ಕಿರುಕಾದಂಬರಿಗಳು /ಶೋಶ ಣೆ,ಬಂಡಾಯ ಇತ್ಯಾದಿ.....
-ಮುಂದೆ ಎರಡು ದಿನ ಬಿಟ್ಟು ಮೂತಿ ಬಂದಾಗ ನಾನಿನ್ನೂ ಬ್ರೂಡಿಂಗ್ ಮೂಡ್ ನಲ್ಲೇ ಇದ್ದೆ. ಆತ ಬಂದ.ಖುಶಿಯಾಗಿದ್ದ. ಕಳೆದೆರಡು ದಿನ
ನಾನನುಭವಿಸಿದ್ದ ನೋವಿನ ಕಲ್ಪನೆ ಲೇಶಮಾತ್ರವೂ ಆತನಿಗಿರಲಿಲ್ಲ. 'ಯಾಕ ಕಮಲಾ, ಆರಾಮಿಲ್ಲೇನು?'ಆಂತ ಕೇಳಿದ.ಆಳು ತಡೆದುಕೊಳ್ಳಲು ಪ್ರಯತ್ನಿಸುತ್ತ ಶನಿವಾರ ಆತ ಬರಲಿಲ್ಲ ವೇಕೆಂದು ಕೇಳಿದರೆ ಆದು ತೀರ ಗೌಣವಾದ ವಿಶಯವೆಂಬಂತೆ ಭುಜ ಹಾರಿಸಿ ಹೇಳಿದ,'ಹೌದು, ಬರಿಕ್ಕಾಗ್ಲಿಲ್ಲ ಏನ್ಮಾಡೋದು. ಊರಿನಿಂದ ನನ್ನ ಹೆಂಡತಿಯ ಆಣ್ಣ-ಆತ್ತಿಗೆ ಬಂದಿದ್ದರು.ಆವರ ಮನೆಯೊಳಗಿದ್ದಾಗ ಬಿಟ್ಟು ಬಂದರೆ ಚೆನ್ನಲ್ಲ ಆಂತ ಬರಿಲ್ಲ.ಇವತ್ತು ಮುಂಜಾನೆ ಊರಿಗೆ ಹೋದರು. ಆದಕ್ಕೇನೀಗ? ನೀನು ಇಪ್ಟು ಸೆಂಟಿಮೆಂಟಲ್ ಆಗ್ಚಾರು.ಸ್ವಲ್ಟ ರೀಝನಿಂಗ ಕಲಿತುಕೋ. ನೀ ಇಶ್ಟೂ ಎಜ್ಯುಕೇಟೆಡ್ ಇದ್ದೀ. ತಿಳುವಳಿಕೆ ಇದ್ದಾಕಿ ಇದ್ದೀ. ಆ ಆನ್ ಎಜ್ಯುಕೇಟೆಡ್ ಆಡ್ನಾಡಿ ಹೆಂಗಸಿನ್ಹಾಂಗ ನೀನೂ ಹಟಾ ಮಾಡಿದರ ಇಬ್ಬರ ನಡುವ ನಾ ಏನ್ಮಾಡ್ಲಿ ?'
- ಇಶ್ಟು ವಶಾಆತನ ಹೆಂಡತಿಯಾಗಿ ನಾನು ಆತನಿಗೆ ಏನು ಕೇಳಿದ್ದೆ? ಯಾತಕ್ಕಾಗಿ ಹಟ ಮಾಡಿದ್ದೆ? ಯಾವುದೋ ಒಂದು ದಿನ ನನೋಂದಿಗೆ
ಕಳೆಯಲು ವಿನಂತಿಸಿದ್ದೂ ಹಟ ಮಾಡಿದ ಹಾಗಾಯಿತೆ? ನಾನು ವಾದಿಸಿದೆ. ಮಾತಿಗೆ ನ್ಯಾಯವಾಗಿ ಉತ್ತರಿಸಲು ಬರದಂತಾದಾಗ,ತನ್ನ ತಪ್ಟನ್ನೇನಾದರು ನಾನು ಪುರಾವೆ ಸಹಿತ ಸಿದ್ದಮಾಡಿ ತೋರಿಸಿದಾಗ,ಒಮ್ಮೆಲೆ ಸಹನೆ ಕಳೆದುಕೊಂಡು ಹೊಲಸು ಮಾತಾಡಲು ಸುರು ಮಾಡುತ್ತಿದ್ದ.ನನ್ನ ಬಾಯಿ ಮುಚ್ಚಲು ಆದೊಂದೇ ದಾರಿಯೆಂದು ಆತನಿಗೆ ತಿಳಿದಿತ್ತು. ಈಗಲೂ ನಾನು ಆತನ ಬಾಯಿಂದುದುರುವ ಆಣಿಮುತ್ತುಗಳನ್ನು ನಿರೀಕಿಸುತ್ತ ಕೂತೆ. ಆದರೆ ಈ ಸಲ ನನ್ನ ನಿರಿಶೆ ಸುಳ್ಳಾಯಿತು. ಸಹನೆ ಕಳೆದುಕೊಳ್ಳದೆ ಗಂಭೀರನಾಗಿ, ಶಾಂತವಾಗಿ, ಆದರೆ ಬಲು ಆತ ಕೆಲವು ಮಾತು ಹೇಳಿದ. ಎಂತ ಮಾತು!
'ಇಲ್ಲೆ ಕೇಳು ಕಮಲಾ,ಹಿಂಗ ಮ್ಯಾಲಿಂದ ಮ್ಯಾಲೆ ನನ್ನ ನಡುವ ಜಗಳ, ವಾದ, ಮನಸ್ತಾಪ ಆಗೋದು ಬ್ಯಾಡ.ನಿನಗೊಂದು ಮಾತು
ಹೇಳಿರೀನಿ, ನೆನಪಿನ್ಯಾಗಿಟಕೋ. ಪ್ರತಿಯೊಂದು ಮಾತಿಗೆ ಅದಿಕಾರ ಚಲಾಯಿಸ್ಲಿಕ್ಕೆ ಬರಬ್ಯಾಡ. ಮಾತು ಮಾತಿಗೆ ಇಲ್ಲ್ಯಾಕ ಬರೂದಿಲ್ಲ.