ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು / ಶೋಷಣೆ, ಬಾಂಡಾಯ ಇತ್ಯಾದಿ....
ಮೊದಲೇ ನನ್ನ ಕೂದಲು ಹಿಡಿದೆಳೆದು ಬೆನ್ನು- ಮುಖ - ತಲೆಯ ಮೇಲೆ ನಾಲ್ಕಾರು ಬಾಕ್ಸಿಂಗ್ ಕೊಟ್ಟ. ನನ್ನ ಕಣ್ಣಿಗೆ ಕತ್ತಲು ಕವಿಯಿತು. 'ರಂಡೆ, ನನಗ ಮೋಸ ಮಾಡ್ತೀಯಾ? ನನ್ನ ಬೆನ್ನಹಿಂದ ಬ್ಯಾರೆ ಗಂಡಸರ ಜೋಡೀ ಮಜಾ ಮಾಡ್ತೀಯಾ?ಹಿಂಗ ಮಾಡೋ ಚಟಾ ಇರೋದ್ರಿಂದನೆs ಇರಬೇಕು, ನಿನ್ನ ಆ ಎಮ್.ಎ.ದ ಲವ್ಹರ್ ಕೈಬಿಟ್ಟು ಹೋದದ್ದು. ಹಿಂಗs ಎಷ್ಟ ಮಂದಿ ನಿನ್ನ ಮೂಸಿ ಹೋಗ್ಯಾರೋ ಏನೋ.... ಆದರ ನಾ ಸುಮ್ಮ ಬಿಟ್ಟು ಹೋಗೂದಿಲ್ಲ. ನಿನ್ನ ಮೂಗು, ಮೊಲೆ ಕೂಯ್ದು ಕತ್ತೀ ಮ್ಯಾಲ ಮೆರವಣಿಗೆ ಮಾಡಸ್ತೀನಿ. ನೀ ಊರ ಸೂಳಿ ಇದ್ದೀ ಅಂತ ಮೊದ್ಲ ಗೊತ್ತಿತ್ತು ನನಗ.... ನಿನ್ನಂಥಾಕಿ ಸಲುವಾಗಿ ಹೆಂಡ್ತೀ - ಮಕ್ಕಳ ವಿರೋಧ ಕಟ್ಟಿಗೊಂಡೆ. ನಾನs ಮೂರ್ಖ.ಲಾಗ್ನಾದ ಮ್ಯಾಲರೆ ಗರತೀ ಹಾಂಗ ಸಂಸಾರ ಮಾಡತೀ ಅಂದರ ಆ ಹಾದರದ ಚಟಾ ಎಲ್ಲೆ ಹೋದೀತು ? ನಿನ್ನ ತಲೀ ಬೋಳಿಸಿ.... 'ಮುಂದಿನ ಮುಕ್ತಾಫಲಗಳು ಉದುರುವ ಮುನ್ನವೆ ಬಹುಶಃ ನನಗೆ ಎಚ್ಚರವೇ ತಪ್ಪಿತೆಂದು ಕಾಣುತ್ತದೆ .... -ನಾನು ಮತ್ತೆ ಕಣ್ತೆರೆದಾಗ ನಸುಕು ಹರಿಯುತ್ತಲಿತ್ತು. ರಾತ್ರಿ ನಡೆದದ್ದೆಲ್ಲ ಎಂದಿಗೂ ನಿಜವಾಗಿರಲಾರದು, ಅದು ಕನಸೇ ಸರಿ ಅಂದುಕೊಂಡೆ. ಒಮ್ಮೆಲೆ ವಿಪರೀತ ಆಳು ಬಂತು. ಮೈಯೆಲ್ಲ, ಮೈಯ ಒಳಗಿನದೆಲ್ಲ, ಸುತ್ತಲಿನದೆಲ್ಲ ನಡುಗಿಸುವ, ಭೂಕಂಪದಂತಹ ಆಳು. ಹೊರಳಿ ಹೊರಳಿ ನಿಸ್ಸಂಕೋಚವಾಗಿ, ನಿರ್ಲಜ್ಜವಾಗಿ, ನಿರಂತವಾಗಿ, ಮುಕ್ತವಾಗಿ ಅತ್ತೆ. ಅತ್ತು ಮುಗಿದ ನಂತರ ಎದ್ದೆ.ಮೈ ಎಲ್ಲ ನೋಯುತ್ತಿತ್ತು. ಮಂಚದ ಮೇಲೆ ಆಗ ತಾನೇ ಕಣ್ತೆರೆದಿದ್ದ ಮೂರ್ತಿ ಮಲಗಿದ್ದ ಹಾಗೆಯೇ ಕೈ ಚಾಚಿ 'ಬಾ' ಅಂದ. ಹೌದು, ರಾತ್ರಿಯದು ಕೆಟ್ಟ ಕನಸೇ ಸರಿ ಅಂತ ತೀರ್ಮಾನಿಸಿದೆ. ಮೌನವಾಗಿ ಹೋಗಿ ಮೂರ್ತಿಯ ತೋಳುಗಳಲ್ಲಿ ಸೇರಿಕೊಂಡೆ. ಆತ 'ಸಾರಿ ಕಮಲಾ' ಅಂದ. ಮತ್ತೆ ಆಳು ಉಕ್ಕಿ ಬಂತು ....' ಓದುತ್ತಿದ್ದಂತೆ ಶಶಿಗೆ ಯಾಕೋ ಗಂಟಲುಬ್ಬಿ ಬಂದಂತಾಯಿತು. ಪ್ರೀತಿ- ವಿಶ್ವಾಸದ ಬಗೆಗೆ ತುಂಬ ರೋಮ್ಯಾಂಟಿಕ್ ವಿಚಾರಗಳನ್ನಿರಿಸಿಕೊಂಡಿದ್ದ ಕಾಲೇಜು ಹುಡುಗಿ ಕಮಲಾ ನೆನಪಾದಳು ಆಕೆಗೆ ; ಪ್ರೀತಿಸಿದ ವ್ಯಕ್ತಿಯನ್ನು ಕನಸಿನಲ್ಲೂ, ಕಲ್ಪನೆಯ್ಲಲೂ ಅನುಮಾನಿಸಲಾರದ ದೃಢ ಮನಸ್ಕ ಪ್ರೇಮಿಯ ಶೋಧದಲ್ಲಿದ ಕಮಲಾ....ಆದರೆ ಈ ಮನುಷ್ಯ -