ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...
೪೨೯

ಬರೂದಿಲ್ಲ.-ಹೀಗೇ ಏನೇನೋ.
ನೀಲಾ ಸ್ವಲ್ಪ ಸೋಶಿಯಲ್ ಇರುವುದು ನಿಜ. ತುಂಬಿ ಹರಿಯುವ
ಜೀವನೋಟತ್ಸಾಹವುಳ್ಳ ಹದಿನೆಂಟರ ಪ್ರಾಯ ಅವಳಿಗೆ.ಈ ವಯಸ್ಸಿನಲ್ಲಿ
ಜೊತೆಯವರೊಂದಿಗೆ ನಗುತ್ತ,ಕಲೆಯುತ್ತ ಇರಬಾರದೆ ? ಸಿನೆಮಾ
ನೋಡಬಾರದೆ ? ಸಂಗೀತದಲ್ಲಿ ಆಸಕ್ತಿ ಇದ್ದರೆ ಕಲಿಯಬಾರದೆ ?
ಎಲ್ಲದರಲ್ಲೂ ಈತ ಡೊಂಕು ಕಾಣುವುದೇಕೆ ?
'ನನ್ನ ಮಗಳು ಅಪರ್ಣಾ ಈಗ ಎಷ್ಟು ಛೆಂದ ಡಾನ್ಸ್ ಮಾಡ್ತಾಳಂತೀ
ಕಮಲಾ, ಆಕಗೆ ಭರತನಾಟ್ಯದ್ದು ಛಲೋ ನ್ಯಾಕ್ ಆದ ನೋಡು. ದೇವದತ್ತ
ಕಲಾ ಅದs ಆಕೀಗೆ,'ಅನ್ನುತ್ತಾನೆ ಇದೇ ಮೂರ್ತಿ.ಅದೆಷ್ಟೋ ಸಲ ಮಧ್ಯಾ
ಹ್ನ ಬಂದು, 'ಹುಡುಗೂರ್ನ -ಆಕೀನ್ನ ಸಿನಿಮಾಕ್ಕ ಕಳಿಸಿ ಬಂದೆ. ಆವರಿಗೂ
ಏನರೆ ಎಂಟರ್ ಟೇನ್ ಮೆಂಟ್ ಬೇಕಲ್ಲಾ ಮತ್ತ,'ಅನುತ್ತಾನೆ.ನಿನ್ನ ಮಗಳು
ಡಾನ್ಸ್ ಕಲಿತು ಏನಾಗಬೇಕನ್ನುತ್ತಾಳೆ- ಅಂತ ಕೇಳಬೇಕನಿಸಿದರೂ ನಾನು
ಕೇಳುವುದಿಲ್ಲ. ಬೇರಯವರ ಹೆಣ್ಣು ಮಕ್ಕಳ ವಿಷಯದಲ್ಲಿ ಹಗುರವಾಗಿ
ಮಾತನಾಡುವದು ನನಗೆಂದೂ ಸೇರುವುದಿಲ್ಲ. ಮೂರ್ತಿಗೇಕೆ ಇಂಥ
ಸಂಕುಚಿತ ಬುದ್ದಿಯೋ.
ಮೊನ್ನೆ ನಿಲಾ ಅಳುತ್ತ ಬಂದು ಹೇಳಿದಳು,'ಆಂಟಿ,ಕಾಲೇಜು ಬಿಟ್ಟು
ಬರೋವಾಗ ಎದುರಿನ ಮನೀ ಪ್ರಕಾಶ ಭೆಟ್ಟಿಯಾಗಿದ್ದ. ಅವನು ನನ್ನ
ಕ್ಲಾಸ್ ಮೇಟ್, ಭಾಳ ಹುಷಾರ ಹುಡುಗ. ಸ್ಟೇಶನ್ನಿನಿಂದ ಮನೀತನಕಾ ನನ್ನ
ಕೂಡ ಬಂದ. ಅವನ ನೋಟ್ಸ್ ಬೇಕಾಗಿದ್ದವು ಅಂತ ನಾನs ಮೊದ್ಲ
ಮಾತಾಡ್ಸಿದ್ದೆ. ಮೂರ್ತಿ ಅಂಕಲ್ ಯಾವಾಗ ಹಿಂದಿನಿಂದ ಬಂದರೋ
ಏನೋ, ನಡು ರಸ್ತೇದಾಗ ಇಬ್ರನ್ನೂ ನಿಲ್ಲಿಸಿ ಪ್ರಕಾಶಗ ಸಿಕ್ಹಾಂಗ ಬೈದು
ಬಿಟ್ರು. 'ಲಫಂಗ, ಮಂದೀ ಹುಡಿಗ್ಯಾರ ಬೆನ್ನು ಹತ್ತುತ್ತೀಯಾ' ಅಂದರು.
ಆತ ಪಾಪ , ಕಕ್ಕಾವಿಕ್ಕಿಯಾದ. ತನ್ನ ತಪ್ಪೇನು ಅಂತ ಕಡಿಕೂ ಗೊತ್ತಾಗ್ಲಿಲ್ಲ
ಅವನಿಗೆ. ಅಂಕಲ್ ಕಡೆ ಬೈಸಿಕೊಂಡು ಸುಮ್ನ ತಲೀ ತಗ್ಗಿಸಿಕೊಂಡು
ಹೋಗಿಬಿಟ್ಟ ಪಾಪ. ನನಗೆ ಎಷ್ಟು ಇನ್ಸಲ್ಟ್ ಆತು.... ಕಾಲೇಜಿನ್ಯಾಗ
ಮುಖಾ ಎತ್ತಿ ತಿರಿಗ್ಯಾಡೂದು ಶಕ್ಯ ಇಲ್ಲ ಇನ್ನ. ಪಾಪ, ಪ್ರಕಾಶ ಎಷ್ಟ
ಛಲೋ ಹುಡುಗ....'
-ಹೌದು. ಒಳ್ಳೆಯ ಆಟಗಾರನ ಮೈಕಟ್ಟುಳ್ಳ ಡೀಸೆಂಟ್ ಕಾಣುವ
ಸ್ಮಾರ್ಟ್ ಹುಡುಗ ಪ್ರಕಾಶ.... ವಿನೋದ ಸಹಾನಿಯ ಹಾಗೆ.ವಿನೋದನನ್ನು