ಪುಟ:ನಡೆದದ್ದೇ ದಾರಿ.pdf/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೧ ಮೈಲು ದಾರಿ ನಡೆದಿದ್ದೆವು. ಯಾವ ಕೆಲಸಕ್ಕೋ ಆ ಕಡೆ ಹಾಯ್ದು ಹೋದ ಫಾರೆಸ್ಟ್ ಡಿಪಾರ್ಟ್ಮೆಂಟಿನ ಜೀಪಿನ ಡ್ರೈವರ್ ನಮ್ಮನ್ನು ನೋಡಿ ಯಾರೋ ಪಾಪ ಮಳೆಯಲ್ಲಿ ಸಿಕ್ಕಿದ್ದಾರೆ ಅಂದುಕೊಂಡು ಜೀಪು ನಿಲ್ಲಿಸಿ 'ಬರ್ರಿ ಡ್ರಾಪ್ ಕೊಡ್ತೀನಿ' ಅಂದಾಗ ನಾವು ಬೇಡವೆಂದು ಕೇಳಿ ಆಶ್ಚರ್ಯದಿಂದ ಎರೆಡು ನಿಮಿಷ ನಮ್ಮನ್ನೇ ನೋಡಿ ಮುಂದೆಹೋದನಲ್ಲ, ಖಂಡಿತ ನಾವು ಹುಚ್ಚರೆಂದುಕೊಂಡಿರಬೇಕು. ಆತ ಏನಂದುಕೊಂಡಿರವೇನೆಂದು ನೆನೆದು ನಾವು ನಕ್ಕಿನಕ್ಕಿದೇವು. ಹಾಗೆ ನೋಡಿದರೆ ಹಾಗೇ ನಾವು ಹುಚ್ಚರೇ ಆಗಿದಿಲ್ಲವೇ?

       -ಇಂಒಂದುಸಲ ಮಹಾಬಲೇಶ್ವರದ ಈಘಟನೆಗಿಂತ ಬಹಳ ಹಿಂದೆ - ನಾನು ಮುಂಬೈಗೆ ಬಂಡ ಹೊಸದರಲ್ಲಿ ಒಮ್ಮೆ ಜಡಿ ಮಳೆ ಬೀಳತೊಡಗಿತು. ಆದಿನ ಕಂಪನಿಯಲ್ಲಿ ರಿಹರ್ಸಲ್ ಮುಗಿಯಲು ಬಹಳ ತಡವಾಯಿತು. ನಾನು ಕೇಳದಿದ್ದರೂ ನನನ್ನು ಕಲಿಸಲು ಬರುವೇನೆಂದು ಹೇಳಿ ಮೂರ್ತಿ ಕಾರು ತೆಗೆಕೊಂಡು ಬಂದ. ರಾತ್ರಿ ಹತ್ತು ಗಂಟೆಯಾಗಿರಲು ಬಂದಿರಬೇಕು. ನನಗಿನ್ನೂ ಆಗ ಮುಂಬೈಯ್ಯ ದಾರಿಯ ಪರಿಚೆಯವಿರಲಿಲ್ಲ. ಆದರೂ ಕಂಪನಿಯ ಆಫೀಸಿನಿಂದ ಅಮ್ಮ ಮನೆಗೆ ಚರ್ರಿನಲ್ಲಿ ಹೂಗಳು ಸುಮಾರು ಒಂದು ತಾಸಿಗಿಂತ ಹೆಚ್ಚಿನ ಸಮಯ ಬೀಕಾಗುವುದಿಲ್ಲವೆಂದು ಅಂದಾಜು ಗೊತ್ತಿತ್ತು. ಆದರೆ ಎಷ್ಟು ಹೊತ್ತುಆದರು ಕಾರು ಹಾಗೆ ಸಾಗುತ್ತಿದುದ್ದನ್ನ ನೋಡಿ ಸಂಶಯದಿಂದ ಕೇಳಿದೆ,'ನಾವು ಹೊರಟಿದ್ದು ಎಲ್ಲಿಗೆ ಡೈರೆಕ್ಟರ್ ಸಾಹೇಬರೇ?'
       -ಆತ ಸುಮ್ಮನಿದ್ದ.
       -ನನಗೆ ಹೆದರಿಕೆಯಾಗಲಿಲ್ಲ. ಆ ಮನುಷ್ಯನಬಗ್ಗೆ ನನಗೆ ತುಂಬಾ ಕೌತುಕ, ಪ್ರಶಂಸೆ, ಗೌರವ. ಮತ್ತು ಏನೇನೋ ಹೆಸರಿಸಲಾಗದ ಭಾವನೆಗಳಿದುದ್ದರಿಂದ, ಅದಕ್ಕೂ ಹೆಚ್ಚಾಗಿ ನನ್ನ ಮೇಲೆಯೇ ನನಗೆ ಸಾಕಷ್ಟು ಭರವಸೆ ಇದುದ್ದರಿಂದ, ನಾನು ಸುಮ್ಮನೆ ಕುಳಿತೆ.
       ಕೊನೆಗೊಮ್ಮೆ ಕಾರು ನಿಂತದ್ದು ಮುಂಬೈಯ್ಯ ಹೊರಾವಳೆಯದಲಿನ ತೀರಾ ನಿರ್ಜನವಾದ ಯಾವುದೂ ಪ್ರದೇಶದಲ್ಲಿ, ಸುಂದರವಾಗಿ, ಶಾಂತವಾಗಿ ಕಾಣುತಿದ್ದುದೊಂದು ಲಾಜಿಂಗ್ನಾ ಎದುರಿಗೆ.ಅಲ್ಲಿನವರಿಗೆ ಮೂರ್ತಿ ಪರಿಚಿತನಿರಬೇಕು. ವೆಟರುಗಳು - ಸುರ್ವರುಗಳು - ಲಾಜಿಂಗಿನ ಮಾಲೀಕ ಸಹ ಆತನೊಂದಿಗೆ ತುಂಬಾ ಗೌರವದಿಂದ ವರ್ತಿಸುತ್ತಿದ್ದರು. ಏನೂ ವಿಶೇಷ