ಈ ವುಡ್-ಬೀ ಎಮ್ .ಎಲ್. ಎ ಯ ಕೆಚ್ಚು ಈಗಿನ ಹಾಗೇ ಇರುತ್ತಿತ್ತೇ? - ಎಲ್ಲ ಅಮ್ಮಣ್ಣೀ, ನಮ್ಮ ಸಮಾಜದಲ್ಲಿ ಒಬ್ಬ ಹೆಂಗಸು ನಿನ್ನ ಹಾಗೆ ಬಾಯಿಗೆ ಬಂದದ್ದು ಮಾತಾಡುವ, ಮನಸ್ಸಿಗೆ ತಿಳಿದದ್ದು ಮಾಡುವ ಧೈರ್ಯವುಳ್ಳವಳಾಗಿರಬೇಕಿದರೆ ಒಂದೋ ಆಕೆಗೆ ಗಂಡ ಇರಬಾರದು; ಇಲ್ಲವೇ ಆತ ಇನ್ ವ್ಹ್ಯಾಲಿಡ್ ಆಗಿರಬೇಕು ; ಷಂಢನಾಗಿರಬೇಕು, ಇಲ್ಲವೇ-
ಗಂಡ ಎಲ್ಲ ರೀತಿಯಿಂದ ಸಮರ್ಥನಿದ್ದು ಹೆಂಡತಿ ಧೈರ್ಯವುಳ್ಳವಳಾಗಿರಬೇಕಿದರೆ ಅದು ಬಹಳ ಕ್ವಚಿತ್ ಆಗಿ ಕಾಣಸಿಗಬಹುದಾದ ಕೇಸು ಉದಾಹರಣೆಗೆ ಆಪ್ಪೆ ದಂಪತಿಗಳು. ಮುಂಜಾನೆ ಅಪ್ಪೆಬಾಯಿಯ ಹಿರಿಯ ಮಗಳಿಗೆ ಆರಾಮಿಲ್ಲೋದು ಸ್ವಲ್ಪ ಬಂದು ಸ್ನಾನ ವಗೈರೆ ಮುಗಿಸಿ ಅವರ ಬ್ಲಾಕಿಗೆ ಹೋದಳು, ಶಾಂತಾಬಾಯಿ ಮನೆಯಲ್ಲಿ ಇರಲಿಲ್ಲ . ಆಪ್ಪೆ ವಕೀಲ ಸಾಹೇಬರೇ ಹೊರಬಂದು " ಯಾ ಯಾ ಡಾಕ್ಟರ್ ಬಾಯೀ" ಅಂತ ಮರಾಠಿಯಲ್ಲಿ ಸ್ವಾಗತಿಸಿದರು. ಶಶಿಯನ್ನು ಕರೆದುಕೊಂಡು ಒಳಗೆ ಮಗಳು ಮಲಗಿದ್ದಲ್ಲಿಗೆ ಹೋದರು. ತುಂಬ ಪ್ರೀತಿಯೆಂದ, ಕಾಳಜಿಯೆಂದ, ಜ್ವರ ಬಂದು ಮಲಗಿದ್ದ ಮಗಳ ಹೊದಿಕೆ ಸರಿಸಿ "ಮೀನೂ,ಡಾಕ್ಟರ್ ಬಂದಾರ ನೋಡು ಮಗೂ" ಅಂದರು. ಎದ್ದು ಕೂಡಲು ಅವಳಿಗೆ ಸಹಾಯ ಮಾಡಿದರು. ತನ್ನ ಕಿಟ್ ಬ್ಯಾಗಿನಿ೦ದ ಶಶಿ ಸಿರಿಂಜ್ ತೆಗೆದಾಗ ತಾವೇ ಮುಂದಾಗಿ
ಅದನ್ನು ತೆಗೆದುಕೊಂಡು ಸ್ವರಲೈಜ್ ಮಾಡಿಕೊಟ್ಟರು. "ಏನೂ ಆಗುವುದಿಲ್ಲ ಮಗು. ಆರಾಮಾಗುತ್ತೀ" ಅಂತ ಸಾಂತ್ವನ ಹೇಳಿದರು. ಅಡಿಗೆಯಾಕೆ ತಂದಿತ್ತ ಚಹಾವನ್ನು ಶಶಿಗೆ ತಾವೇ ಕೊಟ್ಟು ಎನ್ನೊದುನ್ನು ಮಗಳಿಗೆ ಕೊಡಿಸಿದರು. ಅದೆಲ್ಲ ನೋಡುತ್ತಿದ್ದಂತೆ ಶಶಿಗೆ ಈ ವೈಕ್ತಿ ಈ ಹೊಡುಗಿಯ ತಂದೆಯಲ್ಲ,ತಾಯಿ ಅನ್ನಿಸಿತು. ನಂತರ ಆಪ್ಪೆ ಹೇಳಿದರು, " ಶಾಂತಾನಂದು ಇವತ್ತೊಂದು ಕೇಸ್ ಇತ್ತು. ನಾ ಪ್ರೀ ಇದ್ದೆ. ಅದಕ್ಕ ಮುಂಜಾನೆಯೆ ಆಕೆ ಕೋರ್ಟಿಗೆ ಹೋದಳು ಮಗಳನ್ನ ನೋಡಿಕೊಳ್ಳಲಿಕ್ಕೆ ಅಂತ ನಾನು ಮನೆಯೊಳಗೆ ಉಳಿದೆ. ನಮ್ಮ ಶಾಂತಾನಂದು ನಿಮಗ ಗೊತ್ತಲ್ಲ, ನೂರಾಎಂಟು ಪರೋಪಕಾರದ ಪ್ರೊಗ್ರಮ್ಸ್ ಇರತಾವ ಅಕೀವು. ಏನೇನೋಪಿನ್ಸಿಪಾಲ್ ಇಟಗೊಂದಳ. ವ್ಹ್ಯಾ ಲ್ಯೂಜ್ ಇಟಗೊಂಡಳ. ಅವುಗಳ ಸಲುವಾಗಿ ಹಗಲಿಡೀ ದುಡೀತಾಳ. ಪಾಪ, ಆಕೀಗಿ ರೆಸ್ಟ್ ಸಿಗೂದಿಲ್ಲ , ನಾ ಎಷ್ಟುs ಹೆಲ್ಟ್ ಮಾಡಿದ್ರು ಮತ್ತ ಆಕೀ ಕೆಲಸ ಆಕೀಗೆ ಸಾಕಷ್ಟ ಇರತಾವ"
ನಿನ್ನೆ ರಾತ್ರಿ ಆನ್ನಿ ಸಿದ್ದಂತೆ ಶಶಿ ಮತ್ತೆ ಆನ್ನಿಸಿತು. ನಮ್ಮ ಸಮಾಜದಲ್ಲಿ ಒಬ್ಬ