ಈ ಪುಟವನ್ನು ಪರಿಶೀಲಿಸಲಾಗಿದೆ
೪೨೬ ನಡೆದದ್ದೇ ದಾರಿ
ಎಚ್ಚರಿಸಿದಳು, "ಸಿನಿಮಾದಾಗಿನ ಟ್ರ್ಯಾಜಿಕ್ ಹೀರೋನ಼ಾoಗ ಬಿಹೇವ್ ಮಾಡಬ್ಯಾಡ ಸತೀಶ್, ನನಗ ರಸ್ತೇ ಅಪಘಾತದಾಗ ಸಾಯೋ ಮನಸ್ಸಿಲ್ಲ." ಸತೀಶ ಮಾತಾಡಲಿಲ್ಲ. * * * ರವಿವಾರ. ಎಂದಿನಂತೆ ಶಶಿ ಹತ್ತರ ಲೋಕಲ್ ಹಿಡಿಯಲು ಓಡಬೇಕಾಗಿಲ್ಲ . ಒಂದೊಂದು ಸಲ ರವಿವಾರವೂ ಆಕೆ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಇವತ್ತು ಇಲ್ಲ. ಇವತ್ತು ಬೇಗನೆ ಊಟ ಮುಗಿಸಿ ಹಾಸಿಗೆಯ ಮೇಲುರುಳಿಕೊಂಡು ಕಮಲಾನ ಡಾಯರಿ ಆದಷ್ಟು ಓದಿ ಮುಗಿಸಬೇಕು ಆಂದುಕೊಂಡಳು. ಸ್ನಾನ ಮಾಡಿ ಹಾಗೆಯೇ ಕಮಲಾನ ಬ್ಲಾಕಿನ ಕಡೆ ಒಂದು ರೌಂಡ್ ಹೋಗಿ ಹುಡುಗರನ್ನು ವಿಚಾರಿಸಿಕೊಂಡು ಬರಬೇಕೆಂದು ಹೋದಳು. ಶಶಿಯನ್ನು ನೋಡಿ ರಾಜು-ನೀಲಾರಿಗೆ ಖುಶಿಯಾಯಿತು. ಕಾಲೇಜಿನಲ್ಲಿ ಓದುತ್ತಿದ್ಧ ಹುಡುಗರು ಅವರಿಬ್ಬರೂ. ಅವರ ಪಾಲಿಗೆ ಕಮಲಾ ತಾಯಿ- ತಂದೆ ಎಲ್ಲಾ ಆಗಿದ್ಧಳು. ಅವರಿಗೆ ಏನೆಂದು ಹೇಳಿ ಹೋಗಿದ್ದಾಳೋ ? "ಆಂಟಿಗೆ ಮೈಸೂರಿನ್ಯಾಗ ಫಿಲ್ಮಿ ನೊಳಗ ಆಕ್ಟ್ ಮಾಡ್ಲಿಕ್ಕೆ ಯಾರೋ ಪ್ರೂಡ್ಯುಸೆರ್ ಕರದಾರಂತ. ತಿರಿಗಿ ಬರಲಿಕ್ಕೆ ಭಾಳ ದಿನಾ ಆದೀತು ಅಂತ ಅಂದಳು. ಅದಕ್ಕಂತ ಆನಕಾತ ಇಲ್ಲೆ ಬಂದಿರ್ರಿ ಅಂತ ನಮ್ಮ ತಾಯಿಯವರಿಗೆ ತಿಳಿಸಿ ಹೋಗ್ಯಾಳ. ವಿಜಾಪೂರದಿಂದ ನಮ್ಮ ತಾಯಿ ಬರವ್ರಿದ್ದಾರ ನಾಳೆ-ನಾಡದ ಇಷ್ಟ್ ರಾಗ " -ನೀಲಾ ವಿವರಿಸಿದಳು. "ಮತ್ತೇನರೆ ಹರಕತ್ತಾದರ ಏನೂ ಸಂಕೋಚ ಮಾಡಿಕೊಳ್ಳ ಲಾರದೇ ನನ್ನ ಕಡೆ ಬಾ ನೀಲಾ, ಏನು ಹೆಲ್ಟ್ ಬೇಕಾಗಿದ್ರೂ ಕೇಳು", ಶಶಿ ತುಸು ತಡೆದು ಸೇರಿಸಿದಳು, "ಏನರೆ ಹಣದ್ದು ಆಡಚಣಿ ಇದ್ಧರ -" "ಅದೆಲ್ಲಾ ವ್ಯವಸ್ಥಾ ಆಂಟಿ ಮಾಡೇ ಹೋಗ್ಯಾಳ್ರಿ ಡಾಕ್ಟರ್ ", ನೀಲಾ ಹೇಳಿದಳು, "ಬ್ಯಾಂಕಿನೊಳಗ ನನ್ನ ಹೆಸರ್ಲೆ ಅಕೌಂಟ್ ಓಪನ್ ಮಾಡಿ ತಿಂಗಳಾ ನಮಗ ಬೇಕಾಗೋವಷ್ಟು ಅಮೌಂಟ್ ತಗೊಳ್ಲಿಕ್ಕೆ ಹೇಳ್ಯಾಳ. ಮತ್ತೇನರೆ ಆವಶ್ಯ ಬಿದ್ರ ನಿಮಗ ಕೇಳು ಅಂತನೂ ಹೇಳ್ಯಾಳ ." ಶಿವಮೂರ್ತಿಯ ಕಂಪನಿಯ ನಾಟಕಗಳಲ್ಲಷ್ಟೇ ಅಲ್ಲದೆ ಆಗೀಗ ಬೇರೆ ಕಂಪನಿಗಳು-ಸಂಘ ಸಂಸ್ಥೆಗಳು ಆಹ್ವಾನಿಸಿದಾಗ ಬೇರೆ ನಾಟಕಗಳಲ್ಲೂ ಅಭಿನಯಿಸುತ್ತಿದ್ದ ಕಮಲಾ ಸಾಕಷ್ಟು ಹಣ ಮಾಡಿದ್ಧಳು. ಅವಳು ಪೇಯಿಂಗ್ ಗೆಸ್ಟ್ ಆಗಿ ಸೇರಿಕೊಂಡಿದ್ದ ಮನೆಯ ಗುಜರಾಥಿ ದಂಪತಿಗಳು ಯಾವುದೋ ಕಾರಣಕ್ಕಾಗಿ ಮರಳಿ ಗುಜರಾಥಕ್ಕೆ ಹೋದುದರಿಂದ ಆದೇ ಮನೆಯನ್ನೇ ಇನ್ನಷ್ಟು ಹಣ ಕೊಟ್ಟು ಬಾಡಿಗೆ ಹಿಡಿದಿದ್ದಳು. ಐದಾರು ವರ್ಷಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ಆಗಿ