ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಇನ್ನಷ್ಟು ಕತೆಗಳು /ದೆವ್ವ ೪೭೫
"ಬರ್ರಿ-ಬರ್ರಿ,ನಮಸ್ಕಾರ-ನಮಸ್ಕಾರ." -ಇಷ್ಟಗಲ ಬಾಯ್ದೆರೆದು ಸ್ವಾಗತಿಸಿದ ಬೋಳುತಲೆಯ ಕಾಯ೯ದಶಿ೯. ಅವನ ಹಿಂದೆ ವೋಟು ಜಡೆಯ ಮೊಂಡ ಮೂಗಿನ ದಪ್ಪಗಿನ ಹುಡಗಿ. "ಇವರು ನಮ್ಮ ಕಾಲೇಜಿನ ಲೇಡಿಸ್ ರಿಪ್ರೆಜೆಂಟೇಟಿವ್ಹ್ ಮಿಸ್ ಗೋಖಲೆ. ಇವರು ನಮ್ಮ ಇಂದಿನ ಅತಿಥಿಗಳು,ಪ್ರಸಿದ್ದ ನಾಟಕಕಾರರು ಶ್ರೀಮಾನ್-" ಪಕ್ಕದಲ್ಲಿ ಹೆಂಡತಿಯಿರದಿದ್ದರೆ ಮಿಸ್ ಗೋಖಲೆಯ ಕೈ ಕುಲುಕಬಹುದಾಗಿತ್ತು...ಯಾವ ಗಡಿಬಿಡಿಯೂ ಇಲ್ಲದೆ ನಿಧಾನವಾಗಿ ಸ್ವಾಗತ ಭಾಷಣಮಾಡಿದ ಆ ಟೈಟ್ ಪ್ಯಾಂಟಿನ ಕಾಯ೯ದಶಿ೯. ತನಗೋ ಆಗಲೇ ಬೇಸರ ಬರಲು ಸುರುವಾಗಿದೆ.ಮಿಸ್ ಗೋಖಲೆ ಸ್ವಲ್ಪ ದೂರದಲ್ಲಿ ಕೂತು ಲಕ್ಷ್ಯಗೊಟ್ಟು ಭಾಷಣ ಕೇಳುತ್ತಿದ್ದಾಳೆ. ಈ ಹುಡುಗಿಗೆ ತನ್ನ ನಾಟಕಗಳ ಬಗ್ಗೆ ಪ್ರಾಮಾಣಿಕ ಆಸ್ಥೆಯಿದ್ದಂತಿದೆ... ನೋಡಬೇಕು, ಪ್ರಯತ್ನ-ಪ್ರಯತ್ನ ಮಾಡಬೇಕು... ತನ್ನ ನಾಟಕಗಳನ್ನು ಓದಿ ಮೆಚ್ಚಿ ತನಗೆ ಪತ್ರ ಬರೆದು,ಆ ಸ್ನೇಹ ಇನ್ನೂ ಮುಂದುವರಿದಾಗ ತನ್ನನ್ನು ಕಾಣಲೆಂದು ದೂರದ ಊರಿನಿಂದ ಹಿಂದೊಮ್ಮೆ ಬಂದಿದ್ದಳು ಒಬ್ಬ ಶ್ರೀಮಂತಕುಮಾರಿ-ಅವಳ ಹೆಸರು ಬಹುಶಃ ಶಾಂತಾನೋ ಎಂದೇನೋ ಇತ್ತು. ಅವಳಿಗೆ ಸಾಹಿತ್ಯದ ಹುಚ್ಚು. ತನ್ನ ನಾಟಕಗಳಿಗೆ ಇಲ್ಲದ ಅಥ೯ ಹುಡುಕಲೆತ್ನಿಸುತ್ತ ಕೇಳಿದಳು,'ನೀವು ಯಾರನ್ನೋ ಪ್ರೀತಿಮಾಡಿ ನಿರಾಶರಾಗಿರಬೇಕು,ಅಲೇನ್ರಿ?' ಇವಳ ತಲೆ, ಸುಮ್ಮನೆ ತನ್ನೊಂದಿಗೆ ಎರಡು ದಿನ ಅಲ್ಲಿ-ಇಲ್ಲಿ ತಿರುಗಾಡಿ ಮಜಾ ಮಾಡಿ ಹೊರಟು ಹೋಗುವುದು ಬಿಟ್ಟು ತಲೆಯಲ್ಲ ಹರಟುತ್ತಿದ್ದಾಳಲ್ಲ, ಎಂದು ಸಿಟ್ಟು ಬಂದಿತ್ತು. ಆದರೂ ತಡೆಹಿಡಿದಿದ್ದ. ಹುಡುಗಿ ಚೂಟಿಯಾಗಿದ್ದಳು.ಹೊಟೆಲ್ ಅಂಜೀಮಾದಲ್ಲಿ ಅವಳ ರೊಕ್ಕದಿಂದಲೇ ಕಾಫಿ ಕುಡಿದು, ಅವಳ ಕಾರಿನಲ್ಲೇ ಊರಾಚೆಯ ಗುಡ್ಡದ ಮೇಲಿನ ಈಶ್ವರ ಗುಡಿಯ ಕಡೆ ಹೋಗಿ ಮಾವಿನ ಗಿಡದ ನೆರಳಲ್ಲಿ ಅವಳ ತೊಡೆಯ ಮೇಲೆಯೇ ತಲೆಯಿರಿಸಿ ಮಲಗಿ ಭಾವಪೂರಿತ ಧ್ವನಿಯಲ್ಲಿ ಹೇಳಿದ್ದ ತಾನು- ಹಿಂದೆ ಕಾಲೇಜಿನಲ್ಲಿ ತಾನು ಪ್ರೇಮಿಸಿದ್ದ ಮಹಾಕಥೆಯನ್ನು, ಪವ೯-ಪವ೯ವಾಗಿ, ತನಗೆ ಕೈಕೊಟ್ಟ ಹುಡಗಿಯರನ್ನು ಮಹಾತ್ಯಾಗಿ-ನಿಸ್ವಾಥ೯ ಪ್ರೇಮಿ-ಯೋಗಿನಿ ಎಂದೆಲ್ಲ ಸಾಧ್ಯವಾದ ಮಟ್ಟಿಗೆ ಚಿತ್ರಿಸುತ್ತ;ಎಲ್ಲವೂ ತನ್ನ wishful thinking ಎಂಬ ಅರಿವು ಕುಟುಕುತ್ತಿದ್ದರೂ ಲೆಕ್ಕಿಸದೇ. 'ಇವರನ್ನು ಫ್ರಾನ್ಸಿಗೆ ಕಳಸಲಿರುವುದು ನಮಗೆಲ್ಲ ಭಾರಿ ಅಭಿಮಾನದ