೪೭೪ ನಡೆದದ್ದೇ ದಾರಿ
ಇರಲಾರದು. ಅವಳ ಸಹಾನುಭೂತಿಯಿಂದಲೇ ಅಲ್ಲವೇ ತನಗೆ ಸ್ವಪ್ನಾ ದೇಶಪಾಂಡೆಯಿಂದಾದ ಅವಮಾನ ಮರೆತುಬಿಡುವುದು ಸಾಧ್ಯವಾದದ್ದು? ಅದ್ಬುತ ಹುಡುಗಿ ಸ್ವಪ್ನಾ. ಅವಳ ಕಣ್ನಿಗೆ ತನ್ನ ಒಳಗಿನದ್ದೆಲ್ಲ ಕಾಣುತ್ತಿತ್ತು.ಯಾರಿಗೂ ಕಾಣಲಾರದ್ದು, ತಾನು ಸಹ ತನ್ನಲ್ಲಿ ಇಲ್ಲವೇ ಇಲ್ಲವೆಂದು ದೃಢವಾಗಿ ನಂಬಿದ್ದು,ಅವಳಿಗೆ ಕಾಣುತ್ತಿತ್ತು. ಅಂತೆಯೇ ಅವಳೊಂದಿಗಿನ ತನ್ನ ನಾಟಕ ಅಯಶಸ್ವಿಯಾಯಿತು. ತನ್ನ ಮೊದಲ ಸೋಲು ಅದು. ಹೌದು; ಬಿದ್ದಿದ್ದ ತಾನು ಝಾಡಿಸಿಕೊಂಡು ಎದ್ದನಂತರ ಎದುರಿಸಬೇಕಾಗಿ ಬಂದಿದ್ದ ಮೊದಲ ಸೋಲು.ಅದರೇನೀಗ? ಅದರ ನಾಮನಿಶಾನೆಯೂ ಇಲ್ಲ ತನ್ನ
ನೆನಪಿನಲ್ಲಿ. ಅವಳೊಂದಿಗೇ ಧೂಳಾಗಿ ಹೋಯಿತು ಅದೆಲ್ಲ..."ನನಗ ನಿನ್ನ ಮರೀಲಿಕ್ಕೆ ಸಾಧ್ಯನs ಇಲ್ಲ ಸ್ವಪ್ನಾ, ದೇವರಾಣಿ",ಎಂದಿದ್ದಿತ್ತು ತಾನೊಮ್ಮೆ ನಶೆಯಲ್ಲೆದ್ದಾಗ.ಹ್ಹ, ಮನುಷ್ಯರು ತಮ್ಮ ಭಾವನೆಗಳ ಶಾಶ್ವತತೆಯ ಬಗೆಗೆ ಆಣೆ ಪ್ರಮಾಣ ಮಾಡುತ್ತಿರುವಾಗ ವಿಧಿ ದೂರದಿಂದ ಅಣಕಿಸಿ ನಗುತ್ತಿರಬೇಕು...ಎಷ್ಟು ಕಾಳಜಿಪೂವ೯ಕ,ಎಷ್ಟು, Systematic ಆಗಿ ಪ್ರಯತ್ನಿಸಿದ್ದೆ ತಾನು ಅವಳನ್ನು ಒಲಿಸಿಕೊಳ್ಳಲು!ಯಾರೂ ತನಗಿಷ್ಟು ಶ್ರಮ ಕೊಟ್ಟಿರಲಿಲ್ಲ.ಎಷ್ಟೋ ಸಲ ಅವಳೊಂದಿಗಿದ್ದಾಗ ತಾನೂ ನಿಜವಾಗಿಯೂ ಈ ಪ್ರೀತಿ-ಪ್ರೀತಿಯೆಂದು ಎಲ್ಲರೂ ಹೊಡೆದುಕೊಳ್ಳುತ್ತಾರಲ್ಲ ಆ ಜಾಲದಲ್ಲಿ ಸಿಕ್ಕಿರುವೆನೇನೋ ಎಂಬ ಭ್ರಮೆಯಾಗಿತ್ತು ತನಗೆ. ತನ್ನ ಪ್ರಯತ್ನ ಸಫಲವಾಗುವ ಸ್ಟೇಜು ಬಂದಾಗಷ್ಟೆ ತನಗೆ ಎಚ್ಚರಾದದ್ದು, ತನ್ನ ಉದ್ದೇಶದ ಅರಿವಾದದ್ದು. ಪ್ರೀತಿಯ ಸರಳದಾರಿ ಮೂಖ೯ರಿಗಷ್ಟೆ ಹೇಳಿದ್ದು. ನೂರಾರು ಕಂತ್ರಾಟಗಳಿಂದೊಡಗೂಡಿರಬೇಕಾದ, ಒಂದಿಲ್ಲೊಂದು ಭಾನಗಡಿ ನಡೆದಿರಬೇಕಾದ ನಾಟಕಕಾರನಿಗೆ ಒಪ್ಪುವ ಜೇವನವಾಗಬೇಕು ತನ್ನದು.ಸ್ವಪ್ನಾಳಂಥ ಹುಡಗಿಯ ಹೃದಯ ಒಡೆವುದೆಂದರೆ ಎಂಥ ಸಾಹಸೀ ಕೆಲಸ! ಇದನ್ನಾಧರಿಸಿ ಬರೆಯುವ ನಾಟಕ ಇನ್ನೆಷ್ಟು ಇಂಟರೆಸ್ಟಿಂಗ್ ಆದೀತು!..ಆದರೆ ಛೆ, ತನ್ನ ಕಲ್ಪನೆಗಳನ್ನೆಲ್ಲ ತಲೆಕೆಳಗು ಮಾಡುದ್ದಳು ಆಕೆ.ತನ್ನ ಒಳಗೆ ಕೈ ಹಾಕಿ ಅಲ್ಲಿನ ರಾಡಿಯನು ಹೀಚಿ ಹೊರತೆಗೆದು ತನ್ನ ಮುಖಕ್ಕೆ ಎರಚಿದ್ದಳು.ಅದೆಲ್ಲ ನೆನಪಾದರೆ ಪಾಪ-ಪುಣ್ಯ,ದೇವರು-ಪರಲೋಕ ಮುಂತಾದ ನಾನ್ ಸೆನ್ಸ್ ಬಗ್ಗೆ ವಿಚಾರ ಬರುತ್ತವೆ:ತಲೆ ಕೆಡಿಸುತ್ತವೆ...ಇದು ತನಗೆ ಹೇಳಿದ್ದಲ್ಲ. ಹೋಗಲಿ, ಆ ನೆನಪೇ ಬೇಡ.ಸ್ವಪ್ನಾಸ್ವಪ್ನವಾಗಿ ಕರಗಿ ಹೋಗಲಿ. ತನ್ನ ಒಳಗಿನ ಕತ್ತಲು ತುಂಬಿದ ಹೊಲಸುನಾರುವ ಗಟಾರವನ್ನು ಕಂಡವಳ,ತನ್ನ ವತ೯ನೆಯನ್ನು ಖಂಡಿಸಿ ದೂರವದಳ,ತನ್ನ ವತ೯ನೆಯಿಂದಾಗಿ ಹೃದಯ ಒಡೆದುಕೊಳ್ಳಲಾರದವಳ, ತನ್ನ ನೆನಪಿನಲ್ಲಿ ಕಣೀರಿಡದವಳ ಬಗ್ಗೆ ವಿಚಾರ ಮಾಡುವುದೇ ಬೇಡ...