ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೪ ನಡೆದದ್ದೇ ದಾರಿ

         'ಮೊನ್ನಿನ ತನ್ನ ವರ್ತನೆಗಾಗಿ ಮೂರ್ತಿ ನಂತರ ತುಂಬ ಪಶ್ಚಾತ್ತಾಪ ವ್ಯಕ್ತಪಡಿಸಿದ. ಇನ್ನೆಂದೂ ಕೈಯೆತ್ತುವುದಿಲ್ಲೆಂದು ಪ್ರಮಾಣ ಮಾಡಿದ. ಮುಳುಗಿ ಹೋಗುತ್ತಿರುವವಳಿಗೆ ಸಿಕ್ಕ ತೇಲುತ್ತಿರುವ ಕಡ್ಡಿಯ ಆಧಾರದ ಹಾಗೆ ತೀರ ಡೆಸ್ಪರೇಟ್ ಆಗಿದ್ದ ನನಗೆ ಆ ಆಶ್ವಾಸನೆಯಿಂದ ಎಷ್ಟೋ ಸಮಾಧಾನವಾಯಿತು. ಕುಡಿದ ನಿಶೆಯಲ್ಲಿ ತಾನು ಹಾಗೆ ಬ್ರೂಟಲ್ ಆಗಿ ವರ್ತಿಸಿದ್ದಕ್ಕಾಗಿ ಆತ ಕ್ಷಮೆ ಸಹ ಬೇಡಿದ. ನಾನು ಕ್ಷಮಿಸದಿರುವುದು ಹೇಗೆ ಸಾಧ್ಯ ? ಆತ ನನ್ನ ಮೂರ್ತಿ ಅಲ್ಲವೆ ? ನಾನು ಕ್ಷಮಿಸಿದೆ, ಮರೆತೆ.
          " ಆದರೆ ಈ ನನ್ನ-ನನ್ನವನೇ ಆದ- ನನ್ನ ಜೇವಪ್ರಾಣವಾದ ಮನುಶ್ಯ ಟೆಂಥ್ ರೇಟ್ ಕುಡುಕ ಕಾರ್ಮಿಕನೊಬ್ಬನ ಹಾಗೆ ನನ್ನ ಬಗ್ಗೆ ಸಂಶಯ ತಾಳಬಲ್ಲನೆಂಬ ಅಂಶ ಮಾತ್ರ ನನ್ನ ತೀರ ಆಳದಲ್ಲಿ ಚುಚ್ಚಿ ಆಚೆ ಪಾರಾಗಿ ಹೋಯಿತು.... ಆತ ನನಗೆ  ಉಪಯೋಗಿಸಿದ್ದ ಆ ಬೈಗುಳ ಪದಗಳು ನೆನಪಾದಾಗಲಂತೂ ನಾನು ಕಣ್ ಕಣ್ಣು ಬಿಡುತ್ತೇನೆ. ಹುಟ್ಟಿದ ನಂತರ ಎಂದೂ ಯಾರ ಬಾಯಿಂದಲೂ ಇಂಥ ಮಾತು ಕೇಳಿರಲಿಲ್ಲ. ಗಂಡ ಅನ್ನಿಸಿಕೊಂಡವನಿಂದ ಕೇಳಬೇಕಾಯಿತೇ.... ಅಥವಾ ಬಹುಶಃ ಆ ಶಬ್ದಗಳಿಗೆ ಮೂರ್ತಿಯ ದೃಷ್ಟಿಯಲ್ಲಿ ವಿಶೇಷ ಅರ್ಥವಿರಲಾರದು. ಆಗ ಆತ ಬಹಳವಾಗಿ ಕುಡಿದಿದ್ದನೆಂದು ಕಾಣುತ್ತದೆ. ನಂತರ ಆತನಿಗೇ ಪಶ್ಚಾತ್ತಾಪವಾಯಿತಲ್ಲ...."

- ಕಮಲಾ ತನ್ನನ್ನು ತಾನೆ ಸಂತಯಿಸಿಕೊಳ್ಳುವ ಈ ಪರಿಯ ಬಗ್ಗೆ ಶಶಿಗೆ ಅಯ್ಯೋ ಪಾಪ ಅನ್ನಿಸಿತು.

                                 ***

"ಗುಡ್ ಮೋರ್ನಿಂಗ್ ಶಶಿ" ವ್ಹಿ.ಟಿ. ಸ್ಟೇಶನ್ ಮೇಲೆ ಶಶಿ ಲೋಕಲ್ ಇಳಿಯುತ್ತಲೇ ಅವಳನ್ನು ಸ್ವಾಗತಿಸಲೆಂಬಂತೆ ನಿಂತಿದ್ದ ಸತೀಶ ದೇಶಪಾಂಡೆ. "ಹಲೊ ಸತೀಶ, ಇದೇನು ಇಲ್ಲಿಗೆ ಬಂದೀ ? ರಜಾಗಿಜಾ ತಗೊಂಡು ಊರಿಗೆ ಹೊರಟೀಯೇನು ?"ಯಾವ ಆಶ್ಚರ್ಯ-ಕುತೂಹಲವೂ ಇಲ್ಲದ ಧ್ವನಿ ಶಶಿಯದು.

"ಊರಿಗೆ ಹೊರಟಿಲ್ಲ. ಅದರ ಸನಿಹದಾಗ ಹೋಗಬೇಕಾಗೇದ. ಅದಕ್ಕS ನಿನಗ ಹೇಳ್ಲಿಕ್ಕೆ, ನಿನ್ನೆ ಕೂಡ ಸ್ವಲ್ಪ ಮಾತಾಡಲಿಕ್ಕೆ ಅಂತ ಇಲ್ಲೀ ತನಕಾ ಬಂದೆ, ನನ್ನ ಕಾರು ತೆಗೊಂಡು ಬಂದೀನಿ. ನಿನ್ನ ಡ್ಯೂಟೀ ಸುರು ಆಗ್ಲಿಕ್ಕೆ ಇನ್ನೂ ಒನ್ದು ತಾಸು ಟೈಮು ಅದ. ಅಲ್ಲೀ ತನಕಾ ನನ್ನ ಕೂಡ ಟೈಮ್ ಕಳೀಲಿಕ್ಕೆ ಏನರೆ ಆಬ್ಜೆಕ್ಷನ್ ಅದS ಏನು ?" - ಸತೀಶ ಗಂಭೀರನಾಗಿ ಕೇಳಿದ.