ ಕಳಚದೆ
ಅತಿಥಿಯ ಹಾಗೆ ಪಡಶಾಲೆಯಲ್ಲಿ ಕೂತು ಆ-ಈ ಮಾತಾಡಿ ನಂತರ ಕೈ
ಗಡಿಯಾರ ನೋಡಿಕೋಳ್ಳುತ್ತ ಎದ್ದು ಹೊರಟು ಬಿಡುತ್ತನೆ. 'ಆ ಮನೆಯಲ್ಲಿ
ಕೆಲಸವಿದೆ' ಅನ್ನುತ್ತಾನೆ. 'ನೀನು ಅಂಡರ್ ಸ್ಟ್ಯಂಡ್ ಮಾಡಿಕೋಬೇಕು. ಕೋ-
ಆಪರೇಟ್ ಮಾಡಬೇಕು.' ಅನ್ನುತ್ತನೆ. ಆತ ಹೋದ ನಂತರ ರಾತ್ರಿಯಿಡೀ