________________
೪೪೬ ನಡೆದದ್ದೇ ದಾರಿ ನಿಮಿತ್ತ ಇಟ್ಟಿದ್ದ ನಿಬಂಧ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ನನ್ನದೇ ನಿಬಂಧದ ಕರಡು ಪ್ರತಿ, ತಲೆಬರಹ “ಹೆಣ್ಣು ಮಕ್ಕಳಿಗೆ ವಿಚಾರ ಸ್ವಾತಂತ್ರ್ಯ" ಆರೇಳು ಪುಟಗಳ ಆ ನಿಬಂಧದ ಮೊದಲ ಪ್ಯಾರಾದಲ್ಲಿ ಕೆಂಪು ಮಸಿಯಿಂದ ಅಂಡರ್‌ಲೈನ್ ಮಾಡಿದ್ದೆ ಒಂದು ವಾಕ್ಯವನ್ನ - “ಯಾವುದೇ ವಿಷಯದಲ್ಲಿ ಸ್ವಾತಂತ್ರ್ಯವನ್ನು ವುದನ್ನು ಬೇರೆಯವರು ' ಕೊಡುತ್ತಾರೆನ್ನುವುದು ಮೂರ್ಖತನ : ಸ್ವಾತಂತ್ರ್ಯಕ್ಕಾಗಿ ಪ್ರತಿ ವ್ಯಕ್ತಿಯೂ ಸ್ವತಃ ಹೋರಾಡಬೇಕು ಹಾಗೂ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸತತ ಹೋರಾಡುತ್ತಲೇ ಇರಬೇಕು. ಇಪ್ಪತ್ತೈದು ವರ್ಷಗಳಿಗೂ ಹಿಂದೆ ಇದ್ದ ಈ ಎಚ್ಚರ, ಈ ಪ್ರಜ್ಞೆ, ಆ ಧೈರ್ಯ, ಕೆಚ್ಚು ಜೀವನದ ಬಿರುಗಾಳಿಗೆ, ಬೆಂಕಿಗೆ, ಬಿಸಿಲಿಗೆ ಸಿಕ್ಕಿ ದಿಕ್ಕೆಟ್ಟು ಉರಿದು ಸುಟ್ಟು ಹೋದವಲ್ಲ..... ಶಶಿ ಹೇಳುವಂತೆ ಹೆಂಗಸಿನ ಕನಸುಗಳು-ಆದರ್ಶಗಳು-ತತ್ವಗಳು ಫಲಿಸಲು, ಗುರಿ ಕಾಣಲು ನಮ್ಮ ಸಮಾಜದಲ್ಲಿ ಒಂದೋ ಆಕೆ ಮದುವೆಯಾಗದೇ ಇರಬೇಕು, ಇಲ್ಲವೇ ಆಕೆಯ ಗಂಡ ನಪುಂಸಕನಾಗಿರಬೇಕು, ಇಲ್ಲವೇ ಅತ್ಯಂತ ಸಜ್ಜನನ ಗಿರಬೇಕು, ಮತ್ತು ಈ ಕೊನೆಯ ಸಾಧ್ಯತೆ ತೀರ ವಿರಳ. ನಾನೀಗ ಏನ ಾಗಿದ್ದೇನೆಂದು ಪರಾಮರ್ಶಿಸಿ ನೋಡಿದರೆ ನನ್ನ ಅಸ್ತಿತ್ವದ ಬಗ್ಗೆ ನನಗೆ ನ ಚಿಕೆಯಾಗುತ್ತದೆ. ಮೂರ್ತಿ ಹೇಳಿದ್ದಕ್ಕೆಲ್ಲ ತಲೆ ಹಾಕುವ, ಆತ ಮಾಡು ಆಂದದ್ದನ್ನು ಮಾಡುವ, ಬೇಡ ಅಂದದ್ದನ್ನು ಬಿಡುವ, ಆತನ ಸ್ವಪ್ರಶಂಸೆಯನ್ನು ಆಸಕ್ತಿಯಿಂದ ಕೇಳುವ, ಆತನ ಪ್ರತಿಭೆ, ಪರ್ಸನ್ಯಾಲಿಟಿ, ಪ್ರಭಾವಗಳನ್ನು ಬಾಯಿತುಂಬ ಸ್ತುತಿಸುವ, ಸ್ವಂತದ ಇರುವಿಕೆಯನ್ನು ಪೂರಾ ಮರೆತು ಬಿಟ್ಟಿರುವ ಪಂಜರದ ಗಿಣಿ ನಾನು.... ಇಷ್ಟಾಗಿ ಈ ಪಂಜರವೇ ನನ್ನ ಸ್ವರ್ಗವೆಂದು ನಂಬಲು ಅವಿರತ ಶ್ರಮಿಸುತ್ತಿರುವ ಗಿಣಿ. “ಆದರೆ ಈ ಗಿಣಿಯ ರೆಕ್ಕೆಗಳೀಗ ಪಂಜರದಿಂದ ಹೊರಬಂದು ನೀಲಿಯ ಮುಗಿಲಲ್ಲಿ ಹಾರಬಯಸುತ್ತಿವೆ. ಹೀಗೆಯೇ ಇದ್ದರೆ ನಾನು ಏನನ್ನೂ ಸಾಧಿಸಲಾರೆ. ನಾನು ಧೈರ್ಯ ತೋರಬೇಕು. ಅನವಶ್ಯಕ ಬಂಧನಗಳಿಂದ ಮುಕ್ತಳಾಗಬೇಕು. ಎಲ್ಲಿ ನನ್ನ ಪ್ರತಿಭೆಗೆ ಪೂರ್ಣ ಅವಕಾಶ ಸಿಗುವುದೋ ಅಲ್ಲಿಗೆ ಹೋಗಬೇಕು. ಇತ್ತೀಚೆ ನನ್ನೊಳಗಿನದೊಂದು ದನಿ ಸದಾ ಹೀಗೆ ಆರ್ತವಾಗಿ ಕೂಗುತ್ತಿರುತ್ತದೆ.*
- *
“ಮೂರ್ತಿಯ ಎದುರು ನಾನು ಮೂಕಳಾಗುತ್ತೇನೆ,