ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ..

ಆಗಿರ್ತೀನಿ. ನಾ ಬರಲ್ಯಾ? ಬಾಯ್. " ಸ್ಟೈಲಿಶ್ಆಗಿ ಕೈಬೀಸಿ ಲೀಲಾ ಹೊರಟೇಹೋದಳು.

 ಆಕೆಯ ಈ ಹೊಸ ಶಾಣೇತನದ ಬಗ್ಗೆ. ಕೇರ್ಫುಲ್ ಆಗಿರಲು ಕಲಿತಿರುವ ದೂರಾಲೋಚನೆಯ ಬಗ್ಗೆ. ಆಕೆಯನ್ನು ಅಪ್ರಿಷಿಯೇಟ್ ಮಾಡಬೇಕು ಅಂದುಕೊಂಡಳು ಶಶಿ. ಯಾಕೋ ಕೂಡಲೆ ಸಾದ್ಯವಾಗಲಿಲ್ಲ. ತಾನೇಕೆ ಹೀಗೆ ಬದಲಾಗುತ್ತಿದ್ದೇನೆ ಅಂತ ತನ್ನನ್ನೆ ಬೈದುಕೊಂಡು ಇವತ್ತು ಒಬ್ಬಳೇ ಕೂತು ಸಿನೆಮಾ ನೋಡೋಣವೆಂದು ಹೊರಟಳು. ರಾತ್ರಿ ಸಿನೆಮಾ ಮುಗಿಸಿ ಬಂದ ನಂತರ ರೋಶನ್ಬಿ ಇವತ್ತು ಸ್ಪೆಶಲ್ಲಾಗಿ ತಯಾರಿಸಿ ಫ್ರಿಜ್ನಲ್ಲಿರಿಸಿದ್ದ ಚಿಕನ್ ಬಿರಿಯಾನಿ ಜೊತೆಗೆ ಫ್ರಷ್ ಆಗಿದ್ದ ಕೋಲ್ಡ್ ಬಿಯರ್ ಇತ್ತು. ಆರಾಮವಾಗಿ ಕುಡಿದು ತಿಂದು ಶಿಸ್ತಾಗಿ ಮಲಗುವುದು ಬಿಟ್ಟು ಇದೇನು ಇಲ್ಲದ ಚಿಂತೆ ಅಂತ ತಲೆಕೊಡವಿ ಆಕೆ ಮುಂದೆ ನಡೆದಳು.
   ಆರಾಮಾಗಿ ಕುಡಿದು ತಿಂದು ಶಿಸ್ತಾಗಿ ಮಲಗುವ ಮುನ್ನ ಇತ್ತೀಚಿನ ರಾತ್ರಿಗಳಲ್ಲಿ ಅಭ್ಯಾಸವಾಗಿದ್ದಂತೆ ಶಶಿ, ಕಮಲಾನ ಡಾಯರಿಯ ಪುಟಗಳನ್ನು ತಿರುವಿದಳು. ಕಣ್ಣಲ್ಲಿ ನಿದ್ದೆ ತೂರಿ ಬರುತ್ತಿದ್ದುರದಿಂದ ಪುಟಗಳನ್ನು ಹಾರಿಸಿ ಅಲ್ಲಲಿ ಅಷ್ಟಿಷ್ಟು ಓದುತ್ತ ನಡೆದಳು. ನಿಧಾನವಾಗಿ ಅವಳಿಗರಿಯದಂತೆ ಅವಳ ಆರಾಮನಿದ್ದೆ ಎರಡೂ ಕರಗತೊಡಗಿದವು.
     "ಮೂರ್ತಿಯ ಜೊತೆ ಯಾವುದೇ ಕಾರಣಕ್ಕಾಗಿಯೂ ನಾನು ವಾದಿಸುವುದನ್ನು, ಚರ್ಚುಸುವುದನ್ನು ಬಿಟ್ಟು ಯುಗವಾಯಿತು. ಎಲ್ಲ ವಿಷಯದಲ್ಲೂ ತನ್ನದೇ ಅಂತಿಮ ತೀರ್ನಾನವಾಗಬೇಕೆಂದು ಬಯಸುವ, ತನ್ನ ವಿಚಾರಗಳು ಅತ್ಯಂತ ಸರಿಯೆಂದು ದ್ರುಢವಾಗಿ ನಂಬುರುವ, ಇತರರ ಅದರಲ್ಲೂ ಹೆಂಗಸರ-ಅದರಲ್ಲೂ ನನ್ನ ವಿಚಾರಗಳಿಗೆ ಕಿವಿಗೊಡುವುದಾಗಲಿ, ನನ್ನ ಅಭಿಪ್ರಾಯಗಳನ್ನು ಕೇಳುವುದಾಗಲಿ ಸಮಯ ಹಾಳೆಂದು ತಿಳಿದಿರುವ ಆತನೊಂದಿಗೆ ವಾದಿಸಿ, ಚರ್ಚಿಸಿ ಏನು ಫಲ? ಮೊನ್ನೆ ಮನೆಗೆ ಸುಣ್ಣ ಬಳಿಸುತ್ತಿರುವಾಗ ಎಲ್ಲ ಸಾಮಾನು ಹೊರತ್ಗೆದಾಗ ಹಳೆಯ ಸೂಟ್ಕೇಸೊಂದು ಕಣ್ಣಿಗೆ ಬಿತ್ತು. ನನ್ನ ಹಳೆಯ ಪುಸ್ತಕಗಳು ಕಾಗದ ಪತ್ರಗಳನ್ನು ತುರುಕಿರಿಸಿದ್ದ ಸೂಟ್ಕೇಸು. ಸುಮ್ಮನೆ ಕುತೂಹಲದಿಂದ ತ್ರೆದು ನೋಡಿದರೆ ಹರಿದುಹೋದ ನೋಟ್ಬುಕ್ ಒಂದರಿಂದ ಹಾಳೆಯೊಂದು ಹೊರಗಿಣಿಕಿ ನೋಡುತ್ತಿತ್ತು. ಹಾಯ್ಸ್ಕೂಲಿನಲ್ಲಿದ್ದಾಗ ನಾಡಹಬ್ಬದ.ದಪ್ಪಗಿನ ಅಕ್ಷರ