ಪುಟ:ನಡೆದದ್ದೇ ದಾರಿ.pdf/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬೦ ನಡೆದದ್ದೇ ದಾರಿ -ಲೀಲಾಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದ ಶಶಿ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಿದ್ದಳು- ಇನ್ನು ಮೂರು ತಿಂಗಳು. ಏನೂ ಹಿಡಿತವಿಲ್ಲದೆ ಇದೇ ರೀತಿ ಈ ಹುಡುಗಿ ಬಾಸ್‌ನ ಮರ್ಜಿ ಕಾಯಲು ತನ್ನ ಜೀವಶಕ್ತಿಯನ್ನು ಸೇರಿಸುತ್ತ ಸಾಗಿದರೆ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ಆಕೆಯ ದೇಹಸ್ಥಿತಿ ಕೆಡಬಹುದು. ಆಕೆಯ ಎದೆ, ಗಂಟಲು, ಫುಪ್ಪುಸ ನೋಡುತ್ತಿದ್ದರೆ ಟಿ. ಬಿ. ಯ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಅತಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ, ಊಟ-ವಿಶ್ರಾಂತಿ ಕಡೆಗಣಿಸಿ ದುಡಿದದ್ದರ ಫಲ.... ಆದರೆ ಹಾಗೆಂದು ಅವಳಿಗೆ ಹೇಳಲಾಗದು. ಅವಳ ಬಾಸ್ ರೆಗ್ಯುಲರ್ ವೂಮನೈಜರ್ ಇರಬೇಕು. ಅವನಿಂದಾಗಿ ಈ ಪಾಪದ ಹುಡುಗಿಗೆ ಪ್ರಮೋಶನ್, ಜಾಬ್ ಕನ್‌ಫರ್ಮೇಶನ್ ಮಾತ್ರವಲ್ಲದೆ ಸಿಫಿಲಿಸ್‌ನೂ ಬಳುವಳಿಯಾಗಿ ದೊರೆತ ಹಾಗಿದೆ. ಕರ್ಮವೇ.... -ಶಕ್ತಿಯ ಪರೀಕ್ಷೆ ಮುಗಿದ ನಂತರ ಎದ್ದು ಸೀರೆ ಸರಿಪಡಿಸಿಕೊಂಡು ಟೇಬಲಿನಿಂದಿಳಿದು ಲೀಲಾ ನಾಚಿಕೆಯಿಂದ ಅಂದಳು, “ಮುಂದಿನ ಮೇ ತಿಂಗಳದಾಗ ಆಪ್ಪ ವಕೀಲರ ಅಣ್ಣನ ಮಗನ ಕೂಡ ನನ್ನ ಲಗ್ನ ಆಗೂದದ ಡಾಕ್ಟರ್, ಅವನೂ ಇಲ್ಲೇ ಪಿ. ಎಂಡ್ ಟಿ. ಯೊಳಗ ಕೆಲಸದಾಗಿದ್ದಾನ. ಅಷ್ಟರಾಗ ನಾ ಆರಾಮಾದರ ಸಾಕು. ಆ ನೆನಪಿನಿಂದ ಲೀಲಾ ಖುಶಿಯಾದ ಹಾಗೆ ಕಾಣಿಸಿತು. ಲಗ್ನವಾಗುವ ವ್ಯಕ್ತಿಗೆ ದ್ರೋಹ ಮಾಡುತ್ತಿರುವೆನೆಂಬ ಕೊರಗೇನೂ ಆಕೆಗೆಆಕೆಯೇ ಹಿಂದೆ ಅಂದಿದ್ದಂತೆ- ಈಗಿರುವ ಹಾಗೆ ಕಾಣಲಿಲ್ಲ. ಆಕೆಯಲ್ಲಾದ ಈ ಪ್ರಗತಿಯ ಬಗ್ಗೆ ಶಶಿಗೆ ಸಂತೋಷವೆನಿಸಿದರೂ ಈ ಹುಡುಗಿಯ ಲಗ್ನದ, ಸುಖೀ ಸಂಸಾರದ ನೂರು ಕನಸುಗಳಲ್ಲಿ ಎಷ್ಟು ಸಫಲವಾಗುವವೋ, ಎಷ್ಟು ಕಮರಿ ಹೋಗುವವೋ ಅಂತ ಆಕೆ ಚಿಂತಿಸಿದಳು. ಲೀಲಾ ಹೊರಟುಹೋದ ತುಸು ಹೊತ್ತಿನಲ್ಲಿ ಶಾಂತಾ ಆಪ್ಟೆ ಬಂದಳು. ತನ್ನ ಮಗಳಿಗೆ ಗುಣವಾದ ಸಂಗತಿ ತಿಳಿಸಿ ಥ್ಯಾಂಕ್ಸ್ ಹೇಳಿದಳು. ನಂತರ ಪದ್ಧತಿಯಂತೆ ತನ್ನ ಇತ್ತೀಚಿನ ಕಾರ್ಯಕ್ರಮಗಳ ವರದಿ ಒಪ್ಪಿಸಿದಳು. ತನ್ನ ಅಡಿಗೆಯಾಕೆಯ ಕೇಸಿನಲ್ಲಿ ತನ್ನ ಪಾರ್ಟಿಗೆ ಜಯವಾಗಿ ಆಕೆಗೆ ಗಂಡನ ಆಸ್ತಿಯೆಲ್ಲಾ ಸಿಕ್ಕದ್ದು ; ತನ್ನೂರಿನಿಂದ ಕಲಿಯಲು ಇಲ್ಲಿಗೆ ಬಂದಿದ್ದ ಇಬ್ಬರು ಹುಡುಗರಿಗೆ ತಾನು ಕಾಲೇಜಿನಲ್ಲಿ ಫೋಶಿಪ್ ಸಿಗುವಂತೆ ಮಾಡಿದ್ದು ; ಮತ್ತು ಇತ್ತೀಚ ತಾನೂ ವಕೀಲ ಸಾಹೇಬರೂ ಕೂಡಿ ಬಡ ಕುಲಕರ್ಣಿ ಮಾಸ್ತರರ ಮಗಳು ಲೀಲಾನನ್ನು ಮದುವೆಯಾಗಲು ತಮ್ಮ ಭಾವನ ಮಗನನ್ನು ಒಪ್ಪಿಸಿದ್ದು ; ಮದುವೆಗೆ ಬೇಕಾದ ಹಣವನ್ನು ತಾವೇ ಬಡ್ಡಿಯಿಲ್ಲದ ಸಾಲರೂಪವಾಗಿ ಮಾಸ್ತರರಿಗೆ ಕೊಡಲು ನಿರ್ಧರಿಸಿದ್ದು : ವರದಕ್ಷಿಣೆ ಕೇಳಬೇಡವೆಂದು ವರನನ್ನು ಮನವೊಲಿಸಿದ್ದು : ಇತ್ಯಾದಿ.