ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...
೪೩೩

ಶೂನ್ಯದಲ್ಲಿ ಶೂನ್ಯವಾಗುವ ಬಯಕೆ.... ಎಂದೆಂದಿಗೂ ಹಿಂಗದ ಬಯಕೆ....
- ಕರೆಗಂಟೆ ಕೇಳಿ ನೀಲಾ ಬಂದಳೇನೋ ಅಂತ ಬಾಗಿಲು ತೆರೆದರೆ
ಎದುರಿಗೆ ಮೂರ್ತಿ, ಎಷ್ಟು ಖುಷಿಯಾಯಿತು ನನಗೆ. ಒಬ್ಬರಿಗೊಬ್ಬರು
ಆಂಟಿಕೊಂಡಂತೆ ಒಳಕೋಣೆಗೆ ಹೋಗಿ ಕೂತೆವು. ಏನೂ ಮಾತಾಡದೆ
ಮೌನವಾಗಿ ಮುತ್ತುಗಳ ವಿನಿಮಯ ನಡೆಯಿತು. ನಂತರ ಆತ ಎಂದಿನಂತೆ
ವ್ಹಿಸ್ಕಿ ಬಾಟಲ್ ತೆರೆದ. ನಾನು ಹಾಗೆಯೇ ಆತನ ಎದೆಗಾನಿಸಿಕೊಂಡು
ಕಣ್ಣು ಮುಚ್ಚಿ ಆ ತಂದ್ರಿಯಿಂದ ಹೊರಬರಲು ಇಷ್ಟವಿಲ್ಲದೆ ಈ ಕ್ಷಣ
ಅನಂತವಾಗಬಾರದೆ ಅಂದುಕೊಳ್ಳುತ್ತ ಕೂತಿದ್ದೆ.
ಅರ್ಧ ಗಂಟೆಯ ನಂತರ ನೀಲಾ ಬಂದಳು. 'ಎಲ್ಲಿ ಹೋಗಿದ್ಳು ?"
ಅಂತ ಮೂರ್ತಿ ಕೇಳಿದಾಗ ಹೇಳಿದೆ, ಆಪ್ಪೆ ಬಾಯಿಯ ಜೊತೆ ಪಿಕ್ಟರಿಗೆ
ಹೋಗಿದ್ದಳು ಅಂತ, ಆಪ್ಪೆ ಬಾಯಿಯಂಥ ಹಿರಿಯ ಹೆಂಗಸೊಂದಿಗೆ
ಹೋದದ್ದರಿಂದ ಆತನ ಆಕ್ಷೇಪಣೆಯಿರಲಾರದು ಎಂಬ ಧೈರ್ಯದೊಂದಿಗೆ,
ಆತ ಸುಮ್ಮನಾದ. ನನಗೆ ಮಾತ್ರ ಒಮ್ಮೆಲೆ ಎಲ್ಲ ಹುರುಪು ಜರ್ರನೆ ಇಳಿದು
ಹೋಯಿತು.
ರಾತ್ರಿ ಹನ್ನೆರಡು ದಾಟಿತು. ಮೂರ್ತಿ ತನ್ನ ಗ್ಲಾಸಿಗೆ ಐದನೇ ಪೆಗ್
ಸುರಿಯುತ್ತಿದ್ದ. ಅಷ್ಟರವರೆಗೂ ಸುಮ್ಮನಿದ್ದ ನಾನು ಮೆಲ್ಲನೆ 'ಸಾಕು
ಮೂರ್ತಿ, ಎಷ್ಟು ಕುಡೀತೀ ?” ಅಂದೆ. “ಶಟ್ಆಪ್' ಅಂದ ಆತ ಒಮ್ಮೆಲೆ
ಒರಟಾಗಿ, ನನಗೆ ಗೊತ್ತಾಯಿತು. ಇನ್ನು ಇಡಿಯ ರಾತ್ರಿ ನಡೆಯಲಿರುವ ಆಟ.
ನಾನು ಎದ್ದು ಹೋಗಿ ನೀಲಾಗೆ ಊಟ ಮಾಡಿ ರೂಮಿನ ಬಾಗಿಲು
ಗಟ್ಟಿಯಾಗಿ ಒಳಚಿಲುಕ ಹಾಕಿಕೊಂಡು ಮಲಗಿಕೊಳ್ಳಲು ಹೇಳಿ ವಾಪಸು
ಬಂದೆ.
ಆರನೆಯ ಪೆಗ್ ಮುಗಿದಾಗ ಕಣ್ಣೆಲ್ಲ ಕೆಂಪಾಗಿ ನೆಟ್ಟಗೆ ನಿಲ್ಲಲೂ
ಆಗದೆ ಜೋಲಿ ಹೊಡೆಯುತ್ತೆ ಎದ್ದು ನಿಂತ ಮೂರ್ತಿ ಒಂದೊಂದಾಗಿ ತನ್ನ
ಬಟ್ಟೆ ಕಿತ್ತೆಸೆದ. ಇಂಥ ಸನ್ನಿವೇಶಗಳು ನನಗೆ ಹೊಸದಾಗಿರಲಿಲ್ಲ. ಕಳೆದ
ಮೂರು-ನಾಲ್ಕು ವರ್ಷಗಳಿಂದ ನಮ್ಮ ಸಂಬಂಧ ಈ ತರದ ಹೊಸರೂಪ
ತಾಳಿತ್ತು. ಕುಡಿದ ಅಮಲಿನಲ್ಲಿ ಯಾವ ತರದ ಅನುನಯವೂ, ಮೃದುತ್ವವೂ
ರೋಮಾಂಚನವೂ ಇಲ್ಲದೆ, ನನ್ನ ಬೇಕು-ಬೇಡ, ತೃಪ್ತಿ-ಅತೃಪ್ತಿಗಳಿಗೆ
ಒಂದಿನಿತೂ ಬೆಲೆಕೊಡದೆ, ಸತತ ತಾಸೆರಡು ತಾಸು ನಡೆಯುವ ಆಕ್ರಮಣ.
ಪ್ರತಿಭಟನೆಯ ಪರಿಣಾಮ ಬರೀ ಮನಸ್ತಾಪವಾದುದರಿಂದ, ಆ ಮನಸ್ತಾಪ