ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು/ಶೊಷಣೆ, ಬಂಡಾಯ ಇತ್ಯಾದಿ... ೪೫೭
ಎರಡ ಸರೆ ಫ಼ಾರಿನರ್ಸ್ ಗೆಸ್ಟ್ ಅಂತ ಬರ್ತಾರ ನಮ್ಮ ಫ಼್ಯಾಕ್ಟರಿಗೆ, ಮತ್ತು ಮನೀಗ. ನನ್ನ ಹೆಂಡ್ತಿ ಟ್ರಿಮ್ ಆಗಿ ಕಾಣಿಸಬೇಕು ಎಲ್ಲಾರ ಮುಂದ. ನೀವು ಟ್ಯೂಬೆಕ್ಟಮಿ ಮಾಡಿ ಆಕೆ ಫ಼ಿಗರ್ ಹಾಳು ಮಾಡಲಿಕ್ಕೆ ನಾ ಅವಕಾಶ ಕೊಡೋದಿಲ್ಲ. ದಿಸ್ ಈಜ್ ಮಾಯ್ ಫ಼ಾಯಿನಲ್ ಸೇ."
-ಶಶಿಯ ಮೈಯಿಡೀ ಉರಿಯುತ್ತಿತ್ತು. ಶಕ್ಯವಿದ್ದರೆ ಈ ಪ್ರಾಣಿಯನ್ನು ಅನಾಮತ್ತಾಗಿ ಎತ್ತಿ ಗೇಟಿನಾಚೆಯ ಮೇನ್ ರೋಡಿನ ಮೇಲೆ ಎಸೆದುಬಿಟ್ಟು, ಓಡುತ್ತಿರುವ ವಾಹನಗಳ ಕೆಳಗೆ ಸಿಕ್ಕು ಆತ ಜಿಬ್ಬೆಯಾಗುವುದನ್ನು ನೋಡಿ ಆನ್ಂದಿಸುತ್ತಿದ್ದಲಳು ಆಕೆ. ಆದರೆ ಅಂಥದೇನೂ ಮಾಡುವುದು ಶಕ್ಯವಿಲ್ಲದ್ದರಿಂದ ಆಕೆ ಸುಮ್ಮನೆ ಒಳಗೆ ಬಂದಳು. ನೋವು ತಿನ್ನುತ್ತ ಇನ್ನೂ ಓ. ಟಿ. ಯ ಹೊರಗೆ ಸ್ಟ್ರೆಚರಿನಲ್ಲಿ ಮಲಗಿದ್ದ ಪೂರ್ಣಿಮಾ ಸುಸ್ತಾಗಿದ್ದರೂ ಹೊರಗೆ ನಡೆದಿದ್ದ ಸಂಭಾಷಣೆ ಕೇಳಿಸಿಕೊಂಡಿದ್ದಳು. ಕೆಂಪಾಗಿದ್ದ ಶಶಿಯ ಮುಖ ನೋಡಿ ಕ್ಷೀಣದನಿಯಲ್ಲಿ ಆಕೆ "ಹೋಗ್ಲಿ ಬಿಡ್ರಿ ಡಾಕ್ಟರ್ , ಇದು ನನ್ನ ದೈವ" ಅಂತ ಶಶಿಯನ್ನೇ ಸಂತೈಲೆತ್ನಿಸಿದಳು.
ದೈವ ಅಂದ್ರ ಏನ್ರೀ ಡಾಕ್ಟರ್?", ತನ್ನ ಗಂಡನ ಆಪರೇಶನ್ ಇದೆಯೆಂದು ಕಷ್ಟಪಟ್ಟು ಬಿಡುವು ಮಾಡಿಕೊಂಡು ಹಾಸ್ಪಿಟಲಿಗೆ ಬಂದಿದ್ದ ಮಾಲಿನಿಬಾಯಿ ಪಟೇಲ ಮಿಸೆಸ ಸಿಂಗ್ ಳ ವಿಷಯ ಕೇಳಿ ನಂತರ ಶಶಿಗೆ ಅಂದಿದ್ದಳು, "ನಮ್ಮ ಹೆಂಗಸ್ರು ತಮ್ಮ ದೌರ್ಬಲ್ಯ - ಅಸಹಾಯಕತೆ-ಇನ್ ಫೀರಿಯಾರಿಟಿ ಇದೆಲ್ಲಾ ಕೂಡಿಸಿ ಅದಕ್ಕ 'ದೈವ' ಅಂತ ಕರೀತಾರ. ಪರಿಸ್ಥಿತಿ ಎದುರಿಸಿ ಫೈಟ್ ಮಾಡೋ ತಾಕತ್ತಿದ್ದವರ ಡಿಕ್ಷನರಿಯೊಳಗೆ ದೈವ ಅನ್ನೋ ಶಬ್ದಾನೇ ಇರೋದಿಲ್ಲ." ದೈಹಿಕವಾಗಿ, ಮಾನಸಿಕವಾಗಿ ಎರಡೂ ಬಗೆಯಿಂದ ಸಾಕಷ್ಟು ದಣಿದಿದ್ದ ಶಶಿ ಆಕೆಗೆ ಉತ್ತರಿಸುವ ಗೊಡವೆಗೇ ಹೋಗಲಿಲ್ಲ. ಆಗ ಮಾಲಿನೀಬಾಯಿಯೇ ಮತ್ತೆ ಅಂದಳು. "ಈ ಹುಡುಗಿ ಪೂರ್ಣಿಮಾ ನನಗ ಮೊದಲಿನಿಂದ್ಲೂ ಗೊತ್ತು ಡಾಕ್ಟರ್, ನನ್ನ ಸಣ್ಣ ತಂಗಿ ಕುಸುಮಾ ಈಗ ಅಮೇರಿಕಾದೊಳಗಿದ್ದಾಳಲ್ಲ. ಆಕೀನೂ ಈ ಪೂರ್ಣಿಮಾನೂ ಕಾಲೆಜಿನೊಳಗ ಕ್ಲಾಸ್ ಮೇಟ್ಸ್ ಆಗಿದ್ರು. ಪೂರ್ಣಿಮಾ ಭಾಳ ಬ್ರೀಲಿಯಂಟ್ ಸ್ಟೂಡಂಟ್. ರೆವ್ಹಲ್ಯೂಶನರೀ ಕವಿತಾ ಬರೀತಿದ್ಳು. ನನಗಿನ್ನೂ ಛಲೋ ನೆನಪದ - ಆಕೆ ರವಿವಾರಕೊಮ್ಮೆ ತಾನು ಹೊಸದಾಗಿ ಬರೆದ ಕವಿತಾ ತಗೊಂಡು ನಮ್ಮ ತಾಯಿ ಮನೀಗೆ ಬರ್ತಿದ್ಲು, ನಮಗೆಲ್ಲಾ-ಅಂದರ ನಾನು ಕುಸುಮಾ, ನಮ್ಮ ಅಣ್ಣ, ಮತ್ತ ಕೆಲವು ಫ್ರೆಂಡ್ಸು-ಹಿಂಗ ಒಂದು ಸರ್ಕಲ್ಲೇ ಇತ್ತು ನಮ್ದು - ಓದಿ ತೋರಸಅತಿದ್ಳು. ಅದರಾಗಅ ಈ ದೈವ - ಆ ದೈವ ಅಂತ ತಮ್ಮ ವೀಕ್ ನೆಸ್ ಎಲ್ಲಾ