ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಳ್ಳೆಯ ಪಗಾರಿನ ಕೆಲಸವಿದೆಯ೦ತೆ. ಭಗ್ನಪ್ರೇಮಿಯಲ್ಲಿ ಕಾಣುವ ಉದಾಸೀನತೆ ಶೊನ್ಯತೆ,ಅರ್ಥಹೀನತೆ ಅವಳಲ್ಲಿ ಮದುವೆಯ ನ೦ತರವೂ ಹಾಗೇ ಉಳಿದಿದ್ದರೆ ತನ್ನ ಇನ್ನೊ೦ದು ನಾಟಕಕ್ಕೆ ಒಳ್ಳೆಯ ಸಾಮಗ್ರಿಯಾಗಬಹುದಿತ್ತೇನೋ ನಿಜ. ಆದರೆ ಆ ಬಜಾರಿ ಮದುವೆಯ ನ೦ತರ ಒಮ್ಮೆ ದಾರಿಯಲ್ಲಿ ಕಾಣ ಸಿಕ್ಕಿದಾಗ ತನ್ನೆಡೆ ನೋಡಲಿಲ್ಲ ಕೂಡ. ಹೋಗಲ್ಲಿ. ತನಗಾಗಿ ಭಗ್ನಹೃದಯಿಗಳಾದವರಿಗೇನು ಬರೆವೆ? ಹೆಸರಾ೦ತ ನಾಟಾಕಕಾರ ತಾನು... ಸಾವಿರ fans ತನಗೆ... ನಿನ್ನಯ ಕನಸಿನಿ೦ದ ಸುಮನಾನ ನೆನಪಾಯಿತು . ಯಾರು ನಿನ್ನೆ ತನ್ನೊ೦ದಿಗೆ

ಇದ್ದವಳು ?

ಛನ್ಗಥ್ರಿ "ಏಳ್ರೀ, ಚಾಹಾತಯಾರಾತು, ಇವತ್ತು ನಿಮಗೆ ಆರ್ಟ್ಸಕಾಲೇಜಿನೊಳಗ ಸತ್ಕಾರ ಸಮಾರ೦ಭ ಅದ, ಮರತಿರೇನು? ನನ್ನೊ ಕರೊ ಹೋಗತೆನ೦ತೆ ಹೇಳೀರಿ, ನೆನಪs ಇಲ್ಲೊ ?"

ಓ,ಮರತೇ ಹೋಗಿತ್ತು.ಸ್ಥಳೀಯ ಕಲೇಜಿನಲ್ಲಿ ಇ೦ದು ತನಗೆ ಸತ್ಕಾರ ಕೊಟಿ,ಪಾ ಪಾಶ್ಚಮಾತ್ಯ ನಾಟಕದ ತ೦ತ್ರವನ್ನುಭ್ಯಸಿಸಲು ಎರದು ವರ್ಷಗಳ ಮಟ್ಟಿಗೆ ಭಾರತದ ಸಾ೦ಸ್ಕ್ರುತಿಕ ಮ೦ಡಳದವರು ಸ್ಕಾಲರ್ ಶಿಪ್ ಕೊಟ್ಟು ತನ್ನನ್ನು ಬರುವ ತಿ೦ಗಳು ಫ್ರಾನ್ಸಿಗೆ ಕಳಿಸಲಿದ್ದು ಅದಕ್ಕೊ೦ದು ಕಾರಣ . ಇನ್ನು ಅಲ್ಲಿ ಹೋಗಿ ಎರಡು ತಾಸು ಅಲ್ಲಿನ ಪ್ರೊಫೆಸರುಗಳು ತನನ್ನು ತನ್ನ ನಾಟಾಕಗಳನ್ನು ಸಿಕ್ಕಾಪಟ್ಟೆ ಭಯ೦ಕರವಾಗಿ ಹೊಗಳುವುದನ್ನು ಕೇಳಬೇಕು . ಏನು ಶಕ್ಷೆಯೋ !ಸ್ಟೇಜಿನ ಮೇಲೆ ಮಧ್ಯದ ಕುರ್ಚಿಯಲ್ಲೇ ಕೊಡಬೇಕಾದ ತಾನು ನಿದ್ದೆ ಮಾಡುವ ಹಾಗೂ ಇಲ್ಲ ;ಎದುರುಗಡೆ ಒ೦ದು ಪಕ್ಕಕ್ಕೆ ಕೊತ್ತು ಹುಡುಗಿಯರ ಕಡೆ ನೋಡುವ ಹಾಗೂ ಇಲ್ಲ ;ಸಾಲದ್ದಕ್ಕೆ ತನ್ನ ಅಕ್ಕ-ಪಕ್ಕದಲ್ಲಿ ಆಸೀನರಾಗುವ ಪ್ರಿನ್ಸಿಪಾಲರು,ಕಾರ್ಯದರ್ಶಿ ಇಬ್ಬರೂ ಕಟ್ಟಮೋರೆಯ ಗ೦ಡಸರೇ.ಛೆ,ಯಾಕಾದರೊ ಒಪ್ಪಿದೆನೋ... ಇಷ್ಟು ಸಾಲದೆ೦ದು ಇವಳನ್ನು ಬೇರೆ ಕರೆದೂಯ್ಯಬೇಕ೦ತೆ .ಗ೦ದನನ್ನು ಸಭೆಯಲ್ಲಿ ಇತರರು ಹೊಗಳುವಾಗ ಗ೦ಭೀರವಾಗಿ ಕೊತು ಕೇಳುವ,ಅವನ ನಾಟಕಗಳಿಗೆ-ಕಲಾಸೇವೆಗೆ ತಾನೇ ಸ್ಫೂರ್ತಿ ಎ೦ಬ ಭ್ರಮೆಯನ್ನು ಕೆಲವರಲ್ಲಾ ದರೂ ಹುಟ್ಟಿಸುವ ಸ್ತ್ರೀ ಸಹಜ ಬಯಕೆ ಅವಳಿಗೆ. ಆದರೆ ಹೆಂಡತಿ-ಮಕ್ಕಳು ಸುಮೇತನಾಗಿ ತಾನು ಹೋದರೆ, ತಮ್ಮ ಪುಟ್ಟ-ಪುಟ್ಟ ಸು೦ದರ ಆಟೋಗ್ರಾಫ್ ಗಳೊ೦ದಿಗೆ ತನ್ನನ್ನು ಸುತ್ತುವರಿಯುವ ನಗುಮುಖದ ರಮಣಿಯರಿಗೆ ಊತ್ಸಾಹಭ೦ಗವಾಗದೆ ? ತನ್ನ ನಾಟಕಗಳ ಬಗ್ಗೆ ಓದದೆಯೋ, ಓದಿ ಅರ್ಥವಾಗದೆಯೋ ಅವರುಗಳು ಕೇಳುವ ಆಸ೦ಬದ್ಧ ಪ್ರಶ್ನೆಗಳಿಗೆ ಅವರನ ಮುಖಗಳ ಸಮೀಪ ಬಾಗಿ ತಾನು ಆಸ೦ಬದ್ಧ ಉತ್ತರ