ಪುಟ:ನಡೆದದ್ದೇ ದಾರಿ.pdf/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುದಕಾದ೦ಬರಿಗಳು/ ಶೋಷಣೆ, ಬ೦ಡಾಯ ಇತ್ಯಾದಿ... ೪೪೭

ಕುಬ್ಜಳಾಗುತ್ತೇನೆ. ಅಸಹಾಯ ಮಗುವಿನ೦ತಾಗುತ್ತೇನೆ. ಕಣ್ನು- ಬಾಯಿ-ಕಿವಿ-ತಲೆ-ಮಿದಳು ಈ ಯಾವುದು ಕೆಲಸ ಮಾಡದ, ಕೇವಲ ಹೃದಯವೊ೦ದೇ ಧಡಧಡಿಸುವ ಮೇಣದ ಗೊ೦ಬೆಯಾಗುತೇನೆ. ಆತನ ಅಪಶಬ್ದಗಳನ್ನು ಒ೦ದು ಕಿವಿಯಿ೦ದ ಕೇಳಿ ಇನ್ನೊ೦ದು ಕಿವಿಯಿ೦ದ ಬಿಟ್ತುಬಿಡುತ್ತೆನೆ. ಆತನ ನಿರ್ಲಕ್ಸ್ಯವನ್ನು ಹೊಟೇಯಲ್ಲಿ ಹಾಕಿಕೊ೦ಡು ಶಾ೦ತಳಾಗುತೇನೆ. ಆತನ ಉದ್ದೆಶಪೋರ್ವಕ ತಿರಸ್ಕಾರ, ತಾತ್ಸಾರಗಳನ್ನು ನನಗಲ್ಲವೇ ಅಲ್ಲ ಅ೦ದುಕೊ೦ಡು ಮತ್ತೆ ಆತನ ಬೇಕು ಬೆಡಗಳನ್ನು ಪೂರೈಸುವುದರಲ್ಲಿ ತತ್ಪರಳಾಗುತ್ತೆನೆ. ಮೃದುಮಾತು -ಉನ್ಮಾದ-ಉದ್ವೀಗರಹಿತವಾದ, ಕೇವಲ ಯಾ೦ತ್ರಿಕವಾದ೦ತೆನಿಸುವ, ಹಾಸಿಗೆಯ ಆಟದಲ್ಲಿ ಆತನ ಮೂಕ ಸ೦ಗಾತಿಯಾಗುತೇನೆ.ನನ್ನ ತಲೆಯಲ್ಲಿ,ಮನಸಲ್ಲಿ, ಹೃದಯದಲ್ಲಿ ಸದಾ ರೀ೦ಗಣಗುಣಿತ ನಡೆಯಿಸಿರುವ ನೂರು-ಸಾವಿರ-ಲಕ್ಷ ಕೋಟಿ ವಿಚಾರಗಳ್ಳಲ್ಲಿ,ಬಾವನೆಗಳಲ್ಲಿ ಒಂದನ್ನಾದರೂ ಆತನ ಗಮನಕ್ಕೆ ತರುವ ಪ್ರಯತ್ನ ಮಾಡದೆ ಸುಮ್ಮನೇ ಇದ್ದು ಬಿಡುತೇನೆ.

                      ******

"ಹೀಗಿರುತ್ತಿರಲು -

      ಒಂದು ಮುಂಜಾನೆ ಕಂಪನಿ ಆಫೀಸಿನಲ್ಲಿ ವಿನೋದ ಸಹಾನಿಯೊಂದಿಗೆ ಒಂದು ಹೊಸ ನಾಟಕದ ಪ್ರಯೋಗದ ಬಗ್ಗೆ ಚರ್ಚಿಸುತಿದ್ದಾಗ ನನ್ನನು ಕಾಣಲು ಒಬ್ಬಾತ ಬಂದರು. ಆತನೊಬ್ಬ ಸುಪ್ರಸಿದ್ದ ಹಿಂದೀ ಚಲನಚಿತ್ರ ನಿರ್ಮಾಪಕ-ನಿರ್ದೇಶಕ. ತಾನು ನನ್ನ ಅಭಿನಯವನ್ನು ಮೆಚ್ಚಿದಾಗಿಯೂ ತನ್ನ ಹೊಸ ಚಿತ್ರವೊಂದರಲ್ಲಿ ನಾಯಕಿಯ ಪಾತ್ರವನ್ನು ಸ್ವೀಕರಿಸಬೇಕೆಂದೂ ನನ್ನ ಅನುಕೂಲ ನೋಡಿಕೊಂಡು ಕಾಲಶೀಟ್ ಕೆಪೋಟ್ಟರೆ ಉಳಿದ ವ್ಯವಸ್ಥೆ ಮಾಡಲು ಅನುಕೂಲವೆಂದೂ ಹೇಳಿದರು. ವಿನೋದ ಸಹಾನಿ ನಿಜವಾದ ಸಂತೋಷದಿಂದ 'ಕಾಂಗ್ರಟ್ಸ್ ಹೇಳಿದ. ನಾನು ಹಿಂದೆ ಮುಂದೆ ನೋಡದೆ ಒಪ್ಪಿಗೆ ನೀಡಿ ಬಂದಾತನಿಗೆ ಕಾಪಿ ಕೊಟ್ಟು ಸತ್ಕರಿಸಿ ಕಳಿಸಿದೆ. ಶಿವಮೂರ್ತಿ ಹೆಂಡತಿ, ಮಕ್ಕಳನ್ನು ಕರಕೊಂಡು ಮಾಥೇರಾನಕ್ಕೆ ಹೋಗಿದ್ದ. ಆತ ತಿರುಗಿ ಬರುವುದನ್ನೇ ಕಾಯುತ್ತ, ಈ ಸುದ್ದಿ ಕೇಳಿ ಆತನಿಗಾಗಬಹುದಾದ ಸಂತೋಷ ನೆನೆದು ಸಂತೋಷಿಸುತ್ತ ಎರಡು ದಿನ ಕಳೆದೆ. 
    ನನಗೆ ಸಿನೆಮಾದಲ್ಲಿ ನಟಿಸುವ ಅವಕಾಶ ದೊಡೆತದ್ದಕ್ಕಾಗಿ ಮೂರ್ತಿಗೆ ಸಂತೋಷವಾಗುವುದೆಂಬ ಬಗ್ಗೆ ಖಾತ್ರಿ ಇರಲು ಕಾರಣವೂ ಇತ್ತು.