ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು/ಶೋಷಣೆ,ಬಂಡಾಯ ಇತ್ಯಾದಿ... ೪೫೩

   ಜನ್ಮದ ನನ್ನ ಅಹೋಭಾಹ್ಯವೆಂದು ನಂಬಿದ್ದೆನೋ ಆ ವ್ಯಕ್ತಿಯ ಜೀವನದಲ್ಲಿ ನನಗೆ ಗೌಣ ಸ್ಥಾನ!ಆ ವ್ಯಕ್ತಿಯ ಮೇಲೆ ನನಗೆ ಅತ್ಯಂತ ಸೀಮಿತ ಅಧಿಕಾರ! ನಾನು ಆತನ ಮನಸ್ಸಿನಲ್ಲಿ,ಹೃದಯದಲ್ಲಿ,ಜೀವನದಲ್ಲಿ ಆಕ್ರಮಿಸಿದ ಸ್ಥಾನ ಕೇವಲ ೧೦%!ನಾನು ಇಲ್ಲವಾದರೂ,ದೂರ ಹೋದರೂ,ಸತ್ತು ಹೋದರೂ ಆತನ ಜೀವನ ವಿಶೇಷ ಏರುಪೇರುಗಳಿಲ್ಲದೆ ನಡೆದೇ ಹೋಗುತ್ತದೆ....
    -ನನ್ನ ಹೃದಯ ಒಡೆದು ಸಿಡಿದು ಹೋಗುತ್ತಿದೆ.ನನ್ನ ಶೋಧನೆ ಅಪೂರ್ಣವಾಗಿ,ದಿಕ್ಕಾಪಾಲಾಗಿ ಕನಸುಗಳು-ಆದರ್ಶಗಳು ನನ್ನನ್ನು ಅಣಕಿಸುತ್ತಿವೆ.ನನ್ನ ನಂಬಿಕೆಗಳು ನನ್ನನ್ನೇ ನೋಡಿ ಅಪಹಾಸ್ಯ ಮಾಡಿ ನಗುತ್ತಿವೆ.
      -ಮೂರ್ತಿ,ನೀನು ಈಗ ಹೇಳಿದ ಮುತ್ತಿನಂಥ ಈ ಎರಡು ಮಾತುಗಳು ನೀನು ಹತ್ತಾರು ವರ್ಷ ಮೊದಲೇ ಏಕೆ ಹೇಳಲಿಲ್ಲ?ಆಗೇಕೆ ನಾನಿಲ್ಲದೆ ಬದುಕುವುದಿಲ್ಲವೆಂದೆ?ನಾನೇ ನಿನ್ನ ಪ್ರಾಣ ಸರ್ವಸ್ವವೆಂದೆ? ನನ್ನಿಂದಲೇ ನಿನ್ನ ಜೇವನಕ್ಕೆ ಅರ್ಥ ಬರುವುದೆಂದೆ?
      -ಬಹಳ ಸಹಿಸಿರುವೆ.ಇನ್ನು ಸಹಿಸಲಾಗುವುದಿಲ್ಲ.ನಾನಿದ್ದರೂ ಒಂದೇ,ಇರದಿದ್ದರೂ ಒಂದೇ,ಅಂದ ಬಳಿಕ ಇಷ್ಟು ನೋವು ಸಹಿಸುತ್ತ ಈ ಮನುಷ್ಯನೊಂದಿಗೆ ಏಕಿರಲಿ? ಎಲ್ಲಾದರೂ ಹಾಳಾಗಿ ಹೋಗುತ್ತೇನೆ.ಜೀವನದಲ್ಲಿ ನಾನನುಭವಿಸಿದ ಈ ಬೃಹತ್ ಸೋಲಿನ ನೋವನ್ನು,ಅವಮಾನವನ್ನು,ಹಿಂಸೆಯನ್ನು ಎಲ್ಲಿ ಸ್ವಲ್ಪವಾದರೂ ಮರೆಯಲಾಗುವುದೋ ಅಂಥ ಸ್ಥಳವೊಂದು ಈ ಭೂಮಿ ಮೇಲಿದ್ದರೆ ಅಲ್ಲಿಗೆ ಹೋಗುತ್ತೇನೆ -ಎಂದು ತಿರುಗಿ ಬಾರದ ಹಾಗೆ.
                                ***

ನಾಲ್ಕಾರು ದಿನ ನಾನು ಸುಮ್ಮನಿದ್ದುದನ್ನು,ಸಪ್ಪಗಿದ್ದುದನ್ನು ನೋಡಿ ಮೂರ್ತಿ ನನ್ನನ್ನು ಬಳಿಗೆಳೆದುಕೊಂಡು ತಲೆ ನೇವರಿಸುತ್ತಾ ಆಂದ,'ಸಿಟ್ಟಿನ್ಯಾಗ ನಾನೇನೇ ಎರಡು ಮಾತು ಹೇಳಿದರ ಆದನ್ನು ಇಷ್ಟು ಮನಸ್ಸಿಗೆ ಹಚ್ಚಿಗೊಂಡು ಕೊರಗತಾರೇನು ಹುಚ್ಚಿ ? ಛೀ,ನೀ ದೊಡ್ಡ ಹುಚ್ಚಿ ನೋಡು,ನಾ ನಿನ್ನ ಭಾಳ ಪ್ರೀತಿ ಮಾಡತೀನಿ.ಅದಕ್ಕ ಮತ್ತ-ಮತ್ತ ನಿನ್ನ ಹತ್ತಿರ ಬರತೀನಿ.ಇದನ್ನ ಈ ಜಗತ್ತಿನೊಳಗಿನ ಯಾವ ಶಕ್ತಿಯೂ ತಡೆಯಲಾರದು ನಾನು ಎಂದಿನಂತೆ ಆತನ ಆಪ್ಪುಗೆಯಲ್ಲಿ ಕರಗುತ್ತೇನೆ. ಆತನನ್ನು