ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೩೨
ನಡೆದದ್ದೇ ದಾರಿ

ಪ್ರತಿಕ್ರಿಯೆ ತೋರಿಸದೆ ನಾನು ಮೂರ್ತಿಯ ಹಿಂದೆ, ಬಹುಶಃ ಈ ಮೊದಲೇ
ಕಾದಿರಿಸಿದ್ದ ರೂಮಿಗೆ ಹೋದೆ. ಯಾವುದೋ ರಾಜನ ಅಂತಃಪುರದಂತಿತ್ತು
ಅದೆಲ್ಲ. ತುಂಬ ಆತ್ಮವಿಶ್ವಾಸದಿಂದ ನಾನು ಸೋಫಾದ ಮೇಲೆ ಕೂತೆ. ಆತ
ವ್ಹಿಸ್ಕಿ ಕುಡಿಯುವುದನ್ನು ನೋಡುತ್ತಾ ತಣ್ಣಗಿನ ಆ್ಯಪಲ್ ಜ್ಯೂಸ್ ಹೀರಿದೆ.
ನಂತರ-
-ನಂತರ ಯಾವ ಹಿನ್ನಲೆ - ಸೂಚನೆ ಏನೂ ಇಲ್ಲದೆ ನಡೆದಿತ್ತು ಆ
ಘಟನೆ, ಧಡಕ್ಕನೆ ಎದ್ದು ಅನಾಮತ್ತಾಗಿ ನನ್ನನ್ನೆತ್ತಿ ನನ್ನ ಯಾವ
ಪ್ರತಿಭಟನೆಯನ್ನೂ ಲೆಕ್ಕಿಸದೆ ಹಾಸಿಗೆಯಲ್ಲಿ ಕೆಡವಿ ನಾನು ಮಿಸುಗಾಡಲೂ
ಆಸ್ಪದ ಕೊಡದಂತೆ ಆತನ ಬಲವಾದ ತೋಳುಗಳು ನನ್ನನ್ನು ಬಿಗಿದಪ್ಪಿದವು
ಹೊರಗೆ ಮಳೆ ಸುರಿಯುತ್ತಲೇ ಇತ್ತು....
ನಂತರದ ದಿನಗಳಲ್ಲಿ ಹಲವಾರು ಬಾರೀ ಇದೇ ಘಟನೆಯ
ಪುನರಾವರ್ತನೆ. ಇದೆಲ್ಲವನ್ನೂ ವಿರೋಧಿಸಬೇಕೆಂದು ನನಗೆ ತೀವ್ರವಾಗಿ
ಅನ್ನಿಸುತ್ತಿತ್ತು. ಪ್ರತಿಸಲ ಎಲ್ಲ ಮುಗಿದ ನಂತರ ನಾನು ಮೈಯಿಡೀ
ನಡುಗುತ್ತ ಎದೆ ಬರಿದಾಗುವಂತೆ ಅಳುತ್ತಿದ್ದೆ. ಪ್ರತಿಸಲ ಆತ ಕೊನೆಯ ‘ಸಾರಿ
ಕಮಲಾ, ನನ್ನನ್ನ ಕ್ಷಮಿಸು. ಬಟ್ ಆಯ್ ಕಾಂಟ್ ಕಂಟ್ರೋಲ್
ಮಾಯ್‍ಸೆಲ್ಪ್', ಅನ್ನುತ್ತಿದ್ದ. ಪ್ರತಿ ಸಲ ಅದೆಲ್ಲ ನಡೆದಾಗ ನಾನು ಆತನನ್ನು
ಬೈಯುತ್ತಿದ್ದೆ. ಪ್ರತಿಸಲ ಅದೆಲ್ಲ ಮುಗಿದಾಗ ನಾನು ಆತನ ಎದೆಯಲ್ಲಿ
ಮುಖ ಹುದುಗಿಸಿ ಮಲಗಿ ಏನೋ ವಿಚಿತ್ರ ಸಮಾಧಾನ ಅನುಭವಿಸುತ್ತಿದ್ದೆ...
ಈ ಎಲ್ಲ ಘಟನೆಗಳು, ಅವುಗಳ ಪರಿಣಾಮವಾಗಿ ದಿನೇ ದಿನೇ ಗಾಢವಾಗಿ
ಬೆಸೆಯುತ್ತ ಹೊರಟ ನಮ್ಮ ಸಂಬಂಧದ ಎಳೆಗಳ ಪೂರ್ಣ ವಿಶ್ಲೇಷಣೆ
ನನಗೆಂದೂ ಮಾಡಲು ಸಾಧ್ಯವಿಲ್ಲ. ಬಹುಶ: ಇದಕ್ಕೇ ‘ಹಣೆಯಲ್ಲಿ
ಬರೆದಿತ್ತು’ ಅನ್ನುತ್ತಾರೇನೋ...
ಮುಂಬಯಿಯಲ್ಲಿ ಪ್ರತಿವರ್ಷ ಮಳೆಗಾಲ ಬರುತ್ತದೆ. ಸಂಜೆ ಮೋಡ
ಕವಿದು ಮಳೆ ಸುರಿಯುತ್ತದೆ. ಗಾಳಿಯಲ್ಲಿ ಒಂದು ಥರಾ ಬೆಚ್ಚಗಿನ ತಂಪು
ವಾಸನೆ ಬರುತ್ತದೆ... ಆದರೆ ಈಗೀಗ ಮೂರ್ತಿಗೆ ಮಳೆಯ ಬಗೆಗಿನ ಆಸಕ್ತಿ
ಕಡಿಮೆಯಾಗಿದೆ. ಯಾಕೆ ಬಹಳ ದಿನ ಬರಲಿಲ್ಲವೆಂದು ನಾನು ಕೇಳಿದರೆ
‘ಹ್ಯಾಂಗ ಬರ್ಲಿ? ಒಂದೇ ಸಮನೆ ಮಳಿ ಸುರೀತದ ಕಾಣ್ಸೂದಿಲ್ಲ?’
ಅನ್ನುತ್ತಾನೆ. ನನಗೆ ಮಾತ್ರ ಇನ್ನೂ ತೋಯಿಸಿಕೊಳ್ಳುವ, ನೆನಯುವ,
ಉರಿಯುವ, ಬೆಂಕಿಯಾಗುವ, ಗಾಳಿಯಾಗುವ, ಮೋಡವಾಗುವ,