ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ... ೪೫೯

ಕಾಣಿಸಿದ್ದಳು. ಅಷ್ಟೇ ಅಲ್ಲ, ಅನೇಕ ಸಲ ಶಶಿ ಬಿಡುವಾಗಿದ್ದಾಗ ಬಂದು ಕೂತು ತಾನು ಬಾಸ್ ಜೊತೆ ಹೋಗಿದ್ದ ಔಟಿಂಗ್ ಗಳ ವರ್ಣನೆ ಮಾಡುತ್ತಿದ್ದಳು. ಪ್ರಮೋಶನ್ ಸಿಕ್ಕು ಖುಶಿಯಾಗಿದ್ದ ಆಕೆಯೀಗ ಇತರ ಚಿಲ್ಲರೆ ವಿಷಯಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದು ಆಕೆಯನ್ನು ಸನಿಹದಿಂದ ನೋಡಿದಾಗ ಶಶಿಗೆ ಆಕೆ ಸೊರಗಿದಂತೆ, ಬಿಳಿಚಿಕೊಂಡಂತೆ, ನಿಶ್ಯಕ್ತಳಾದಂತೆ ಕಾಣಿಸಿದಳು. ಓವ್ಹರ್ ವರ್ಕ್ ನ ಫಲವಿರಬೇಕು- ಆಫೀಸಿನ ಒಳಗೆ ಹಾಗೂ ಹೊರಗೆ, ಎರಡೂ ಕಡೆ ದುಡಿದಿದ್ದರ ಪರಿಣಾಮವಿರಬೇಕು, ಅನ್ನಿಸಿತು ಶಶಿಗೆ.

                  ಹೌದು, ಶಶಿಯ ಅನುಭವಿಕ ಕಣ್ಣುಗಳು ತಪ್ಪರಲಿಲ್ಲ. ಲೀಲಾ ತನ್ನ ಇತ್ತೀಚಿನ ತೊಂದರೆಗಳ ಬಗ್ಗೆ ತುಸು ಕಾಳಜಿಯಿಂದಲೇ ಹೇಳಿಕೊಂಡಳು. ಸರಿಯಾಗಿ ಮುಟ್ಟಾಗುವುದಿಲ್ಲ; ಮುಟ್ಟಾಗಿ ಎಂಟು-ಹತ್ತು ದಿನಗಳಾದರೂ ಬ್ಲೀಡಿಂಗ್ ನಿಲ್ಲುವುದಿಲ್ಲ ; ಕೈಕಾಲುಗಳಲ್ಲಿ ಸದಾ ನಿಶ್ಯಕ್ತಿ ; ವಿಪರೀತ ಸೊಂಟನೋವು ; ಅಲ್ಲದೇ ಬಿಳಿಸೆರಗು ; ಸಂಜೆಯಾದೊಡನೆ ತಲೆನೋವು ; ಹಸಿವೆ ಇಲ್ಲ ; ಇತ್ಯಾದಿ ಇತ್ಯಾದಿ.
                  "ನಾ ಔಷಧ-ಟಾನಿಕ್ಕು ಎಲ್ಲಾ ಕೊಡ್ತೀನಿ ಲೀಲಾ, ಅವನ್ನ ತಪ್ಪದೇ ದಿನಾ ತಗೋ. ಆದರ ನೀ ಭಾಳ ಎನೀಮಿಕ್ ಆಗೀದಿ. ನಿನಗ ಆ ಕಾಂಟ್ರಾಸೆಪ್ಪಿವ್ಹ್ಜ್ ಒಗ್ಗಿಲ್ಲ.ಅವನ್ನ ಬಿಟ್ಟುಬಿಡು."
                  "ಅಂದರ - ?"
                  "ಅಂದರೆ ಸ್ವಲ್ಪ ದಿನಾ, ಅಂದರ ತಿಂಗಳೆರಡು ತಿಂಗಳು, ನಿನ್ನ ಹೊರಗಿನ ಆಕ್ಟಿವಿಟೀಸ್ ಎಲ್ಲಾ ಸ್ಟಾಪ್ ಮಾಡ್ಬೀಕು."
                  ಲೀಲಾಳ ಮುಖ ಸಪ್ಪೆಯಾಯಿತು, "ಅದು ಹ್ಯಾಂಗ ಸಾಧ್ಯ ಡಾಕ್ಟರ್ ? ನನಗ ಪ್ರಮೋಶನ್ ಆಗೇದ ಖರೇ, ಆದರ ಇನ್ನೂ ಪ್ರೊಬೇಶನರಿ ಇದ್ದೀನಿ. ಪ್ರಮೋಶನ್ ಕನ್ ಫರ್ಮೇಶನ್ ಆಗೂತನಕಾ ಬಾಸ್ ಹೇಳಿಧಾಂಗ ಕೇಳ್ಲಿಕ್ಕೆ ಬೇಕಲ್ಲ."
                  "ನೋಡು, ಏನ್ಮಾಡ್ತೀಯೋ. ನಿನ್ನ ಆರೋಗ್ಯದ ಪ್ರಶ್ನೆ. ಜಾಬ್ ಕಿಂತಾ ಆರೋಗ್ಯ ಮುಕ್ಯ ಅಲ್ಲ?"
                  "ನನ್ನ ಸದ್ಯದ ಪರಿಸ್ಥಿತಿಯೊಳಗ ಜಾಬೇ ಮುಖ್ಯ ಡಾಕ್ಟರ್, ಅದು ನಿಮಗೂ ಗೊತ್ತದ."
                   ಹೌದು. ಶಶಿಗೆ ಗೊತ್ತಿತ್ತು.ಆದರೂ- "ಹಾಂಗಾದರ ಪೂರಾ ಬಿಡ್ಲಿಕ್ಕೆ ಆಗದಿದ್ರೂ ಸ್ವಲ್ಪ ಕಂಟ್ರೋಲ್ ಮಾಡು ಸಾಧ್ಯ ಆದರ."
                  "ಆಗ್ಲಿ ಡಾಕ್ಟರ್. ಇನ್ನ ಮೂರು ತಿಂಗಳು ಅಷ್ಟೇ. ಅಷ್ಟರಾಗ ಕನ್ ಫರ್ಮೇಶನ್ ಆರ್ಡರ್ ಕೊಡಸ್ತೀನಿ ಅಂತ ಹೇಳ್ಯಾರ ಬಾಸ್. ಆಮ್ಯಾಲೇನು ನಾ ಬಾಸ್ ನ ಮರ್ಜೀ ಅಷ್ಟಾಗಿ ಹಿಡೀಬೇಕಾಗಿಲ್ಲ."