________________
೪೪೮ ನಡೆದದ್ದೇ ದಾರಿ ಸುಮಾರು ಆರು ವರ್ಷಗಳ ಹಿಂದೆ ಆತನ ಪರಿಚಯದ ನಿರ್ಮಾಪಕರೊಬ್ಬರು ಆತನನ್ನು ಮುಖ್ಯ ಪಾತ್ರದಲ್ಲಿ ಹಾಕಿಕೊಂಡು ಚಿತ್ರ ತಯಾರಿಸಲು ಯೋಜಿಸಿದ್ದರು. ಆದರೆ ಹಣದ ತೊಂದರೆ ಬಂದುದರಿಂದ ಆ ಯೋಜನೆ ಅಲ್ಲಿಗೇ ನಿಂತು ಹೋಗಿತ್ತು. ಶಿವಮೂರ್ತಿಯೇ ಒಂದಿಷ್ಟು ಹಣ ಹಾಕಿ ಅದೇ ಚಿತ್ರವನ್ನು ಒಂದೆರಡು ರೀಲುಗಳಷ್ಟು ಮಾಡಿ ಮುಗಿಸಿದರೂ ಹಲವಾರು ವಿಘ್ನಗಳು ಬಂದು ಆ ಪ್ರಯತ್ನವನ್ನು ಅಲ್ಲಿಗೇ ಕೈ ಬಿಡಬೇಕಾಗಿತ್ತು. ಆಗ ಆತ ನನಗೆ ಹೇಳಿದ್ದ, 'ನಾವು ನಾಟಕ ಮಾಡಿ ಎಷ್ಟು ಹೆಸರು ಗಳಿಸಿದ್ದೂ ರಂಗಭೂಮಿ ಮ್ಯಾಲೆ ಏನೇ ಕ್ರಾಂತಿ ಮಾಡಿದ್ರೂ ಆದರ ಇಫೆಕ್ಟ್ ತೀರ ಲಿಮಿಟೆಡ್ ಆಗದ ಕಮಲಾ, ಒಂದಿಲ್ಲೊಂದು ದಿನಾ ನಾನೂ-ನೀನೂ ಒಂದು ಪಿಕ್ಟರಿನ್ಯಾಗ ಛಲೋ ಗ್ಯಾಂಡಾಗಿ ಆಕ್ಟ್ ಮಾಡಿ ಧಿಡೀರ್ ಅಂತ ಸ್ಕೂಪರ ಸ್ಟಾರ್ಸ್ ಆಗೋ ಕನಸು ನನಗ. ಮೊದಲಿನಿಂದ್ರೂ ಈ ಕನಸು ಇತ್ತು ಅನ್ನು. ಈಗ ನೀ ಭಾಗ್ಯಲಕ್ಷ್ಮೀ ಹಾಂಗ ನನ್ನ ಲೈಫ್‌ನ್ಯಾಗ ಎಂಟರ್ ಆದಮ್ಯಾಲೆ ಈ ಕನಸು ನನಸಾಗೋದ್ರಾಗ ನನಗೇನೂ ಸಂಶಯ ಉಳಿದಿಲ್ಲ.' ಆದರೆ ಎರಡು ದಿನಗಳ ನಂತರ ಆತ ಬಂದಾಗ ಈ ವಿಷಯ ತಿಳಿದು ಆತ ಪ್ರತಿಕ್ರಿಯೆ ತೋರಿದ್ದು ತೀರ ಭಿನ್ನವಾಗಿ : ನೀ ಆ ಹಿಂದೀ ಸಿನೇಮಾದ ಲಫಂಗ ಮಂದೀ ಕೂಡ ವ್ಯವಹಾರ ಮಾಡೋದು ನನಗೆ ಬೇಕಾಗಿಲ್ಲ. ನನ್ನ ಕೇಳಲಾರದೆ ಆದ್ಯಾಂಗ ಒಪ್ಪಿಗೀ ಕೊಟ್ಟಿ ನೀನು ? ನಿನಗ ತಿಳಿಯೂದಿಲ್ಲಾ ಅಂದಮ್ಯಾಲೆ ನನ್ನ ಕೇಳಿ ಎಲ್ಲಾ ಮಾಡಬೇಕು ಅಂತ ಗೊತ್ತಿಲ್ಲೇನು ನಿನಗೆ ? ಈಗರ ಏನಾತು, ಒಲ್ಲೆ ಅಂತ ಹೇಳಿಬಿಡು ಆ ಮನುಷ್ಯಾಗ, ಫೋನ್ ಮಾಡಿಬಿಡು, ಇಲ್ಲಂದ, ನಾನು ಮಾಡ್ತೀನಿ, ನಾ ಇಲ್ಲದಾಗ ಬಂದು ನಿನ್ನ ಕಾಂಟ್ಯಾಕ್ಟ್ ತಗೋಬೇಕಂದರ ಎಷ್ಟು ಧೈಯ್ಯ ಆ ಸೂಳೇಮಗನಿಗೆ-' 'ಅಲ್ಲ ಮೂರ್ತಿ, ನಾ ಅಡ್ವಾನ್ಸ್ ಚೆಕ್ ಸಹ ತಗೊಂಡು ಬಿಟ್ಟನಲ್ಲ.' 'ಅದನ್ನ ಬಿಸಾಕು ಅವನ ಮುಖದ ಮ್ಯಾಲ. ಯಾಕ, ಚೆಕ್ ಕೊಟ್ಟರ ಬೇಕಾದ್ದು ಮಾಡ್ಲಿಕ್ಕೆ ತಯಾರಿದ್ದೀಯೇನು ನೀನು ?" ಈ ತರದ ಮಾತುಗಳನ್ನು ಬಹಳವಾಗಿ ಕೇಳಿದ್ದ ನನಗೆ ಈ ಸಲ ಯಾಕೋ ವಿಪರೀತ ಸಿಟ್ಟು ಬಂತು : 'ಬಾಯಿಗೆ ಬಂದಾಂಗ ಮಾತಾಡಬ್ಯಾಡ ಮೂರ್ತಿ, ರೊಕ್ಕದ ಸಲುವಾಗಿ ಅಲ್ಲ ನಾ ಒಪ್ಪಿದ್ದು. ಜೀವನದಾಗ ರೊಕ್ಕ ಒಂದೇ ಮುಖ್ಯ ಅಲ್ಲ. ಅದಕ್ಕಿಂತ ಹೆಚ್ಚಿನ ವ್ಯಾಲ್ಯೂಜ್ ಕೆಲವು ಇರಾವ. ಈ ಕೆಲಸ ಒಪ್ಪಿಕೊಳ್ಳೋದ್ರಿಂದ ಹೆಚ್ಚಿನ ಸ್ಕೋಪ್, ಹೆಚ್ಚು ಪ್ರಸಿದ್ದಿ, ಹೆಚ್ಚು