ಪುಟ:ನಡೆದದ್ದೇ ದಾರಿ.pdf/೪೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ... ೪೫೫

         -ಹಾಗಾದರೆ ತಾನು ಜೀವನಕ್ಕೆ ಅರ್ಥಕೊಡುವ ಈ ಎಲ್ಲದರಿಂದ ವಂಚಿತಳಾಗಿದ್ದೇನೆಯೇ?     ಮುಖ್ಯವಾದುದೊಂದನ್ನು    ತಾನು ಕಳೆದುಕೊಂಡಿದ್ದೇನೆಯೇ?
          ಹಲವಾರು ಬಾರಿ ಕಮಲಾ ದುರ್ಬಲ ಮನಸ್ಸಿನ, ಸ್ವಂತ ವ್ಯಕ್ತಿತ್ವವಿಲ್ಲದ ಸಾಮಾನ್ಯ ಹೆಂಗಸೆಂದು ತಾನು ಅವಳೆದುರೇ ಟೀಕಿಸಿದ್ದುಂಟು. ಆದರೆ ಇಷ್ಟೆಲ್ಲ ನೋವು ಎದುರಿಸಿ, ಇಷ್ಟೆಲ್ಲ ದುಃಖ ಸಹಿಸಿ, ತಾನು ನಂಬಿದ ತತ್ವಗಳಿಗಾಗಿ ಮೌನವಾಗಿ ಹೋರಾಡಿ, ಆ ಹೋರಾಟ ವಿಫಲವೆಂದು ಅರಿವಾದಾಗ ಎಲ್ಲವನ್ನೂ ಧಿಕ್ಕರಿಸಿ ದೂರ ನಡೆದ ಕಮಲಾ ದುರಂತ ನಾಟಕದ ಧೀರೋದಾತ್ತ ನಾಯಕಿಯ ಹಾಗೆ ಅನಿಸುತ್ತಿದ್ದಾಳೆ ತನಗೆ. ಅವಳ ಬಗ್ಗೆ ಪ್ರಶಂಸೆ-ಕೌತುಕ-ಅಭಿಮಾನ ಅನಿಸುತ್ತಿದೆ. ಆದರೆ ಜೊತೆಗೇ ಅವಳ ದೈವಕ್ಕಾಗಿ ಕೆಡುಕೆನಿಸುತ್ತಿದೆ....
         ಅರೆ, ಇದೇನು ?ತಾನೂ ದೈವದ ಬಗ್ಗೆ, ಯಾವುದು ಇಲ್ಲವೆಂದು ಇಷ್ಟು ವರ್ಷ ನಂಬಿದ್ದಳೋ ಅಂಥ ದೈವದ ಬಗ್ಗೆ, ಯೋಚಿಸುತ್ತಿರುವೆನಲ್ಲ ಅಂತ ಆಶ್ಚರ್ಯವೂ, ನಾಚಿಕೆಯೂ ಆಯಿತು ಶಶಿಗೆ. ಆಕೆ ಒಮ್ಮೆಲೇ ಮುಸುಕು ಹಾಕಿ ಮಲಗಿಬಿಟ್ಟಳು.
                              ***
     ಅಂದು ಶಶಿಗೆ ಹಾಸ್ಪಿಟಲಿನಲ್ಲಿ ತನ್ನದೇ ಸ್ವಂತದ ಎರಡು ಕೇಸುಗಳಿದ್ದುದರಿಂದ ಆಕೆ ಎಂದಿಗಿಂತ ತುಸು ಬೇಗನೇ ಡ್ಯೂಟಿಗೆ ಹೋಗಿದ್ದಳು. ಎರಡೂ ಆಪರೇಶನ್ನಿನ ಕೇಸುಗಳು; ಪೂರ್ಣಿಮಾ ಸಿಂಗ್ ಗೆ ಸಿಝೇರಿಯನ್-ಕಮ್-ಟ್ಯುಬೆಕ್ಟಮಿ; ಪಟೇಲ್ ಸಾಹೇಬರಿಗೆ ಹಾರ್ಟ್ ಆಪರೇಶನ್. ಪೂರ್ಣಿಮಾಳ ಕೇಸನ್ನು ಆಕೆಯೇ ನೋಡಿಕೊಳ್ಳುವವಳಿದ್ದಳು. ಪಟೇಲ್ ಸಾಹೇಬರ ಆಪರೇಶನ್ನಿಗೆ ಡಾ. ಸತೀಶ ದೇಶಪಾಂಡೆ ಹಾಗೂ ಆರ್. ಎಮ್. ಓ. ಡಾ. ಮುಖರ್ಜಿ ಇದ್ದರು. ಹಿಂದಿನ ರಾತ್ರಿ ಬಹಳ ಹೊತ್ತು ಓದುತ್ತಾ ಕೂತಿದ್ದರಿಂದ, ನಂತರವೂ ನೂರು ವಿಚಾರಗಳಿಂದ ಸರಿಯಾಗಿ ನಿದ್ರೆ ಆಗಿರದಿದ್ದುದರಿಂದ ಶಶಿಗೆ ಸಣ್ಣಗೆ ತಲೆನೋಯುತ್ತಿತ್ತು. ಎರಡೂ ಆಪರೇಶನ್ಸ್ ಮುಗಿದ ನಂತರ ತಣ್ಣಗೆ ಹೋಗಿ ಡ್ಯೂಟಿ ರೂಮಿನಲ್ಲಿ ಒಂದು ತಾಸು ಮಲಗಿ ಬಿಡಬೇಕು ಅಂದುಕೊಳ್ಳುತ್ತಲೇ ಆಪರೇಶನ್ನಿನ ತಯಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು.
           ಆಪರೇಶನ್ ಥಿಯೇಟರಿನ ಹೊರಗೆ ಆತಂಕವೇನೂ ಇಲ್ಲದೇ ಇದ್ದರೂ ಸಾಕಷ್ಟು ಅಸಹನೆಯಿಂದ ಗಳಿಗೆಗೊಮ್ಮೆ ವಾಚು ನೋಡಿಕೊಳ್ಳುತ್ತ ಪೈಪ್ ಸೇದುತ್ತ ಕಾಯುತ್ತ ಕೂತಿದ್ದ ಮಿ. ಭಾಸ್ಕರ್ ಸಿಂಗ್ ನ ಎದುರು ನರ್ಸ್ ಆತನ ಸಹಿಗಾಗಿ ಪೇಪರು ಹಿಡಿದಾಗ ಒಂದು ಕ್ಷಣ ಅದರ ಮೇಲೆ ಕಣ್ಣಾಡಿಸಿ ಆತ ಒರಟಾಗಿ ಅಂದ, "ಕರೀರಿ