ಪುಟ:ನಡೆದದ್ದೇ ದಾರಿ.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೩

ಹೆಂಗಸಿಗೆ ಬೇಕ್ಕಾದ್ದನ್ನು ಹೇಳುವ, ಮಾಡುವ, ಯೋಚಿಸುವ, ಯೋಜಿಸುವ, ಕಾರ್ಯರೂಪಕ್ಕಿಳಿಸುವ ಧೈರ್ಯವಿರಬೇಕಾದರೆ ಆಕೆ ಪ್ರಿನ್ಸಿಪಲ್ಸ್ಗಾಗಿ -ವ್ಹಾಲ್ಯೂಜೆಗಾಗಿ ಹೋರಾಡಬಲ್ಲವಳಿರಬೇಕಾದರೆ, ಒಂದೋ ಆಕೆಗೆ ಗಂಡ ಇರಬಾರದು; ಇಲ್ಲವೇ ಆತ ಅಂಗವಿಕಲನೋ, ಷಂಢನೋ ಆಗಿರಬೇಕು; ಇಲ್ಲವೇ ಆತ ಆಪ್ಟೆ ವಕೀಲರ ಹಾಗೆ ಥರೋ ಜಂಟಲ್ಮನ್ ಆಗಿರಬೇಕು....ಮತ್ತು ಈ ಕೊನೆಯ ಸಾಧ್ಯತೆ ತೀರ ವಿರಳ.

        -ಬೆಂಕಿ ಬೀಳಲಿ ಇಂಥ ವ್ಯವಸ್ಥೆಗೆ....
                                            
                ***
   ಈಗೀಗ ತಾನು ಸದಾ ಮೂಡೀಯಾಗಿರುತ್ತೇನೆಂದು, ಮೊದಲಿನ ಹಾಗೆ ಕೆಲಸದಲ್ಲಿ ಪ್ರಸನ್ನತೆ ಉಳಿದಿಲ್ಲವೆಂದು , ಯಾವಾಗಲೂ ಒಂದು ಥರ ಕಾರಣವಿಲ್ಲದ ಬೇಸರ ಮನಸ್ಸನ್ನು ಕವಿದಿರುತ್ತದೆಂದು ಶಶಿಗೆ ಅನಿಸುತ್ತಲಿದೆ . ಕಮಲಾನ ಡಾಯರಿ ಓದುತ್ತಿರುವ ಪರಿಣಾಮವೇ? -ಇರಲಾರದು . ಕಮಲಾ ತನಗೆ ಬಹಳ ಆತ್ಮೀಯವಾಗಿದ್ದ ಗೆಳತಿ, ಸರಿ. ಆದರೆ ಆಕೆಯ ಜೀವನದ ಬಗೆಗಿನ ಹುಚ್ಚು ಕಲ್ಪನೆಗಳನ್ನು ತಾನೆಂದೂ ಒಪ್ಪಿರಲಿಲ್ಲ. ಅವುಗಳ ಬಗ್ಗೆ ಆಕೆಯನ್ನು ಸದಾ ಹಾಸ್ಯ ಮಾಡುತ್ತ, ಎಚ್ಚರಿಸುತ್ತ, ಟೀಕಿಸುತ್ತ ಇದ್ದೆ. ಅಷ್ಟೊಂದು ರೋಮ್ಯಾಂಟಿಕ್ ವಿಚಾರಗಳನ್ನಿಟ್ಟುಕೊಂಡ ಯಾರೇ ಯಾರೇ ಆದರೂ ಹೀಗೆ ಕೊನೆಯಲ್ಲಿ ದುಃಖಿಯಾಗುವುದು ಸಹಜವಿತ್ತು. ಅದೂ ಗಂಡಸಿನ ಬಗ್ಗೆ ಹೀಗೆ ಆದರ್ಶಗಳನ್ನಿಟ್ಟುಕೊಂಡರೆ ನಿರಾಶೆ ಕಟ್ಟಿಟ್ಟಬುತ್ತಿಯೆಂದು ತಾನೆಷ್ಟು ಸಲ ಅವಳಿಗೆ ಹೇಳಿರಲಿಲ್ಲ? ಆಪ್ಟೆ ವಕೀಲರಂಥ ಗಂಡಸು ನಮ್ಮಲ್ಲಿ ಕೋಟಿಗೊಬ್ಬರು ಸಿಗಬಹುದು ಅಷ್ಟೇ . ಈ ಕಮಲಾ ಸುಂದರವಾಗಬಹುದಾಗಿದ್ದ ತನ್ನ ಬಾಳಿಗೆ ತಾನೇ ಕತ್ತಲು ಕವಿಸಿಕೊಂಡಳು . ಈ ವಿಚಾರವೇ ಇತ್ತೇಚೆ ತನ್ನನ್ನು ಕಾಡುತ್ತಿರುವುದು?
   ಅಥವಾ-
   ಮೊನ್ನೆ ಕೊನೆಯ ಸಲ ತನ್ನನ್ನು ಮದುವೆಯಾಗಲು ಕೇಳಿ ತಾನು ಇಲ್ಲವೆಂದಾಗಿನಿಂದ ಸತೀಶ ದೇಶಪಾಂಡೆ ಹಾಸ್ಪಿಟಲಿನಲ್ಲಿ ತನ್ನ ಕಣ್ಣು ತಪ್ಪಿಸಿ ಅಡ್ಡಾಡುತ್ತಿದ್ದಾನೆ. ಡ್ಯೂಟಿ ಅವರ್ಸ್ನಲ್ಲೂ ಎಷ್ಟು ಬೇಕೋ ಅಷ್ಟೇ ಮಾತು. ಮಧ್ಯಾಹ್ನ ಲುಂಚ್ಗೆ ತನಗೆ ಕಂಪನಿ ಕೊಡಲು ಬರುತ್ತಿಲ್ಲ. 'ಚಹಾಕ್ಕೆ ಬರ್ತೀಯೇನು ಶಶಿ?' ಅಂತ ಕೇಳುವುದಿಲ್ಲ. 'ಭಾಳ ದಣಿದಾಂಗ ಕಾಣಿಸ್ತೀ , ನಡೀ ನನ್ನ ಕ್ವಾರ್ಟರ್ಸಿಗೆ ಹೋಗಿ ಸ್ವಲ್ಪ ಆರಾಮು ತಗೊಂಡು ಆಮ್ಯಾಲ ಹೋಗೀಯಂತ ,' ಅನ್ನುವುದಿಲ್ಲ . ಬಹುಶಃ ತಾನಿನ್ನು ಶೀಘ್ರದಲ್ಲೇ ಬೇರೆ ಹುಡುಗಿಯನ್ನು ಲಗ್ನವಾಗಲಿರುವುದರಿಂದ