ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ... ೪೩೫

          ಒಳಗೆ ಮಲಗಿದ್ದ ಆ ಪಾಪದ ಹುಡುಗಿಗೆ ಇದೆಲ್ಲ ಕೇಳಿಸೀತೇನೆಂಬ ಭಯದಿಂದ ಕುಗ್ಗಿ ನಾನೆಂದೆ. ' ಸಿನಿಮಾಕ್ಕ ಆಕಿ ಆಪ್ಟೆ ವಕೀಲ ಬಾಯಿ ಜೊತೆ ಹೋಗಿದ್ದಳು ಮೂರ್ತಿ, ಆಪ್ಟೆ ಬಾಯಿ ಡೀಸೆಂಟ್ ಆಗಿರೋ ವಯಸ್ಕ ಹೆಂಗಸು.'
         'ಹ್ಹ ಹ್ಹ ಹ್ಹ....' ಆತ ಕುಸಿದು ಕೂತು ನಗತೊಡಗಿದ. 'ಡೀಸೆಂಟ್ ಹೆಂಗಸನಂಥ.ಇಡೀ ದಿನಾ ಪಿರೀಪಿರೀ ಹೊರಗs ತಿರಗಿರ್ತಲಾ. ಊರ ಸೂಳಿ ಆಕಿ. ಆಕೀ ಜೋಡೀ ಈ ನೀಲೀನೂ ದಂದೇ ಮಾಡ್ಲಿಕ್ಕೆ ಹೋಗಿದ್ದಳು. ಹೌದಲ್ಲೋ?'
          ಇನ್ನು ಆತನೊಂದಿಗೆ ಮಾತನಾಡಿ ಪ್ರಯೋಜನವಿಲ್ಲ ವೆಂದು ನಾನು ಸುಮ್ಮನೆ ಕೂತೆ. ಇದ್ದಕ್ಕಿದ್ದಂತೆ ಆತ ಬಿಕ್ಕಿ ಬಿಕ್ಕಿ ಅಳತೊಡಗಿದ, 'ಕಮಲಾ ನೀ ನನಗ ಮೋಸ ಮಾಡಿದಿ, ನನ್ನ ಪ್ರೀತಿ ಮಾಡೋ ಮೊದಲs ಮತೊಬ್ಬನ್ನ ಪ್ರೀತಿ ಮಾಡಿದ್ದಿ. ನಾ ಎಷ್ಟ ಸುಖದಿಂದಿದ್ದೆ. ನೀ ಬಂದು ನನ್ನ ಸುಖ- ಶಾಂತಿ ಎಲ್ಲಾ ಹಾಳು ಮಾಡಿದಿ. ನಿನ್ನ ಭೆಟ್ಟಿ ಆಗಿದಿಲ್ಲಂದ್ರ ನಾ ಎಷ್ಟು ಸುಖಿ ಇರ್ತಿದ್ದೆ.... ಭೆಟ್ಟಿ ಆಗಿದ್ರು ನಾಲ್ಕ ದಿನಾ ಮಜಾ ಮಾಡಿ ಗುಡ್ ಬಾಯ್ ಹೇಳಿ ಹೋದನಲ್ಲ ಆ ನಿನ್ನ ಗೆಣ್ಯಾ, ಹಾಂಗ ಎಷ್ಟ್ ಮಂದಿ ಗುಡ್ ಬಾಯ್ ಹೇಳಿ ಹೋಗ್ಯಾರೋ ಏನೋ ನಿನಗ, ಶಾಣ್ಯಾರು ಅವರೆಲ್ಲ, ನಾನೂ ಹಾಂಗ ದೂರಾಗುವುದು ಬಿಟ್ಟು ನಿನ್ನಂಥಾಕಿನ್ನ ಲಗ್ನಾ ಆದೆ.... ಎಂಥಾ ತಪ್ಪು ಮಾಡಿದೆ.... ಆಯ್ಯೋ ದೇವರೇ....' - ಹಾಗೆ ತುಸು ಹೊತ್ಹು ಪ್ರಲಾಪಿಸಿ ಆತ ಅಲ್ಲೇ ನಿದ್ದೆ ಹೋಗಿಬಿಟ್ಟ. ಆತನ ಮಾತು ಬಂದಾಯಿತಲ್ಲ. ಏನಾದರೂ ಅನಾಹುತವಾಗುವುದು ತಪ್ಪಿತಲ್ಲ ಹಾಯೆನಿಸಿ ನಾನೂ ಆತನಿಗೆ ಅಲ್ಲೇ ರಗ್ಗು ಹೊದಿಸಿ ದೀಪವಾರಿಸಿ ಊಟವಿಲ್ಲದೆ ಹಾಗೇ ಹಾಸಿಗೆಯ ಮೇಲೆ ಉರುಳಿಕೊಂಡೆ....
         -ನಾನು ದೇವರೆಂದು ತಿಳಿದು ಆರಾಧಿಸಿದ ಈ ಮನುಷ್ಯ ಕುಡಿದ ಅಮಲಿನಲ್ಲೇ ಏಕಾಗಗೊಲ್ಲದು, ಆ ಮಗುವಿನ ಮೇಲೆ ಕಣ್ಣು ಹಾಕಬೇಕೆ? ಅಕಸ್ಮಾತ್ ಇದು ಅವಳಿಗೆ ಗೊತ್ಹ್ಹದರೆ ಈ ಮನೆಯಲ್ಲಿ ನಾನು ಅವಳೊಂದಿಗೆ ಹೇಗೆ ಬದುಕಿರಲಿ? 
         -ನಾನು ಮೋಸ ಮಾಡಿದೆನಂತೆ. ನಾನು ಎಲ್ಲಾ ಮೊದಲೇ ಹೇಳಿರಲಿಲ್ಲವೇ? ಎಲ್ಲ ಗೊತ್ಹಿದ್ದೂ ನನ್ನನ್ನು ತಾನಾಗಿ ಮೇಲೆ ಬಿದ್ದು ಸ್ವೀಕರಿಸಿ, ಸುಖಜೀವನದ ಆಶ್ವಾಸನೆ ಕೊಟ್ಟು, ನಾನೇ ಸರ್ವಸ್ವವೆಂಬಂತೆ