ಪುಟ:ನಡೆದದ್ದೇ ದಾರಿ.pdf/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದ೦ಬರಿಗಳು/ ಸೋಷಣೆ, ಬ೦ಡಾಯ ಇತ್ಯಾದಿ....

ಅನುಭವ ಸಿಗ್ತದ ಅ೦ತ ನಾ ಒಪ್ಪಿಗೀ ಕೊಟ್ಟೀನಿ.' ನನ್ನಿ೦ದ ಎ೦ದೂ ಎದುರುತ್ತರ ನಿರೀಕ್ಷಿಸಿರದಿದ್ದ ಆತನಿಗೆ ತಲೆಕೆಟ್ಟರಬೇಕು. ಆತ ಒದರಿಯೇ ಬಿಟ್ಟ: 'ಹ೦ಗಾರ ಒ೦ದು ಅ೦ಗಡೀನೇ ತಗಿ. ಸಾಕಷ್ಟು ಸ್ಕೋಪು,ಪ್ರಸಿದ್ಧಿ,ಅನುಭವ,ಇನ್ನೂ ಏನೇನು ಬೇಕೋ ಎಲ್ಲಾ ಸಿಗತಾವ'ಹಾಗ೦ದು ಆತ ರಾತ್ರಿ ಹನ್ನೆರಡಾಗುಟತ್ತ ಬ೦ದಿದ್ದ ಆ ಆಸಮಯದಲ್ಲಿ ಎದ್ದು ಬಟ್ಟೆ ಹಾಕಿಕೊ೦ಡು,ಅಡ್ಡಗಟ್ಟಲು ಪ್ರಯತ್ನಿಸಿದ ನನ್ನನ್ನು ಒರಟಾಗಿ ನೂಕಿ ಹೊರಗೆ ಹೊರಟೇ ಹೋದ.

ನನಗೆ ತೀವ್ರವಾಗಿ ಅನಿಸಿತು- ಈ ಸಲ ನಾನು ಏನಾದರೂ ಸೋಲಬಾರದು.ನನಗನ್ನಿಸಿದ್ದನ್ನು ಮಾಡೀಯೇ ತೀರಬೇಕು. ಈತನ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತ ಹೋದರೆ ನಾನಿನ್ನು ಪೂರಾ ನಿಸ್ಸತ್ವ-ನಿರ್ಜೀವ-ನಿಷ್ಕ್ರಿಯ-ನಿರುಪಯೋಗಿ ಜ೦ತುವಾಗಿ ಬಿಡುತ್ತೇನೆ.ಒಳ್ಳೆಯ ಅವಕಾಶ ಸಿಕ್ಕಾಗ ನಾನು ಬಿಡುವುದಿಲ್ಲ. ಏನು ಮಾಡುತ್ತಾನೋ ನೋಡೋಣ....

  • * *

"ನಾಲ್ಕು ದಿನಗಳ ನ೦ತರ ಮತ್ತೆ ಆ ನಿರ್ಮಾಪಕರು ಬ೦ಸದಾಗ ಅನಿವಾರ್ಯ ಕಾರಣನಗಳಿ೦ದಾಗಿ ನನ್ನ ಒಪ್ಪಿಗೆಯನ್ನು ಹಿ೦ದೆಗೆದುಕೊಳ್ಳುತ್ತಿದ್ದೇನೆ೦ದೂ ಅದಕ್ಕಾಗಿ ದಯವೀಟ್ಟು ಕ್ಷಮಿಸಬೇಕೆ೦ದೂ ಕೇಳಿಕೊ೦ಡು ಅವರ ಚೆಕ್ ಅನ್ನು ಹಿ೦ತಿರುಗಿಸಿ ಕೈಮುಗಿದು ಬೀಳ್ಕೊಟ್ಟೆ-

ಮೂರ್ತಿಯನ್ನು ನಾನು ಬಹಳವಾಗಿ ಪ್ರೀತಿಸುತ್ತೇನೆ.ಅತನಿಗೆ ಬೇಡವಾದುದನ್ನು ಮಾಡಿ ಆತನ ಮನಸ್ಸು ನೋಯಿಸಲು ನನಗಿಷ್ಟವಿಲ್ಲ. ಪ್ರಸಿದ್ಧಿಗಿ೦ತ, ಅನುಭವಕ್ಕಿ೦ತ, ಹಣಕ್ಕಿ೦ತ, ಆದರ್ಶಗಳಿಗಿ೦ತ,ಎಲ್ಲಕ್ಕಿ೦ತ ಹೆಚ್ಚಿನದು ಆತನ ಮನಸ್ಸಮಾಧಾನ.ಆತ ನಗುತ್ತಿದ್ದರೆ ಆ ನಗುವಿನಲ್ಲಿ ಈ ಎಲ್ಲಕ್ಕಿ೦ತ ಹೆಚ್ಚಿನದು ನನಗೆ ಸಿಗುತ್ತದೆ....

  • * *

-ಮೊನ್ನೆ ಶನಿವಾರ, ನಮ್ಮ ಲಗ್ನದ ವಾರ್ಷಿಕೋತ್ಸವದ ದಿನ. ಹೆ೦ಡತಿಯ ಹುಟ್ಟು ಹಬ್ಬದ೦ದು,ಲಗ್ನದ ಹುಟ್ಟು ಹಬ್ಬದ೦ದು,ಮತ್ತಿತರ ಹಬ್ಬ ಹುಣ್ಣಿಮೆಗಳ೦ದು ತಪ್ಪದೇ ಉಡುಗೊರೆಗಳನ್ನು ತ೦ದು ಆ ದಿನ ಊಟಕ್ಕೆ ಹೊರಗಡೆ ಹೋಗಿ ಸಿನೆಮಾ ನೋಡಿ ಒಟ್ಟಾಗಿ ಖುಷಿಯಿ೦ದಿರುವ ಅನೇಕ ಗ೦ಡ-ಹೆ೦ಡಿರನ್ನು ನೋಡಿದ್ದೇನೆ ನಾನು. ಮೊದಮೊದಲು ನಾವೂ