ಪುಟ:ನಡೆದದ್ದೇ ದಾರಿ.pdf/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹ್ಯಾನ್ಗಿದ್ರೂ ರೂಲಿನ್ಗ್ ಪಾರ್ಟಿ. ನಾ ಆರಿಸಿ ಬನ್ದ ಬರ್ತೀನಿ ಅನ್ಥ ಪಾರ್ಟಿಯ ಕಾರ್ಯಕರ್ತರೆಲ್ಲಾ ಹೇಳತಾರ. ಮತ್ತ ಬಹುತೇಕ ಜನರ ಬೆಮ್ಬಲಾನೂ ಅದ ನನಗ. ಇದೇ ಏರಿಯಾದಾಗ ಎಶ್ತೋ ವರ್ಶದಿನ್ದ ಇದ್ದೀನಿ ನೋಡ್ರಿ. ಸಮಾಜ ಸೇವಾದಾಗ, ದೀನದಲಿತರ ಸೇವಾದಾಗ ಇಡೀ ಆಯುಶ್ಯ ಕಳದೀನಿ. ಇನ್ನೂ ಹೆಚ್ಚಿನ ಸೇವಾ ಮಾಡ್ಲಿಕ್ಕೆ ಅವಕಾಶ ಸಿಗಲಿ ಅನ್ತ ಇಲೆಕ್ಶನ್ನಿಗೆ ನಿನ್ತದ್ದು. ನನಗ ನಿಮ್ಮ ಬೆಮ್ಬಲ ಬೇಕು."

            "ನಮ್ಮ ಬೆಮ್ಬಲ ಯಾಗವಾಗ್ಲೂ ನಿಮಗ ಇದ್ದ ಅದ ಮಿಸೆಸ್ ಪಟೇಲ, ಲೇಡೀಜ್ ಸಲುವಾಗಿ ಫೆಟ್ ಮಾಡವ್ರನ್ನ ಕನ್ಡ್ರ ನನಗ ಯಾವಾಗ್ಲೂ ಭಾಳಾ ಅಭಿಮಾನ. ನನ್ನ ವೋಟು ನಿಮಗ."
            "ಥ್ಯಾನ್ಕ್ಸ್ ಡಾಕ್ಟರ್" ಮಾಲಿನಿಬಾಯಿಗೆ ಖುಷಿಯಾಯಿತು.
            "ನಿಮ್ಮ ಯಜಮಾನ್ರು ಹ್ಯಾನ್ಗಿದ್ದಾರ ಈಗ?"
            "ಅವ್ರು ಆರಾಮ ಇದ್ದಾನ್ಗ ಕಾಣಸ್ತದ"
            "ಅನ್ದ್ರ ? ಈ ಊರಿಗೆಲ್ಲೇನು ಅವ್ರು ?"
           "ಇದ್ದಾರ್ರೀ. ಮನೀ ಬಿಟ್ಟು ಎಲ್ಲಿಗೆ ಹೋಗತಾರ ? ಅದು ಹಿನ್ಗಾಗೇದ ಡಾಕ್ಟರ್, ಊರಿನಿನ್ದ ನಮ್ಮ ಅತ್ತೀಯವರ್ನ ಕರಿಸಿಕೊನ್ಡೀನಿ ತಮ್ಮ ಮಗನ ಕಾಳಜೀ ತಗೊಳ್ಲಿಕ್ಕೆ. ಈಗಿನ ಕಾಲದ ಸರ್ವನ್ಟ್ ಎಲ್ಲೆಅಷ್ಟು ರಿಲಾಯಬಲ್ ಸಿಗ್ತಾರ ? ಅಟ್ಟದ ಮ್ಯಾಲಿನ ರೂಮಿನೊಳಗ ವ್ಯವಸ್ಥಾ ಮಾಡೀನಿ ನಮ್ಮ ಯಜಮಾನರ್ದು. ಅವರ ದೇಖರೇಖಿ ಎಲ್ಲಾ ಅತ್ತೀಯವ್ರು ಮಾಡತಾರ. ಅವರ ಸಹಾಯಕ್ಕೆ ಭೋಲಾ ಅನ್ತ ಒಬ್ಬ ಹುಡುಗನೂ ಇದ್ದಾನ. ನಾ ನೋಡ್ರಿ, ಈ ಇಲೆಕ್ಷನ್ ಬನ್ತಲಾ, ತಿರಿಗ್ಯಾಡೂದೊ ಭಾಳ ಇರತದ ನನಗ. ಆದರ ಅವ್ರಿಗೆ ಆರಾಮಿದ್ದಿರಬೇಕು. ಏನಾರೆ ತ್ರಾಸಾಗಿದ್ರ ಭೋಲಾ ನನಗ ಹೇಳತಿದ್ದ."
               ಇಲೆಕ್ಷನ್ ನಲ್ಲಿ ಆರಿಸಿ ಬನ್ದು ಜನಸೇವೆ ಮಾದುವ ಅದ್ಭುತ ಗುರಿಯಿಟ್ಟುಕೊನ್ಡ ಈ ಅದ್ಭುತ ಹೆನ್ಗಸಿನ ಸಲುವಾಗಿ, ನನ್ತರ ರೋಶನ್ ಬಿ ಹಾಗೂ ಮೆಹಬೂಬರ ಸಲುವಾಗಿ ಶಶಿ ಯೋಚಿಸಿದಳು....
            ಚಹಾದೊನ್ದಿಗೆ ಹೊರಬನ್ದ ರೋಶನ್ ಬೀಯನ್ನು ನೋಡಿ, ಆಕೆ ಹಿನ್ದೆ ತಮ್ಮಲ್ಲೂ ಕೆಲಸಮಾಡಿದ್ದರಿನ್ದ, ಮಾಲಿನಿಬಾಯಿಗೆ ಅತ್ಯಾಶ್ಚರ್ಯವಾಯಿತು: "ಅರೆ, ಇದೇನು, ರೋಶನ್ ಯಾವಾಗ ಬನ್ದಳು ?"
          ಶಶಿ ಸ್ವಲ್ಪದರಲ್ಲಿ ರೋಸಶನ್ ಬೀಯ ಕತೆ ಹೇಳಿದಳು. ಕೇಳಿ ಮಾಲಿನಿಬಾಯಿಯ