ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೮ ನಡೆದದ್ದೇ ದಾರಿ

      ಈ ಜನ್ಮದಲ್ಲಿ ನನಗೆ ಸುಖ ಸಂತೋಷ ಲಭ್ಯವಿರುವುದೇ ಆದಲ್ಲಿ ಅದು                     
      ಮೂರ್ತಿಯ ಪ್ರೀತಿಯಲ್ಲಿ, ಸಹವಾಸದಲ್ಲಿ ಮಾತ್ರ."
      ಅನೇಕ ದಿನಗಳ ವರೆಗೆ ಈ ವಿಷ್ಯಯದಲ್ಲಿ ಮಾತ್ರ ಕಮಲಾನ ಅಭಿಪ್ರಾಯ      
ಸರಿಯಿರಬಹುದೇನೋ ಅನಿಸುತ್ತಿತ್ತು ಶಶಿಗೆ. ಶಿವಮೂರ್ತಿ ಮನುಷ್ಯ ಎಂಥವನೇ                 
ಆಗಿರಲಿ, ಆತ ಕಮಲಾನನ್ನು ಪ್ರೀತಿಸುವುದು ಮಾತ್ರ ನಿಜವಿರಲೇಬೇಕು. ಇಲ್ಲವಾದರೆ           
ಯಾರು ಹೀಗೆ ರಿಸ್ಕ್ ತೆಗೆದುಕೊಂಡು ಕಾನೂನುಬಾಹಿರ ಎರಡನೆಯ                
ಲಗ್ನವಾಗುತ್ತಾರೆ? ಒಂದು ರೀತಿಯಿಂದ ಇದೂ ದೊಡ್ಡ ತ್ಯಾಗವೇ.
      ಆದರೆ ಈ ತ್ಯಾಗಪುರುಷನ ನಿಜವಾದ ಬಣ್ಣಗಳು ಒಂದೊಂದೇ ಬಯಲಿಗೆ           
ಬರತೊಡಗಿ ಕಮಲಾನ ಅಚಲ ನಂಬಿಗೆ ತುಸು-ತುಸುವಾಗಿ ಕುಸಿಯತೊಡಗಿದ್ದು                
ಮಾತ್ರ ಶಶಿಗೆ ತಿಳಿದಿರಲಿಲ್ಲ:
         "ಮೂರ್ತಿ ಈಗೀಗ ಯಾಕೋ ಮಾತುಮಾತಿಗೆ ಸಿಡುಕುತ್ತಾನೆ. ನನ್ನ            
    ಮೇಲಿರಲಿ, ರಾಜು-ನೀಲಾರ ಮೇಲೂ ಸಿಡುಕತೊಡಗಿದ್ದಾನೆ. ಪಾಪ ನೀಲಾ,         
   'ನಾವಿಲ್ಲಿರೋದು ಮೂರ್ತಿ ಅಂಕಲ್ ಗೆ ಸೇರೋದಿಲ್ಲ ಕಾಣಸ್ತದ ಆಂಟೀ,                            
    ಸುಮ್ನ ನಮ್ಮ ಸಲುವಾಗಿ ಗಂಡಾ-ಹೆಂಡ್ತಿ ನಡುವ ಮನಸ್ತಾಪ ಆಗೋದು                    
    ಬ್ಯಾಡ, ಥಣ್ಣಗೆ ನಮ್ಮನ್ನು ವಿಜಾಪೂರಕ್ಕೆ ತಿರುಗಿ ಕಳಿಸಿ ಬಿಡು. ಮನೀ ಆದ,                                     
    ಅವ್ವ ಇದ್ದಾಳೆ, ಕಾಲೇಜೂ ಆದ.ನಮ್ಮದು ಹ್ಯಾಂಗೋ ನಡೀತದ. ನೀನರೆ                  
    ಆರಾಮ ಇರು', ಅಂತ ಕಣ್ಣಲ್ಲಿ ನೀರು ತಂದು ಹೇಳಿದಳು.ಹಾಗಲ್ಲ, ಮೂರ್ತಿ          
    ಸಿಡುಕುವುದಕ್ಕೂ ಹುಡುಗರು ಇಲ್ಲಿರುವುದಕ್ಕೂ ಏನೂ ಸಂಬಂಧವಿಲ್ಲ ಅಂತ              
    ನೀಲಾಳನ್ನು ಸಮಾಧಾನಪಡಿಸಬೇಕಾದರೆ ಸಾಕಾಯಿತು.
            ನೀಲಾಗೆ ಏನೇ ಹೇಳಿದರೂ ನನಗೆ-ನನ್ನ ಒಳಗೆ ಎಲ್ಲೋ ಒಂದೆಡೆಗೆ                     
    ಅನಿಸುತ್ತಿದೆ, ಮೂರ್ತಿ ಯಾಕೋ ವಿಶೇಷವಾಗಿ ನೀಲಾಳನ್ನು ಕಂಡರೆ                
    ಸಿಡುಕುತ್ತಾನೆ. ಆ ಹುಡುಗಿ ಏನು ಮಾಡಿದರೂ ತಪ್ಪು. ಸಂಗೀತ ಕ್ಲಾಸಿಗೆ                         
    ಹೋದರೆ ತಪ್ಪು, ಸಿನೇಮಾಕ್ಕೆ ಹೋದರೆ ತಪ್ಪು, ಕಾಲೇಜಿನಲ್ಲಿನ                                     
    ಯಾವುದಾದರೂ ಸಮಾರಂಭಕ್ಕೆ ಹೋದರೆ ತಪ್ಪು, ಯಾರೊಡನಾದರೂ           
    ಮಾತಾಡಿದರಂತೂ ತೀರ ದೊಡ್ಡ ತಪ್ಪು. ಛೆಂದಾಗಿ ಮರ್ಯಾದಿಹಿಂದ                        
    ಕಾಲೇಜಿಗೆ ಹೋಗಿ ಸೀದಾ ಮನೀಗೆ ಬಾ ಅಂತ ಹೇಳು ಆ ಹುಡುಗಿಗೆ. ಸಂಗೀತ                                                  
    ಕಲ್ತು ಈಕೇನು ನಾಚ್ ವಾಲಿ ಆಗಾಕೇನು? ಸಿನೇಮಾದ ಚಟಾಯಾಕ ಈಕೀಗೆ?                   
    ಅದ್ಯಾಕ ಎಲ್ಲಾರ ಕೂಡ ಫಿದೀ ಫಿದೀ ನಕ್ಕೋತ ಮಾತಾಡ್ತಾಳ? ನಿನ್ನ ಸಲಿಗಿ                    
    ಆದs ಆಕೀಗೆ, ಅದಕ್ಕs ಹಿಂಗ ಹಾದೀ ಬಿಡ್ಲಿಕಹ್ತ್ಯಾಳ. ನನಗೇನು ಇದು ಸರೀ