ಪುಟ:ನಡೆದದ್ದೇ ದಾರಿ.pdf/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ.....

                                                                               ೪೩೯
  ಮನಿಯಿಂದ ನಾ ತಂದ ಯಾವ ಸಾಮಾನೂ ಒತ್ತಿ ಇಡ್ಲಿಕ್ಕೆ ಒಯ್ಯೂದಿಲ್ಲಾ ಅಂತ." 
  ಎಷ್ಟು ಅಲ್ಪತೃಪ್ತಳು ಈ ಮುಗ್ಧ ಹೆಂಗಸು ಅನ್ನಿಸಿತು ಶಶಿಗೆ. ತಾನು ಕೊಟ್ಟ ವಚನ್ನ್ನು ಆಕೆಯ ಗಂಡ ಮೆಹಬೂಬ್ ನಡೆಸುವನೆಂಬ ಭರವಸೆಯೇನೂ ಶಶಿಗೆ ಇರಲಿಲ್ಲ. ಆದರೆ ಆತನಿಂದ ಹಲವಾರು ವಷ‌೯ ನರಕ ಅನುಭವಿಸಿದ ಈ ಹೆಂಡತಿಗೆ ಆತನ ಮೇಲೆ ಎಂಥ ವಿಶ್ವಾಸ!
  " ಮತ್ತ ಆ ಇನ್ನೊಬ್ಬಾಕಿ ? ಆಕೀ ಸಲುವಾಗೇ ಬ್ಯಾಸತ್ತು ನೀ ಹೋದದ್ದಲ್ಲ ?"
   " ಆ ಇನ್ನಬ್ಬಾಕಿ ನನ್ನ ಮನಿಗೇನು ಬಂದಿಲ್ಲಲ್ರೀ, ತನ್ನ ಮನ್ಯಾಗ ತಾ ಅದಾಳ. ಇರ‍್ಲಿ ಬಿಡ್ರಿ , ಆಕಿಗೂ ಮಕ್ಕಳು - ಮರಿ ಆಗ್ಯಾವು. ನಾ ಯಾಕ ಆಕೀಗೆ ಕೆಟ್ಟದು ಬಯಸ್ಲಿರಿ ಬಾಯೀ ? ಅಲ್ಲಾ ನನ್ನ ಮಕ್ಕಳಿಗೆ ಛಲೋ ಮಾಡ್ಲಿಕಿಲ್ಲ. ನನ್ನ ಗಂಡ ವಾರದಾಗ ಒಂದಿನಾ ಮನೀಗೆ ಬಂದುಮಕ್ಕಳಿಗೆ ಮುಖಾ ತೋರಿಸಿದ್ರ, ನಾ ದುಡದ ರೊಕ್ಕಾ ಕೇಳದಿದ್ರ , ನ್ನು ಸಾಮಾನು ಒಯ್ದು ಆಕೇಗೆ ಕೊಡದಿದ್ರ ಸಾಕಲ್ರೀ ನನಗ."
    
   ಇನ್ನೂ ಒಂದು ಪ್ರಶ್ನೆಯಿತ್ತು ಶಶಿಯದು : "ಅದೆಲ್ಲ ಆತು ರೋಶನ್, ಆದರ ನಿನಗ ಈಗಾಗಲೇ ಸಾಕಾದಷ್ಟು ಮಕ್ಕಳಾಗ್ಯಾವ. ಇನ್ನ ಗಂಡನ ಕೂಡ ರಾಜೀ ಮಾಡಿಕೊಂಡೀ ಆಂದರ ಮತ್ತಾ ವಷಾ‍೯ ಹಡೀಲಿಕ್ಕೆ ಸುರು ಆಗತದಲ್ಲ ?"
   ಅದಕ್ಕೂ ಸಿದ್ಧವಿತ್ತು ರೋಶನ್ ಬೀಯ ಉತ್ತರ:ಅಲ್ಲಾ ಕೈ ಬಿಚ್ಚಿ ಮಕ್ಕಳ್ನ ಕೊಡೋವಾಗ ಬ್ಯಾಡ ಅನ್ಲಿಕ್ಕ ನವೆಷ್ಡರವರೀ ಬಾಯೀ?"
 
   ಶಶಿ ಒಮ್ಮೆಲೆ ತೆಪ್ಪಗಾದಳು.
   ರೋಶನ್ ಬೀಯ ವೈಯಕ್ತಿಕ ಜೀವನದ ಕತೆ ಏನೇ ಇರಲಿ , ಒಳ್ಳೆಯ ಕೆಲಸದವಳೊಬ್ಬಳು ಮತ್ತೆ ಮರಳಿ ಬಂದಳಲ್ಲ ಅಂತ ಶಶಿಗೆ ಖುಷಿಯಾಯಿತು.ಅಡಿಗೆಮನೆಯನ್ನು ಅವಳಿಗೊಪ್ಪಿಸಿ ಶಶಿ ಸಿನಿಮಾ ಹಾಡೊಂದನ್ನು ಗುನುಗುನಿಸುತ್ತ ಪಡಸಾಲೆಯಲ್ಲಿ ಬಂದು ಕೂತಾಗ ಮಾಲಿನಿಬಾಯಿ ಪಟೇಲ ಬಂದಳು. ಕಾಲು ಮುರಿಕುಕೊಂಡು ಹೃದಯರೋಗಿಯಾಗಿ ಹಾಸಿಗೆ ಹಿಡಿದಿದ್ದ ಅವಳ ಗಂಡನಿಗೇನಾದರೂ ಹೆಚ್ಚು ಕಡಿವೆಯಾಯಿತೆನೋ ಅಂದುಕೊಂಡಳು ಶಶಿ. ಈ ಹೊತ್ತಿನಲ್ಲಿ ವಿಜಿಟ್ ಗೆ ಹೋಗಲು ಅವಳಿಗೆ ಮನಸ್ಸೂ ಇರಲಿಲ್ಲ.ಆದರೆ ಮಾಲಿನಿಬಾಯಿ ಬಂದದ್ದು ಬೇರೆಯ ಕೆಲಸಕ್ಕಾಗಿ. 
   " ಅಸೆಂಬ್ಲಿಗೆ ಕಾಂಟೆಸ್ಟ್ ಮಾಡೀನಿ ಡಾಕ್ಟರ್ , ನಿಮ್ಮ ವೋಟು ಕೇಳ್ಲಿಕ್ಕೆ ಬಂದೀನಿ. ನಿಮ್ಮದಷ್ಟ ಅಲ್ಲ ,ನಿಮಗ ಭಾಳ ಮಂದಿ ಬೇಕಾದವ್ರಿದ್ದಾರ ಡಾಕ್ಟಸು೯ , ಪೇಶಂಟ್ಸು, ವಗೈರೆ. ಅವರಿಗೆಲ್ಲಾ ನನ್ನ ಸಲುವಾಗಿ ಹೇಳ್ಬೇಕು ನೀವು. ನಮ್ದು