ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫೮ ನಡೆದದ್ದೇ ದಾರಿ ದೈವದ ಮ್ಯಾಲೆ ಹಾಕಿ ಪಾರಾಗೋವಂಥಾ ಕೈಲಾಗದ ಮಂದಿನ್ನ ಕ್ರಿಟಿಸಾಯಿರಮ್ ಮಾಡಿ ಒಂದು ಕವಿತಾ ಬರೆದಿದ್ದು, ಯಾವುದೋ ಕಾಂಪಿಟೇಶನ್ನಿನ್ಯಾಗ ಫಸ್ಟ್ ಪ್ರಾಯಿಜ್ ಸಿಕ್ಕಿತ್ತು ಅದಕ್ಕೆ, ಇವತ್ತ ನನಗ ಅದು ನೆನಪಾಗ್ಲಿಕತ್ತೇದ." - ಯಾರ ಇತಿಹಾಸದಲ್ಲಿಯೂ ಆಸಕ್ತಿಯಿರದ ಶಶಿ ಏನೂ ಪ್ರತಿಕ್ರಿಯೆ ತೋರದೆ ಸುಮ್ಮನೇ ಇದ್ದಾಗ ಮಾಲಿನಿಬಾಯಿ ರಹಸ್ಯವಾದುದನ್ನೇನೋ ಹೇಳುವಂತೆ ಧ್ವನಿ ತಗ್ಗಿಸಿ ಮುಂದುವರಿಸಿದಳು, “ಈ ದರಿದ್ರ ಸಿಂಗನ್ನ ಮದಿವ್ಯಾಗಿ ಪೂರ್ಣಿಮಾನ ಕರಿಯರೇ ಹಾಳಾತು ಡಾಕ್ಟರ್‌. ರೊಕ್ಕ ಸಾಕಷ್ಟು ಆದ ಈ ಮನಷ್ಯಾನ ಹತ್ರ. ಆದರ ಏನೂ ರಿಫೈನ್‌ಮೆಂಟ್ ಇಲ್ಲ. ಅಂಡರ್‌ಸ್ಟ್ಯಾಂಡಿಂಗ್ ಇಲ್ಲ. ಲಗ್ನಾದ ಮ್ಯಾಲ ಪೂರ್ಣಿಮಾನ ಕವಿತಾ ಓದಿ ಸದಾ 'ಈ ಕವಿತಾ ಯಾರ ಸಲುವಾಗಿ ಬರದೀ ? ಇದರಾಗಿನ 'ಈತ' ಅನ್ನೋವಾತ ಯಾರು ? ನಿನ್ನ ಹಳೇ ಗೆಣ್ಯಾ ಏನು ? ಈ ಕವಿತಾ ಇನ್ಯಾರ ಸಲುವಾಗಿ ಬರದೀ ? 'ಅವರೆಲ್ಲ' ಅಂದರ ಯಾರಾರು ? ಈ ಕವಿತಾ ಯಾತರ ಸಲುವಾಗಿ ಬರಿದೇ ? 'ಆ ದಿನ' ಅಂದರ ಯಾವ ದಿನ ? ಆವತ್ತ ಎಲ್ಲೆ ಹೋಗಿದ್ದಿ ? ಏನ್ಮಾಡಿದ್ದಿ ?' ಅಂತ ಕಿಟಿಕಿಟಿ ಹಚ್ಚತಿದ್ದನಂತ. ಕಡೀಕೆ ತಲಿಚಿಟ್ಟು ಹಿಡಿದು ಆಕಿ ಬರಿಯದೇ ಬಿಟ್ಟುಬಿಟ್ಟಳು. ಹಿಂಗಂತ ಹೇಳಿ ನಮ್ಮ ಕುಸುಮಾನ ಮುಂದ ಆಳಂತ." ನಂತರ ಮುಷ್ಟಿ ಬಿಗಿದು ಮತ್ತೂ ಆಕೆಯೇ ಅಂದಳು. “ನಾನಾಗಿದ್ರ ಗಂಡನ ಮೀನ್‌ಮೈಂಡೆಡ್‌ನೆಸ್ ಸಲುವಾಗಿ, ಅಥವಾ ಅವನನ್ನ ಮೆಚ್ಚಿಸೋ ಸಲುವಾಗಿ, ಹಿಂಗ ನನ್ನ ಇಂಟರೆಸ್ಟ್ -ಹಾಬೀಸ್ ಎಂದೂ ಸ್ಯಾಕ್ರಿಫಾಯಿಸ್ ಮಾಡ್ತಿದ್ದಿಲ್ಲ. ಈಗ ನನ್ನ ಗಂಡನೂ ಏನೇನೂ ನನ್ನ ವಿಚಾರ-ಅಭಿಪ್ರಾಯ ಸೇರೂದಿಲ್ಲ. ನನಗೆ ಗೊತ್ತದ. ಆದರ ನಾನೇನು ಗಂಡನ ಸಲವಾಗಿ ನನಗನಿಸೋದನ್ನ ಹೇಳೋದು-ಮಾಡೋದು ಬಿಟ್ಟಿಲ್ಲ. ಯಾಕ್ಸಿಡಬೇಕು ? ಲಗ್ನಾದ ಮಾತ್ರಕ್ಕೆ ನಮ್ಮನ್ನ ನಾವು ಮಾಡಿಕೊಂಡ್ವಾಂಗ ಆತೇನು ?" - ಎಲ್ಲ ಸರಿ ಮಾಲಿನಿಬಾಯಿ, ಶಶಿ ಮನಸ್ಸಿನಲ್ಲೇ ಅಂದುಕೊಂಡಳು, ಆದರೆ ನಿನ್ನ ಗಂಡ ಕಾಲು ಮುರಿದುಕೊಂಡು ಹಾಸಿಗೆ ಹಿಡಿದಿರದಿದ್ದರೆ....

ಸಂಜೆ ಶಕ್ತಿ ತನ್ನ ಮನೆಯ ಪಡಸಾಲೆಯಲ್ಲಿ ಪೇಶಂಟ್ಸ್ ನೋಡಲೆಂದೇ ಹಾಕಿದ್ದ ಪಾರ್ಟಿಶನ್‌ನಲ್ಲಿ ಯಾವುದೋ ಮೆಡಿಕಲ್ ಮಾಗಝಿನ್ ತಿರುವಿ ಹಾಕುತ್ತ ಕೂತಾಗ ಲೀಲಾ ಕುಲಕರ್ಣಿ ಬಂದಳು. ಕಳೆದ ಕೆಲವು ದಿನಗಳಲ್ಲಿ ದಾರಿಯ ಮೇಲೆ, ಟ್ರೇನಿನಲ್ಲಿ, ತಮ್ಮ ಬಿಲ್ಲಿಂಗ್‌ನ ಕಂಪೌಂಡ್‌ನಲ್ಲಿ ಶಶಿ ಹಲವಾರು ಸಲ ನೋಡಿದಾಗ ಲೀಲಾ ದಿನ ದಿನಕ್ಕೆ ಹೆಚ್ಚು ಧೈರ್ಯವಂತೆಯಾಗಿ, ಆತ್ಮವಿಶ್ವಾಸವುಳ್ಳವಳಾಗಿ, ತೃಪ್ತಳಾಗಿ