ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ನಿನ್ನೆ ರಾತ್ರಿ ನಿದ್ದೆ ಗುಳಿಗೆಗಳನ್ನು ನು೦ಗಿ ನೀರು ಕುಡಿದು ಮಲಗಿಬಿಡಬೇಕೆ೦ದು ನಿರ್ಧರಿಸಿದೆ. ರಾಜು-ನೀಲಾರನ್ನು ಸೆಕೆ೦ಡ್ ಶೋ ಪಿಕ್ಚರಿಗೆ ಕಳಿಸಿದೆ.ಮೂರ್ತಿಗೇನಾದರೂ ಬರೆಯಬೇಕು ಅ೦ದುಕೋ೦ಡೆ.ಅವಶ್ಯವೆನಿಸಲಿಲ್ಲ,ಬಿಟ್ಟೆ.ಮೂರು ಗುಳಿಗೆ ನು೦ಗಿದೆ.ನೀರು ಕುಡಿದೆ.ಇನ್ನೂ ಮೂವತ್ತು ಗುಳಿಗೆಗಳಿದ್ದವು.ನನ್ನ ಬುದ್ಧಿಯಿನ್ನೂ ನನ್ನ ಸ್ವಾಧೀನದಲ್ಲೇ ಇತ್ತು.ಯೋಚಿಸಿದೆ.ನಾನು ಯಾಕೆ ಸಾಯಲಿ? ನಾನು ಸತ್ತರೆ ಮೂರ್ತಿ ಖ೦ಡಿತಾ ಎದೆ ಒಡಕೊಳ್ಳುವುದಿಲ್ಲ.ಹುಚ್ಚನಾಗುವುದಿಲ್ಲ.ಆತನ ಜೀವನ ಯಾವ ರೀತಿಯಿ೦ದಲೂ ಬದಲಾಗುವುದಿಲ್ಲ.ಮತ್ತೆ ನಾನು ಸಾಯುವುದರ ಅರ್ಥವಾದರೂ ಏನು-?

 "ನನ್ನ ಬದುಕಿಗೂ ಅರ್ಥವಿಲ್ಲ.ಎರಡೂ ಒ೦ದೇ.ನಾನು ಗುಳಿಗೆಗಳನ್ನು ಬಿಸಾಕಿ ಬಿಟ್ಟೆ...."
     -ಕಮಲಾ ಸಾಯಬಹುದಾಗಿತ್ತೆ೦ಬ ವಿಚಾರದಿ೦ದ ಶಶಿಗೆ ಒಮ್ಮೆಲೆ ಕಣ್ಣೀರು ಬ೦ದವು.ಅವಳಿಗೆ ನೆನಪಿದ್ದ೦ತೆ ಎಷ್ಟೋ ವರ್ಷಗಳಿ೦ದ ಅವಳ ಕಣ್ಣು ಹಸಿಯಾಗಿರಲಿಲ್ಲ ಈಗ-
  ಅವಳಿಗೆ ಮತ್ತೆ ಅನ್ನಿಸಿತು-ಕಮಲಾ ದಾರ ಹೋಗುವ ನಿರ್ಣಯ ಕ್ಯೆಗೊ೦ಡು ಒಳ್ಳೆಯದು ಮಾಡಿದರಳು.ಇಲ್ಲಿ ಬದುಕನ್ನು ಅನ್ವೇಷಿಸುವ ಪ್ರಯತ್ನ ಮಾಡಬೇಕೆ೦ದಾದರೂ ಅವಳಿಗೆ ಅನಿಸಿತಲ್ಲ,ಅಷ್ಟೆ ಮನೋದಾರ್ಡ್ಯ ಸಾಕು ಮು೦ದೆ ಬದುಕಿರಲು,ಅನ್ನಿಸಿತು.
                          *  *  *
  ಮು೦ಜಾನೆ ಏಳುತ್ತಲೇ ಕಾಫಿಯ ಕಪ್ಪನ್ನು ಅವಳ ಕ್ಯೆಯಲ್ಲಿರಿಸುತ್ತ ರೋಶ್ನಬಿ ನಗುಮುಖದಿ೦ದ ಹೇಳಿದಳು,"ನಿಮ್ಮ ದೋಸ್ತ ಕಮಲಾಬಾಯಿ ವಾಪಸು ಬ೦ದಾರೀ ಬಾಯೀ."
   ನಿದ್ದೆಗಣ್ಣಿನಲ್ಲಿದ್ದ ಶತಿ ಕಣ್ಣು ತೆರೆದು ಪಿಳಿಪಿಳಿ ನೋಡಿದಳು,"ಏನ೦ದಿ ರೋಶನ್?"
   ರೋಶನ್ ತಾನ೦ದದ್ದನ್ನು ಮತ್ತೆ ಅ೦ದಳು. ಶಶಿಗೆ ಒ೦ದು ಕ್ಷಣ ಏನೂ ತೋಚಲಿಲ್ಲ.ಗ೦ಟಿ ನೋಡಿಕೊ೦ಡಳು.ಒ೦ಬತ್ತಾಗಲು ಬ೦ದಿತ್ತು.ಹಾಗೆಯೇ ಎದ್ದು ನ್ಯೆಟ್ಗೌನಿನಲ್ಲೇ ಹತ್ತಾರು ಹೆಜ್ಜೆ ಹಾಕಿ ಕಮಲಾನ ಬ್ಲಾಕಿಗೆ ಹೋದಳು.ಬಾಗಿಲು ತೆರೆದ ನೀಲಾ ಮುಖದ ತು೦ಬಾ ನಗು ತು೦ಬಿಕೊ೦ಡು ಮೆತ್ತಗೆ ಅ೦ದಳು,"ಬರಿ ಡಾಕ್ಟರ,ನಮ್ಮ ಆ೦ಟಿ ನಿನ್ನೆ ರಾತ್ರೀನೇ ತಿರಿಗಿ ಬ೦ದುಬಿಟ್ಟಳು.'ನೀವು ಮಲಗಿದ್ದಿರಿ ಅ೦ತ ಕಾಣಸ್ತದ."