ಪುಟ:ನಡೆದದ್ದೇ ದಾರಿ.pdf/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೦ ನಡೆದದ್ದೇ ದಾರಿ

ಕಂಡರೂ ಮೂರ್ತಿಗೆ ಆಗುವುದಿಲ್ಲ. ಈಗ ಪ್ರಕಾಶನ ಮೇಲೆ ಸಿಟ್ಟು. ಆತನ ದೃಷ್ಟಿಯಲ್ಲಿ ಸ್ಮಾರ್ಟ್ಆಗಿರುವ, ವಯಸ್ಸಿನಿಂದ ಚಿಕ್ಕವರಾಗಿರುವ, ಇಂಪ್ರೆಸ್ಸಿವ್ಹ್ ಆಗಿರುವ ತರೋಣರೆಲ್ಲಾ 'ಬದ್ಮಾಶ್ ಸೂಳೇ ಮಕ್ಕಳ' ....ಇದು ಎಂಥ ವಿಚಿತ್ರ ಕಾಂಪ್ಲೆಕ್ಸ್!

       ಇಷ್ಟೇ ಆಗಿದ್ದರೆ ನಾನು ಯೋಚಿಸಬೇಕಾಗಿರಲಿಲ್ಲ. 'ಅವರ ಸ್ವಭಾವನೆ  ಹಾಂಗೆನೀಲಾ, ನಾವು ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು.ಬಾಯಿಯಿಂದ ಏನೆ ಅಂದ್ರೂ ಮನಸ್ಸಿನಿಂದ ಅವರು ಕೋಸಿನಂಥವರು' ಅಂತ ನೀಲಾಗೆ ಹೇಳಿ ಸಮಾಧಾನಗೊಳಿಸಿದೆ ನಿಜ, ಆದರೆ ಸ್ವತಃ ನನಗೇ ನನ್ನ ಮಾತಿನಲ್ಲಿ ನಂಬಿಕೆಯಿಲ್ಲದಂತಾಗತೊಡಗಿದೆ."
        ಕಮಲಾನ ಎಲ್ಲ ನಂಬಿಕೆಗಳೂ ಹಾಗೆ ಒಂದೊಂದಾಗಿ ಕುಸಿಯತೊಡಗಿದ್ದವು. ಮೂರ್ತಿಯ ಮೇಲಿನ ನಂಬಿಕೆ, ತನ್ನ ಮೇಲಿನ ನಂಬಿಕೆ, ಜೀವನದ ಮೇಲಿನ ನಂಬಿಕೆ, ಆದರ್ಶಗಳ ಮೇಲಿನ ನಂಬಿಕೆ, ಎಲ್ಲ ನಿಧಾನವಾಗಿ ಕಾರಗತೊಡಗಿದ್ದವು. 
        "ನಿನ್ನೆ ಸಂಜೆ ಬಹಳ ಬೇಸರ ಬೊಂದಿತ್ತು. ಇಡೀಯ ದಿನದ ಕೆಲಸದಿಂದ ದಣಿವೂ ಆಗಿತ್ತು. ರಾಜು ವಿಜಾಪುರಕ್ಕೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬಳೇ ಇದ್ದು ಬೀಸರವಾಗಿದ್ದರಿಂದಲೋ ಏನೋ ನೆರೆಮನೆಯ ಶಾಂತಾ ಆಪ್ಟೆಯೊಂದಿಗೆ  ನೀಲಾ ಮಧ್ಯಾಹ್ನದ ಪಿಕ್ಚರಿಗೆ ಹೋಗಿದ್ದಳು, ಇನ್ನೂ ಬಂದಿರಲಿಲ್ಲ. ಇದ್ದಕ್ಕಿದಂತೆ ಮುಗಿಲೆಲ್ಲ ಕಪ್ಪಾಗಿ ಮಳೆ ಹನಿಯಂತೊಡಗಿತು. ಆಗಲೇ ಮಳೆಗಾಲ ಪ್ರಾರಂಭವಾಗಿದ್ದರಿಂದ ತಣ್ಣಗಿನ ಹವೆ ಬೀಸತೊಡಗಿತು. ಮನೆಗೆಲ್ಲ ಒಬ್ಬಳೇ ಇದ್ದೆ. ಈಗ ಮೂರ್ತಿ ಬರಬಾರದೇ, ಈ ಮಳೆಯಲ್ಲಿ, ಕತ್ತಲಲ್ಲಿ, ಚಳಿಯಲ್ಲಿ ಆತನನ್ನಪ್ಪಿ ಬೆಚ್ಚಗೆ ಮಲಗುವುದು ಎಷ್ಟು ಚೆನ್ನ ಅನ್ನಿಸಿತು.
       -ಹಿಂದಿನ ನೆನಪುಗಳು ಕಾಡಿದವು....
       -ಒಂದು ಸಲ ಮಳಗಾಲದಲ್ಲಿ ಇಬ್ಬರೂ ಮಹಾಬಳ್ಳೇಶ್ವರಕ್ಕೆ ಹೋಗಿದ್ದೆವಲ್ಲ. 'ಕೆಟ್ಟ ಥಂಡೀ ಹವಾದಾಗ ಇದೆಂಥ ಹನೀಮೂನ್ ರೆಪಾನಿಂಮ್ದು' ಅಂತ ಮ್ಯಾನೇಜರ್ ಗಾಡಗೀಳ ಚೇಷ್ಟೆ ಮಾಡಿದ್ದ. ಅವನಿಗೇನು ಗೊತ್ತು, ನಾವಿಬ್ಬರೂ ಒಟ್ಟಿಗಿದ್ದಾಗ ಚಳಿ-ಮಳೆ-ಬಿಸಿಲು ಯಾವುದೂ ತಾಗುವುದಿಲ್ಲ ಅಂತ ? ಮಹಾಬಲೇಶ್ವರದ ದಟ್ಟಡವಿಯಲ್ಲಿ ಧೋಧೋ ಮಳೆ ಸುರಿಯುತಿದ್ದಾಗ ಕೈಕೈ ಹಿಡಿದುಕೊಂಡು ನಿಧಾನವಾಗಿ ತೋಯಿಸಿಕೊಳ್ಳುತ್ತ ಹಕ್ಕಿಗಳಂತೆ ಚಿಲಿಪಿಲಿ ಮಾತಾಡುತ್ತ ಎರೆಡು-ಮೂರು